ಮನೋರಂಜನೆ

ಪಡ್ಡೆಹುಲಿಗೆ ಪವರ್ ಸ್ಟಾರ್ ಸಾಥ್!

ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿರುವ ಪಡ್ಡೆಹುಲಿ ಇತ್ತೀಚೆಗಷ್ಟೇ ಮುಹೂರ್ತ ಆಚರಿಸಿಕೊಂಡಿದೆ. ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರ ತಂಡಕ್ಕೀಗ ಅಕ್ಷರಶಃ ಪವರ್‌ಫುಲ್ ಸ್ಫೂರ್ತಿಯೊಂದು ಸಿಕ್ಕಂತಾಗಿದೆ!

 

 

ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪುನೀತ್ ರಾಜ್‌ಕುಮಾರ್ ಸಾರಥ್ಯದ ಪಿಆರ್‌ಕೆ ಆಡಿಯೋ ಕಂಪೆನಿ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಈ ಚಿತ್ರಕ್ಕೆ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್ ಕುಮಾರ್ ತಮ್ಮ ಸಂಸ್ಥೆಯ ಮೂಲಕವೇ ಆಡಿಯೋ ಹಕ್ಕು ಖರೀದಿಸುವ ಮೂಲಕ ಬೆಂಬಲ ನೀಡಿದ್ದಾರೆ.

 

 

ಪ್ರತಿಯೊಂದು ವಿಚಾರದಲ್ಲಿಯೂ ಈ ಚಿತ್ರವನ್ನು ಭಿನ್ನವಾಗಿಸುವ ಪ್ರಯತ್ನದಲ್ಲಿರುವ ನಿರ್ದೇಶಕ ಗುರು ದೇಶಪಾಂಡೆ ಹಾಡುಗಳ ಬಗೆಗೂ ವಿಶೇಷ ಗಮನ ನೀಡಿದ್ದಾರೆ. ಅಂದಹಾಗೆ ಈ ಹಿಂದೆ ಕಿರಿಕ್ ಪಾರ್ಟಿ ಹಾಡುಗಳ ಮೂಲಕ ಹೊಸಾ ಸಂಚಲನ ಮೂಡಿಸಿದ್ದ ಅಜನೀಶ್ ಲೋಕನಾಥ್ ನಿರ್ದೇಶನದಲ್ಲಿ ಈ ಚಿತ್ರದ ಹಾಡುಗಳು ಮೂಡಿ ಬರಲಿವೆ. ಈಗಾಗಲೇ ಅಜನೀಶ್ ಹಾಡುಗಳನ್ನು ರೂಪಿಸೋ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

 

 

ಪಕ್ಕಾ ಯೂಥ್‌ಫುಲ್ ಚಿತ್ರವಾದ ಪಡ್ಡೆಹುಲಿಯ ಟೈಟಲ್ ಸಾಂಗಿನ ಮೇಕಿಂಗ್ ವೀಡಿಯೋ ಇದೇ ಶುಕ್ರವಾರ ಅನಾವರಣಗೊಳ್ಳಲಿದೆ. ತೇಜಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಎಂ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆರಂಭಿಕ ಉತ್ತೇಜನದಿಂದ ಚಿತ್ರತಂಡ ಮತ್ತಷ್ಟು ಹುರುಪು ತುಂಬಿಕೊಂಡಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top