ಸಿನಿಮಾ

ದೇಶ್ಯಾದ್ಯಂತ ಟಗರು ಚಿತ್ರಕ್ಕೆ ಭಾರಿ ಬೇಡಿಕೆ. ಚಿತ್ರಕ್ಕೆ ಇಂಗ್ಲಿಷ್ ಸಬ್ ಟೈಟಲ್

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸೂರಿ ಮತ್ತು ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ `ಟಗರು’ ಭರಪೂರ ಆರ್ಭಟದೊಂದಿಗೇ ಥೇಟರಿಗೆ ಲಗ್ಗೆಯಿಟ್ಟಿದೆ. ಈ ಚಿತ್ರ ಹಂತ ಹಂತವಾಗಿ ಕುತೂಹಲದ ಜ್ವರವೇರಿಸಿಕೊಂಡು ಸಾಗಿ ಬಂದಿತ್ತಲ್ಲಾ? ಅದರಿಂದಾಗಿಯೇ ಹುಟ್ಟಿಕೊಂಡಿದ್ದ ಅಗಾಧ ನಿರೀಕ್ಷೆಗಳೆಲ್ಲವೂ ಪ್ರೇಕ್ಷಕರ ಶಿಳ್ಳೆ, ಕೇಕೆ ಮತ್ತು ತೃಪ್ತಿಯ ಮಂದಹಾಸದ ಮೂಲಕ ಸಾರ್ಥಕ್ಯ ಪಡೆದುಕೊಂಡಿದೆ. ಅಷ್ಟರ ಮಟ್ಟಿಗೆ ಟಗರಿನ ಪೊಗರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ!

 

 

ಖ್ಯಾತಿ ಗಳಿಸುತ್ತಿರುವ ಟಗರು ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಪರಭಾಷೆಯ ವೀಕ್ಷಕರು ಚಿತ್ರವನ್ನು ನೋಡಲು ಕ್ಯೂ ಹಚ್ಚಿದ್ದಾರೆ. ಇವರಿಗೆ ಅನುಕೂಲ ಮಾಡಿಕೊಳ್ಳಲು ಚಿತ್ರಕ್ಕೆ ಇಂಗ್ಲಿಷ್ ಸಬ್‌ ಟೈಟಲ್ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ. ನಾಳೆಯಿಂದ ಎಲ್ಲ ಥೇಟರ್ ನಲ್ಲಿ ಇಂಗ್ಲಿಷ್ ಸಬ್ ಟೈಟಲ್ ಬಳಕೆ ಆಗಲಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಚಿತ್ರ ಕಲಾವಿದ ಧನಂಜಯ ಶುಕ್ರವಾರದಿಂದ ಟಗರು ಚಿತ್ರದಲ್ಲಿ ಸಬ್ ಟೈಟಲ್ ಬರುವುದಾಗಿ ತಿಳಿಸಿದ್ದಾರೆ.

 

ಚಿತ್ರದಲ್ಲಿ ಶಿವಣ್ಣನನ್ನು ಇದುವರೆಗಿನ ಅಷ್ಟೂ ಪಾತ್ರಗಳಿಗಿಂತ ಪಕ್ಕಾ ಭಿನ್ನವಾಗಿ ಅನಾವರಣಗೊಳಿಸಲಾಗಿದೆ. ಯಥಾ ಪ್ರಕಾರ ಆ ಭಿನ್ನ ಪಾತ್ರವನ್ನು ನುಂಗಿಕೊಂಡು ನಟಿಸಿರೋ ಶಿವಣ್ಣ ಅಭಿಮಾನದಾಚೆಗೂ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಇಡೀ ಚಿತ್ರದಲ್ಲಿ ಮುಖ್ಯ ಆಕರ್ಷಣೆ ಮತ್ತು ಅಚ್ಚರಿಯಂತೆ ಕಾಣಿಸೋದು ಧನಂಜಯ್ ನಿರ್ವಹಿಸಿರೋ ನೆಗೆಟಿವ್ ರೋಲ್. ನಿಜವಾಗಿಯೂ ಧನಂಜಯ್ ಅವರ ಅಸಲೀ ನಟನಾ ಶಕ್ತಿ ಈ ಪಾತ್ರದ ಮೂಲಕ ಸ್ಪಷ್ಟವಾಗಿ ಅನಾವರಣಗೊಂಡಿದೆ. ಈ ಪಾತ್ರದ ಮೂಲಕವೇ ಧನಂಜಯ್ ವೃತ್ತಿ ಜೀವನಕ್ಕೆ ಹೊಸಾ ತಿರುವು, ಓಘ ಸಿಗುವ ಎಲ್ಲ ಲಕ್ಷಣಗಳೂ ಇವೆ. ರಂಗಭೂಮಿ ನಟ ಸಚ್ಚು ಇನ್ನು ಸಿನಿಮಾರಂಗದಲ್ಲಿ ಫುಲ್ ಬ್ಯುಸಿಯಾಗೋದು ಪಕ್ಕಾ.

 

 

ಇನ್ನು ಇಡೀ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯೋದು ಸೂರಿ ಅವರ ಪಾತ್ರ ಕಟ್ಟುವ ಸೂಕ್ಷ್ಮವಂತಿಕೆ. ಮುಖ್ಯ ಖಳ ಪಾತ್ರವಾದ ಡಾಲಿ, ಕವಿತೆ ಬರೆಯುತ್ತಲೇ ಅಚಾನಕ್ಕಾಗಿ ರೌಡಿಸಂಗೆ ಬಂದು ಒಬ್ಬಳೇ ಹುಡುಗಿಯನ್ನು ಆರಾಧಿಸುವ ಚಿಟ್ಟೆ, ಕೊಳಕು ಮತ್ತು ಕ್ರೌರ್ಯದ ಸಂಗಮದಂತಿರೋ ಕಾಕ್ರೋಚ್ ಮುಂತಾದ ಪಾತ್ರಗಳನ್ನು ಮಾತ್ರವಲ್ಲದೆ ಪ್ರತೀ ಕ್ಯಾರೆಕ್ಟರುಗಳನ್ನೂ ನೆನಪಲ್ಲುಳಿಯುವಂತೆ ರೂಪಿಸಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top