ಮನೋರಂಜನೆ

ಟಗರು ಸುದೀಪ್ ಶಿವಣ್ಣನಿಗೆ ಹೇಳಿದ್ದೇನು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಟಗರು ಚಿತ್ರದ ಯಶಸ್ಸಿನ ಓಟ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಟಗರಿನ ಪೊಗರು ಎಗ್ಗಿಲ್ಲದೆ ನಡೆಯುತ್ತಿದೆ. ಚಿತ್ರರಂಗದ ಇತರೇ ನಟ ನಟಿಯರೂ ಈ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡಿ ಈ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಬಿಡುಗಡೆಯಾದ ವಾರದೊಪ್ಪತ್ತಿನಲ್ಲೇ ಈ ಚಿತ್ರ ನೋಡಿದ ಸುದೀಪ್ ಖುದ್ದು ಶಿವಣ್ಣನಿಗೇ ಫೋನಾಯಿಸಿ ಹೇಳಿರೋ ವಿಚಾರಗಳು ನಿಜಕ್ಕೂ ಇಂಟರೆಸ್ಟಿಂಗ್!

 

 

ಟಗರು ಚಿತ್ರ ಬಿಡುಗಡೆಯಾದೇಟಿಗೆ ಬಿಡುವು ಮಾಡಿಕೊಂಡ ಕಿಚ್ಚಾ ಸುದೀಪ್ ಚಿತ್ರವನ್ನು ವೀಕ್ಷಿಸಿದ್ದಾರಂತೆ. ಆವತ್ತೇ ಶಿವಣ್ಣನಿಗೆ ಫೋನಾಯಿಸಿ ಮಾತಾಡಿದ ಸುದೀಪ್ ಇಡೀ ಚಿತ್ರವನ್ನು ಮೆಚ್ಚಿಕೊಳ್ಳುವ ಜೊತೆಗೆ, ‘ಅಂಥಾ ಎನರ್ಜಿ ನಿಮಗೆಲ್ಲಿಂದ ಬರುತ್ತೆ. ಆ ಸೀಕ್ರೆಟನ್ನ ನಮಗೂ ಹೇಳಿ’ ಅಂದಿದ್ದಾರಂತೆ!

ಒಟ್ಟಾರೆಯಾಗಿ ಸುದೀಪ್ ಟಗರು ಚಿತ್ರದ ಕದರಿಗೆ ಮನಸೋತಿದ್ದಾರೆ. ಹೀಗೆ ನಟರು ಪರಸ್ಪರರ ಚಿತ್ರಗಳನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ಸಾಮಾನ್ಯವಾಗಿ ಸುದೀಪ್ ಬಿಡುಗಡೆಯಾದ ಬಹುತೇಕ ಚಿತ್ರಗಳನ್ನು ನೋಡುತ್ತಾರೆ. ಸಂಬಂಧಿಸಿದವರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿ ಬೆಂಬಲಿಸುತ್ತಾರೆ..

 

 

ಅಂದಹಾಗೆ ಶಿವಣ್ಣ ಮತ್ತ ಸುದೀಪ್ ಮೊದಲ ಸಲ ಒಟ್ಟಾಗಿ ನಟಿಸಿರುವ ದಿ ವಿಲನ್ ಚಿತ್ರ ತೆರೆ ಕಾಣುವ ದಿನಗಳು ಹತ್ತಿರದಲ್ಲಿವೆ. ಈ ಚಿತ್ರದಲ್ಲಿ ಸುದೀಪ್ ಹಾಗೂ ಶಿವಣ್ಣ ಎಂಥಾ ಪಾತ್ರ ಮಾಡಿದ್ದಾರೆಂಬ ಕುತೂಹಲ ಇಬ್ಬರ ಅಭಿಮಾನಿಗಳಲ್ಲಿಯೂ ಇದ್ದೇ ಇದೆ. ಆದರೆ ನಿರ್ದೇಶಕ ಪ್ರೇಮ್ ಅದೇಕೋ ತಡಬಡಾಯಿಸುತ್ತಿದ್ದಾರಷ್ಟೆ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top