ಮನೋರಂಜನೆ

ವಿಷ್ಣು ಮತ್ತು ಸುದೀಪ್ ಕುರಿತು ನಟಿ ಅನು ಪ್ರಭಾಕರ್ ಕಂಡ ಈ ಕನಸು ನನಸಾಗಲು ಇಂದಿಗೂ ಸಾಧ್ಯವಿಲ್ಲ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಿದ್ರೆ ಮಾಡುವಾಗ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕನಸು ಬೀಳುವುದು ಮಾಮೂಲು., ಕೆಲವೊಮ್ಮೆ ನಾವು ಕಾಣುವ ಕನಸುಗಳು ಭಾವನಾತ್ಮಕವಾಗಿ ನಮಗೆ ತುಂಬಾ ಸ್ಪೆಷಲ್ಲಾಗಿರುತ್ತವೆ.. ಈಗ ಅದೇ ರೀತಿಯ ಸ್ಪೆಷಲ್ ಕನಸೊಂದನ್ನು ತಮ್ಮ ನಿದ್ರೆಯಲ್ಲಿ ನಟಿ ಅನು ಪ್ರಭಾಕರ್ ಕಂಡಿದ್ದಾರೆ. ಅದೂ ಕೂಡ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಕಿಚ್ಚ ಸುದೀಪ್ ಬಗ್ಗೆ.

 

 

ಹಾಗಂತ ಸ್ವತಃ ಅನು ಪ್ರಭಾಕರ್ ಅವರೇ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದು ತಾವು ಕಂಡ ಈ ಕನಸು ನಿಜವಾಗಲೂ ಸಾಧ್ಯವೇ ಇಲ್ಲ ಎಂದು ಬರೆದುಕೊಂಡಿದ್ದಾರೆ.. ಅಷ್ಟಕ್ಕೂ ಆ ಕನಸು ಏನು ಅಂತೀರಾ? ಮುಂದೆ ಓದಿ.

ನೆನ್ನೆ ಬೆಳಿಗ್ಗೆ ಟ್ವೀಟ್ ನಾಡಿರುವ ಅನು ಪ್ರಭಾಕರ್, “ಕಿಚ್ಚ ಸುದೀಪ್… ಇಂದು ಮುಂಜಾನೆ ನಾನು ಅದ್ಭುತವಾದ ಸವಿ ಕನಸೊಂದನ್ನ ಕಂಡೆ. ನಾನು ಮತ್ತು ವಿಷ್ಣು ಸರ್ ಜೊತೆಯಲ್ಲಿ ಅಭಿನಯಿಸುತ್ತಿದ್ದೆವು ನಮ್ಮಿಬ್ಬರಿಗೆ ನೀನು ನಿರ್ದೇಶನ ಮಾಡುತ್ತಿದ್ದೆ.. ವಿಷ್ಣು ಸರ್ ಜೊತೆ ಕಾಲ ಕಳೆಯಲು ನಾನು ಮತ್ತು ನೀನು ತುಂಬಾ ಆಸೆ ಪಡುತ್ತಿದ್ದೆವು .. ನಾನು ಕಾಣದ ಈ ಕನಸು ನನಸಾಗಲು ಸಾಧ್ಯವೇ ಇಲ್ಲ. ಆದರೆ ನಿದ್ರೆಯಿಂದ ಎಚ್ಚರಗೊಂಡಾಗ, ಈ ಕನಸು ನನ್ನ ಮುಖದಲ್ಲಿ ದೊಡ್ಡ ನಗುವನ್ನು ತರಿಸಿತ್ತು” ಎಂದು ಬರೆದುಕೊಂಡಿದ್ದಾರೆ.

 

 

ಈ ಟ್ವೀಟ್ ಅನ್ನು ನೋಡಿ ಅನು ಪ್ರಭಾಕರ್ ಅವರಿಗೆ ಉತ್ತರ ನೀಡಿರುವ ನಟ ಸುದೀಪ್ “ಹೆಲೋ…. ನಿಮ್ಮ ಟ್ವೀಟ್ ನೋಡಿ ಸಂತೋಷವಾಗ್ತಿದೆ. ನೀವು ಮತ್ತು ವಿಷ್ಣು ಸರ್ ‘#73 ಶಾಂತಿ ನಿವಾಸ’ ಚಿತ್ರದಲ್ಲಿ ಒಂದೇ ಫ್ರೇಮ್ ನಲ್ಲಿದ್ರಿ. ಆದರೆ ಅದನ್ನ ಗ್ರೀನ್ ಮ್ಯಾಟ್ ನಲ್ಲಿ ಸ್ಚಿತ್ರೀಕರಿಸಲಾಗಿತ್ತು ಅಷ್ಟೇ. ತುಂಬಾ ಚಿಕ್ಕ ದೃಶ್ಯವೇ ಆಗಿದ್ದರು ಎಲ್ಲೋ ಒಂದು ಕಡೆ ನೀವು ಕಂಡಿರುವ ಕನಸು ನಿಜವಾಗಿದೆ., ನಿಮ್ಮನ್ನು ನಿರ್ದೇಶಿಸುವುದು ನನಗೆ ಯಾವಾಗಲೂ ಸಂತೋಷದಾಯಕವಾಗಿರುತ್ತದೆ” ಎಂದು ಬರೆದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top