ಸಿನಿಮಾ

‘ನನಗಿಷ್ಟ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾದರೂ ನೋಡಲು ನಾಯಕಿಯೇ ಬದುಕಿಲ್ಲ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ವಾರ ‘ನನಗಿಷ್ಟ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಆದರೆ ಚಿತ್ರವನ್ನು ವೀಕ್ಷಣೆ ಮಾಡಲು ನಾಯಕ ನಟಿಯೇ ಬದುಕಿಲ್ಲ. ಕಳೆದ ವರ್ಷ ಬೆಂಗಳೂರು ಹೊರವಲಯದ ನೆಲೆಮಂಗಲದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ‘ನನಗಿಷ್ಟ’ ಚಿತ್ರದ ನಟಿ ದುರಂತ ಸಾವವನಪ್ಪಿದ್ದರು.

 

 

ರಚನಾ ಗೌಡ ಅವರು ಮಹಾನದಿ’, `ತ್ರಿವೇಣಿ ಸಂಗಮ’ ಮುಂತಾದ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದರು ಅವರ ಅಭಿನಯಕ್ಕೆ ಪ್ರತಿಫಲ ಸಿಕ್ಕು ತಮ್ಮ ಮೊದಲ ಸಿನಿಮಾ ಆದ ‘ನನಗಿಷ್ಟ’ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದರು. ಆದರೆ ದುರಂತ ಇದೆ ಇವರ ಕೊನೆಯ ಚಿತ್ರವಾಯಿತು. ಚಿತ್ರ ಈಗ ಬಿಡುಗಡೆ ಆಗಿದೆ ಆದರೆ ನೋಡಲು ರಚಿತಾ ಅವರೇ ಇಲ್ಲದಿರುವುದು ನೋವಿನ ಸಂಗತಿ. ಚಿತ್ರರಂಗದಲ್ಲಿ ಇನ್ನು ಎತ್ತರಕ್ಕೆ ಬೆಳೆಯಬೇಕೆಂಬ ಮಹದಾಸೆ ಹೊಂದಿದ್ದ ರಚನಗೌಡ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು.

 

 

ಚಿತ್ರದಲ್ಲಿ ಅಶ್ವಿನ್ ದೇವಾಂಗ್ ನಾಯಕ ನಟರಾಗಿದ್ದಾರೆ, ರಚನಗೌಡ ರವರು ನಾಯಕಿಯಾಗಿ ಅಭಿನಯ ಮಾಡಿದ್ದಾರೆ. ರಾಜೇಶ್ ನಟರಂಗ, ಕರಿಸುಬ್ಬು, ತನುಜಾ, ಜಯಶ್ರೀ ಇನ್ನು ಹಲವಾರು ಕಲಾವಿದರು ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

 

 

ಶ್ರೀಲಕ್ಷ್ಮೀವೆಂಕಟೇಶ್ವರ ವಿಷನ್ಸ್ ಲಾಂಛನದಲ್ಲಿ ಯುವರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಧಾಕೃಷ್ಣ ಕೆ.ವಿ ಕಥೆ ಬರೆದಿರುವ ಪ್ರಿಯಾಂಕ ಉಪೇಂದ್ರ ಅಭಿನಯದ `ಪ್ರಿಯಾಂಕ’ ಚಿತ್ರ ನಿರ್ದೇಶನ ಮಾಡಿದ್ದ ದಿನೇಶ್ ಬಾಬು ಅವರು ಚಿತ್ರಕಥೆ, ಸಂಭಾಷಣೆ ಬರೆದು ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿದ್ದಾರೆ. ನಂದಿತ ರಾಕೇಶ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿನಿಲ್ ಮೆನನ್ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಹಂಸಲೇಖ ಅವರು ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಕುಮಾರ್ ಕೋಟೆಕೊಪ್ಪ ರವರ ಸಂಕಲನವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top