ಮನೋರಂಜನೆ

ಮಧ್ಯ ರಾತ್ರಿಯಲ್ಲೇ ಸಂಚಲನ ಸೃಷ್ಟಿಸಿದ ನಟಸಾರ್ವಭೌಮನ ಝಲಕ್..

ಇವತ್ತು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಗೆ 43ನೇ ವರ್ಷದ ಜನುಮದಿನದ ಸಂಭ್ರಮ ಹೀಗಾಗಿ ಮದ್ಯರಾತ್ರಿಯಿಂದಲೇ ಪುನೀತ್ ಅಭಿಮಾನಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಅಭಿಮಾನಿಗಳನ್ನು ಖುಷಿ ಪಡಿಸಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

 

 

ಇನ್ನು ಅಪ್ಪು ಹುಟ್ಟುಹಬ್ಬ ಪ್ರಯುಕ್ತ ಚಿತ್ರತಂಡ ರಾತ್ರಿ 12 ಗಂಟೆಗೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ `ನಟಸಾರ್ವಭೌಮ’ ಚಿತ್ರದ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ.. ರಿಲೀಸ್ ಆಗಿದ್ದು ಮಧ್ಯರಾತ್ರಿಯೇ ಆಗಿದ್ದರೂ ಯೂಟ್ಯೂಬ್ ನಲ್ಲಿ ಈ ಟೀಸರ್ ಸಂಚಲನ ಉಂಟುಮಾಡಿದೆ. ಮದ್ಯ ರಾತ್ರಿಯೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ಅನ್ನು ವೀಕ್ಷಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು ಟೀಸರ್ ಸಕತ್ ಸ್ಟೈಲಿಶ್ ಆಗಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

ಚಿತ್ರವನ್ನು ಶಾಸಕ ಮುನಿರತ್ನ ಅರ್ಪಿಸುತ್ತಿದ್ದು ಪವನ್ ಒಡೆಯರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಣವಿಕ್ರಮ ಸಿನಿಮಾದ ನಂತರ ಮತ್ತೆ ಒಂದಾಗಿದ್ದಾರೆ ಪುನೀತ್ ರಾಜ್‍ಕುಮಾರ್ ಮತ್ತು ಪವನ್ ಒಡೆಯರ್. ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿದ್ದು ಹಿರಿಯ ನಟಿ ಬಿ. ಸರೋಜಾದೇವಿ ಕೂಡ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ, ಇವರ ಜೊತೆ ಚಿಕ್ಕಣ್ಣ, ರವಿಶಂಕರ್, ಅಚ್ಚುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ಕೋಟಿಗೊಬ್ಬ ೨ ಖ್ಯಾತಿಯ ಡಿ.ಇಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top