ಮನೋರಂಜನೆ

ಓ ಪ್ರೇಮವೇ : ಕ್ರೇಜ಼ಿ ಗೆಲುವಿನ ಇತಿಹಾಸ ಮರುಕಳಿಸುತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮನೋಜ್ ನಾಯಕ ನಟನಾಗಿ ನಿರ್ದೇಶನವನ್ನೂ ಮಾಡಿರುವ ಚಿತ್ರ ಓ ಪ್ರೇಮವೇ. ಈಗಾಗಲೇ ಈ ಚಿತ್ರದ ಹಾಡುಗಳು ಸೂಪರ್ ಹಿಟ್ಟಾಗಿವೆ. ಈ ಹಾಡುಗಳ ಮಾಧುರ್ಯವೇ ಹದಿನೆಂಟು ವರ್ಷಗಳ ಹಿಂದಿನ ಗೆಲುವಿನ ಇತಿಹಾಸ ಮತ್ತೆ ಮರುಕಳಿಸುತ್ತಾ ಅಂತೊಂದು ನಿರೀಕ್ಷೆಯೂ ಹುಟ್ಟಿಕೊಂಡಿದೆ. ಇಂಥಾ ಓ ಪ್ರೇಮವೇ ಚಿತ್ರ ಬಿಡುಗಡೆಗೆ ಕೆಲವೇ ಘಂಟೆಗಳು ಮಾತ್ರ ಬಾಕಿ ಉಳಿದಿವೆ!

 

 

ಈಗ್ಗೆ ಹದಿನೆಂಟು ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಓ ಪ್ರೇಮವೇ ಚಿತ್ರ ತೆರೆ ಕಂಡಿತ್ತು. ಅದು ಆಗಿನ ಯುವ ಸಮುದಾಯವನ್ನು ಹುಚ್ಚೆಬ್ಬಿಸಿ ಎವರ್‌ಗ್ರೀನ್ ಹಿಟ್ ಚಿತ್ರವಾಗಿ ದಾಖಲಾಗಿತ್ತು. ಆ ಚಿತ್ರದ ಹಾಡುಗಳಂತೂ ಇಂದಿಗೂ ಗುನುಗಿಸಿಕೊಳ್ಳುತ್ತಿದೆ. ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರಿಂದ ಸ್ಪೂರ್ತಿಗೊಂಡಿದ್ದ ಮನೋಜ್ ತ್ರಿಕೋನ ಪ್ರೇಮ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಸ್ವತಃ ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ನಿಜ ಜೀವನದಲ್ಲಿ ಸಂಭವಿಸಿದ ಘಟನೆಯೊಂದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿ ಓ ಪ್ರೇಮವೇ ಚಿತ್ರದ ಕಥೆಯನ್ನು ರೂಪಿಸಲಾಗಿದೆ.

 

 

ಮೊಗ್ಗಿನ ಮನಸು ಚಿತ್ರದಲ್ಲಿ ನಟಿಸಿದ್ದ ಮನೋಜ್ ಕುಮಾರ್, ನಿಕ್ಕಿ ಗಲ್ರಾಣಿ ಹಾಗೂ ಅಪೂರ್ವ ಅವರನ್ನು ಒಳಗೊಂಡ ‘ಓ ಪ್ರೇಮವೇ’ ಸಿನಿಮಾ ಒಂದು ರೊಮ್ಯಾಂಟಿಕ್ ಲವ್ ಸೋರಿ. ಇಬ್ಬರು ನಾಯಕಿಯರ ನಡುವಿನ ಪ್ರೀತಿಯ ನವಿರಾದ ಕಥೆಯನ್ನು ಈ ಚಿತ್ರ ಒಳಗೊಂಡಿದೆಯಂತೆ. ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಪ್ರಶಾಂತ್ ಸಿದ್ದಿ ಹಾಗೂ ವಿಶೇಷ ಪಾತ್ರದಲ್ಲಿ ಹುಚ್ಚ ವೆಂಕಟ್ ಅಭಿನಯಿಸಿದ್ದಾರೆ.

ಜಯಂತ್ ಕಾಯ್ಕಿಣಿ, ಕವಿರಾಜ್, ಭರ್ಜರಿ ಚೇತನ್ ಗೀತ ಸಾಹಿತ್ಯಕ್ಕೆ ಸೋನು ನಿಗಂ, ಶ್ರೇಯ ಗೋಷಾಲ್, ವಿಜಯ ಪ್ರಕಾಷ್, ಟಿಪ್ಪು ಅವರು ಹಾಡಿದ್ದಾರೆ. ಈ ಚಿತ್ರದಲ್ಲಿ ಆರು ಹಾಡುಗಳಿದ್ದು ಎರಡು ಹಾಡುಗಳನ್ನು ಸ್ವಿಟ್ಜರ್ಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಛಾಯಾಗ್ರಾಹಕ ಕಿರಣ್ ಹಂಪಾಪುರ ಅವರ ಕ್ಯಾಮೆರಾ ಕೈಚಳಕವೂ ಗಮನ ಸೆಳೆದಿದೆ. ಕ್ಯಾಮೆರಾ ಕುಸುರಿ ಕೂಡಾ ಓ ಪ್ರೇಮವೇ ಚಿತ್ರದ ಹೈಲೈಟ್‌ಗಳಲ್ಲೊಂದು!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top