ಮನೋರಂಜನೆ

ಹೆಚ್​ಡಿಕೆ ಕನಸಿಗೆ ಕರ್ನಾಟಕಕ್ಕೆ ಪವರ್​ ಸ್ಟಾರ್​ ಪವನ್ ಕಲ್ಯಾಣ್ ಸಾಥ್! ಜೆಡಿಎಸ್ ಪರ ಪ್ರಚಾರ.

ಇನ್ನೇನು ವಿಧಾನಸಭಾ ಚುನಾವಣೆಗೆ ತಿಂಗಳಷ್ಟೇ ಬಾಕಿ ಉಳಿದಿದೆ. ಈ ಬಾರಿ ರಾಜಕೀಯದ ರಂಗು ಚಿತ್ರರಂಗದಲ್ಲಿಯೂ ತುಸು ಹೆಚ್ಚೇ ಪ್ರತಿಫಲಿಸುತ್ತಿದೆ. ನಾನಾ ರಾಜಕೀಯ ಪಕ್ಷಗಳ ತಮ್ಮ ಪರವಾಗಿ ನಟ ನಟಿಯರನ್ನು ಪ್ರಚಾರಕ್ಕೆ ಸೆಳೆದುಕೊಳ್ಳುವ ಕಸರತ್ತನ್ನೂ ತೀವ್ರಗೊಳಿಸಿವೆ. ಹೀಗಿರುವಾಗಲೇ ಕರ್ನಾಟಕದಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸಲು ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ರನ್ನು ಕರೆತರಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಯಾರಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಗಳು ಕೇಳಿಬರುತ್ತಿವೆ.

 

 

ಈಗಾಗಲೇ ಆಂಧ್ರದಲ್ಲಿ ತಮ್ಮದೇ ‘ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿ ಒಂದು ಮಟ್ಟದ ಅಲೆಯನ್ನು ಸೃಷ್ಟಿಸಿರುವ ಪವನ್ ಕಲ್ಯಾಣ್ ಆಂಧ್ರ ರಾಜಕೀಯ ವಲಯದಲ್ಲಿ ಭಾರಿ ಕುತೂಹಲವನ್ನು ಕೆರಳಿಸಿದ್ದಾರೆ. ಮೊದಲಿನಿಂದಲೂ ಅವರ ಮತ್ತು ಕುಮಾರ ಸ್ವಾಮಿಯವರ ನಡುವೆ ಉತ್ತಮ ಸ್ನೇಹವಿರುವುದರಿಂದ ಅವರು ಜೆಡಿಎಸ್ ಪರ ಪ್ರಚಾರ ಮಾಡಲು ಕರ್ನಾಟಕಕ್ಕೆ ಬರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರಿಗೆ ಪ್ರೋತ್ಸಾಹ ನೀಡಿದ್ದರು.

 

 

ಈಗಾಗಲೇ ಹೆಚ್.ಡಿ.ಕುಮಾರಸ್ವಾಮಿ ಮತ್ತು ಪವನ್ ಕಲ್ಯಾಣ್ ನಡುವೆ ಮೂರು ಸುತ್ತಿನ ಮಾತುಕತೆ ನಡೆದಿದ್ದು ಜೆಡಿಎಸ್ ಮುಖಂಡರ ಮಾತಿಗೆ ಪವನ್ ಕಲ್ಯಾಣ್ ಸಮ್ಮತಿ ಸೂಚಿಸಿದ್ದಾರಂತೆ. ಎಲ್ಲವು ಅಂದುಕೊಂಡಂತೆ ಆದರೆ ಕರ್ನಾಟಕದ 25 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಗಬ್ಬರ್ ಸಿಂಗ್ ಪ್ರಚಾರ ಮಾಡುವ ಸಾಧ್ಯತೆಗಳಿವೆ. ಹೈದರಾಬಾದ್ ಕರ್ನಾಟಕದ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ.. ಪ್ರಚಾರದಲ್ಲಿ ಹೆಚ್.ಡಿ.ಕೆ ಪುತ್ರ ನಿಖಿಲ್ ಪವನ್ ಕಲ್ಯಾಣ್ ಅವರಿಗೆ ಸಾಥ್ ನೀಡುತ್ತಾರೆ ಎನ್ನುವ ಸುದ್ದಿಯಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top