ಮನೋರಂಜನೆ

ಸ್ಟಾರ್ ನಟನ ಕಪಾಳಕ್ಕೆ ಬಾರಿಸಿದ್ದಳಂತೆ ರಾಧಿಕಾ ಆಪ್ಟೆ! ಯಾಕೆ ಗೊತ್ತಾ? ಕಿರುಕುಳ ನೀಡಿದ್ದ ಆ ಸ್ಟಾರ್ ಯಾರು ಗೊತ್ತಾ?

ರಾಧಿಕಾ ಆಪ್ಟೆ ಬಿಂದಾಸ್ ಆಗಿ ಬಟ್ಟೆ ಬಿಚ್ಚೋದರ ಮೂಲಕವೇ ಆಗಾಗ ಸದ್ದು ಮಾಡುತ್ತಾ ವಿವಾದಕ್ಕೂ ಕಾರಣವಾಗುವ ನಟಿ. ಇಂಥಾ ನಟಿಯರ ವ್ಯಕ್ತಿತ್ವವನ್ನು ಅಂಥವರು ತೊಡುವ ಬಟ್ಟೆಯಿಂದಲೇ ಅಳೆದು ಮಂಚಕ್ಕೆ ಆಹ್ವಾನ ನೀಡುವ ಮನಸ್ಥಿತಿ ಕೆಲ ನಟರಿಗಿದೆ. ಇಂಥಾದ್ದೇ ಮನಸ್ಥಿತಿಯಿಂದ ಕಿರುಕುಳ ನೀಡಿದ್ದ ತಮಿಳು ಸ್ಟಾರ್ ನಟನೊಬ್ಬನಿಗೆ ಕಪಾಳಕ್ಕೆ ಬಾರಿಸಿದ ವಿಚಾರವನ್ನು ರಾಧಿಕಾ ಆಪ್ಟೆ ಜಾಹೀರು ಮಾಡಿದ್ದಾಳೆ.

 

 

ರಾಧಿ ಕಾ ಹೇಳಿರೋ ಈ ವಿಚಾರವೀಗ ಭಾರತೀಯ ಚಿತ್ರರಂಗದಲ್ಲಿಯೇ ಸಂಚಲನ ಸೃಷ್ಟಿಸಿದೆ. ತಮಿಳು ಚಿತ್ರರಂಗದಲ್ಲಿಯಂತೂ ಲೈಂಗಿಕ ಕಿರುಕುಳ ನೀಡಿ ಕಪಾಳಕ್ಕೆ ಹೊಡೆಸಿಕೊಂಡ ನಟ ಯಾರೆಂಬ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ. ಇದೇ ಸುದ್ದಿಯ ಸುತ್ತಾ ನಟರನೇಕರು ರೂಮರುಗಳಿಗೂ ತುತ್ತಾಗುತ್ತಿದ್ದಾರೆ!

ಅಂದಹಾಗೆ ರಾಧಿಕಾ ಆಪ್ಟೆ ತನ್ನ ಮೇಲಾದ ಲೈಂಗಿಕ ಕಿರುಕುಳದ ವಿಚಾರವನ್ನು ಬಿಡು ಬೀಸಾಗಿ ಬಿಚ್ಚಿಟ್ಟಿದ್ದು ಹಿಂದಿಯ ಕಿರುತೆರೆಯ ಪ್ರಸಿದ್ಧ ಶೋ ಒಂದರಲ್ಲಿ. ಆಕೆ ಹೇಳಿರೋ ಮಾತುಗಳ ಪ್ರಕಾರವಾಗಿ ನೋಡ ಹೋದರೆ ಈ ಹಿಂದೆ ತಮಿಳು ಚಿತ್ರವೊಂದರ ಶೂಟಿಂಗ್ ಟೈಮಲ್ಲಿ ಇಂಥಾದ್ದೊಂದು ಕಹಿ ಅನುಭವವಾಗಿತ್ತಂತೆ.

 

 

ಈ ಚಿತ್ರದ ಚಿತ್ರೀಕರಣ ಶುವಾದಾಗಿನಿಂದಲೂ ಸದರಿ ಸ್ಟಾರ್ ನಟ ಚಿತ್ರವಿಚಿತ್ರ ಸಂದೇಶಗಳನ್ನು ರವಾನಿಸುತ್ತಾ ಕೆಟ್ಟದಾಗಿ ವರ್ತಿಸುತ್ತಿದ್ದನಂತೆ. ಕಡೆಗೂ ವಿರಾಮದ ವೇಳಿಯಲ್ಲಿ ರಾಧಿಕಾ ಪಕ್ಕದಲ್ಲಿ ಬಂದು ಕೂತ ಆ ನಟ ಕಾಲುಗಳನ್ನು ಮೀಟುವ ಮೂಲಕ ಅಸಹ್ಯವಾಗಿ ವರ್ತಿಸಿದ್ದಾನೆ. ಕೂಡಲೆ ರಾಧಿಕಾ ಹಿಂದೆ ಮುಂದೆ ನೋಡದೆ ಆತನ ಕಪಾಳಕ್ಕೆ ಛಟೀರನೆ ಬಾರಿಸಿದ್ದಳಂತೆ!

ನಟಿಯರಿಗೆ ಲೈಂಗಿಕ ಕಿರುಕುಳ ನೀಡುವ ವಿಚಾರದಲ್ಲಿ ತಮಿಳು ಚಿತ್ರರಂಗಕ್ಕೆ ಕೆಟ್ಟ ಹೆಸರು ವರ್ಷಾಂತರಗಳಿಂದಲೂ ಅಂಟಿಕೊಂಡಿದೆ. ಇಂಥಾ ಕಿರುಕುಳಕ್ಕೆ ಸಾಕಷ್ಟು ನಟಿಯರ ಬಲಿಯೂ ಆಗಿದೆ. ಇದೀಗ ರಾಧಿಕಾ ಆಪ್ಟೆ ಹೇಳಿಕೆಯಿಂದ ತಮಿಳು ಚಿತ್ರರಂಗದ ಮಾನ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುವಂತಾಗಿದೆ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top