fbpx
ಕನ್ನಡ

ಕನ್ನಡದಲ್ಲೇ ಯುಗಾದಿ‌ ಶುಭಾಶಯ ಕೋರಿದ ಮೋದಿ

ಕನ್ನಡದಲ್ಲಿ ಮೋದಿ ಶುಭಾಶಯ

ಎಲ್ಲೆಡೆ ಯುಗಾದಿ ಸಂಭ್ರಮ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಯುಗಾದಿ ಪ್ರಯುಕ್ತ ಕೈ ಮುಗಿದು ಕನ್ನಡದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

 

 

ಶ್ರೀಶೈಲದಲ್ಲಿ ಆಯೋಜಿಸಲಾಗಿದ್ದ ಜನ ಜಾಗೃತಿಯ ಧರ್ಮಸಮ್ಮೇಳನದಲ್ಲಿ ಮೋದಿ ಕನ್ನಡದಲ್ಲಿ ಶುಭಾಶಯ ತಿಳಿಸಿದ್ದಾರೆ. ಶ್ರೀಶೈಲ ಜಗದ್ಗುರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಪ್ರಧಾನಿ, ಪ್ರಾರಂಭದಲ್ಲೇ ಸಮಸ್ತ ದೇಶದ ಭಾಂಧವರಿಗೆ ವಿಳಂಬಿ ನಾಮ ಸಂವತ್ಸರದ ಹಾಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

 

 

ಬಳಿಕ ಧರ್ಮ ಜಾಗೃತಿ ಕುರಿತು ಹಾಗೂ ಸರ್ಕಾರದ ಸಾಧನೆಗೆ ಧರ್ಮದಲ್ಲಿ ಇರುವ ಸನ್ಮಾರ್ಗಗಳನ್ನು ಹೇಗೆ ಅನುಸರಿಸುತ್ತಿದೆ ಎಂಬುದನ್ನು ತಮ್ಮ ಭಾಷಣದಲ್ಲಿ ಮೋದಿ ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top