ವಿಶೇಷ

ಈ ಊರಲ್ಲಿ ಯುಗಾದಿ ಹಬ್ಬ ಬಂತೆಂದರೆ ಸಾಕು ಶೋಕಾಚರಣೆ ಮನೆ ಮಾಡುತ್ತರಂತೆ ಕಾರಣ ಏನ್ ಗೊತ್ತಾ?

ಯುಗಾದಿ ಹಬ್ಬ ಬಂತೆಂದರೆ ಸಾಕು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಈ ಊರಲ್ಲಿ ಯುಗಾದಿ ಹಬ್ಬ ಬಂತೆಂದರೆ ಸಾಕು ಶೋಕಾಚರಣೆ ಮನೆ ಮಾಡುತ್ತದೆ. ಹೌದು ರಾಜ್ಯದ ಪ್ರಸಿದ್ದ ಕುರುಡುಮಲೆ ಗಣೇಶ ದೇವಸ್ಥಾನವಿರುವ ಈ ಗ್ರಾಮದಲ್ಲಿ ನೋ ಯುಗಾದಿ.

 

 

ಕುರುಡುಮಲೆ ಗ್ರಾಮವು ಒಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಯ ಜನವಿರುವ ಗ್ರಾಮ. ಸುಮಾರು ನೂರು ವರ್ಷಗಳಿಂದಲೂ ಈ ಕಾಲೋನಿಯ ಜನ ಯುಗಾದಿ ಹಬ್ಬದಿಂದ ತುಂಬಾ ದೂರ ಉಳಿದಿದ್ದಾರೆ. ಯಾವ ಮನೆಯಲ್ಲಿಯೂ ಕೂಡ ಯುಗಾದಿ ಹಬ್ಬದ ಸಂಭ್ರಮ ಇರುವುದಿಲ್ಲ. ಒಂದು ರೀತಿಯ ಶೋಕಾಚರಣೆ ಮನೆ ಮಾಡಿರುತ್ತದೆ ಎನ್ನಬಹುದು.

 

 

ಯುಗಾದಿ ಆಚರಿಸದಿರಲು ಕಾರಣವೇನು..!

ನೂರಾರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಒಂದು ದುರ್ಘಟನೆ ನಡೆದಿತ್ತು. ಹೌದು ಈ ಘಟನೆ ಬಗ್ಗೆ ಕೇಳಿದ್ರೆ ನೀವು ಕೂಡ ಭಯಬೀಳುವುದಂತು ಪಕ್ಕಾ. ಅದೇನಪ್ಪ ಅಂದ್ರೆ ಈ ಊರಿನ ಸೊಸೆಯರು ನೀರಿಗೆ ಹೋಗಿ ಬರುವಾಗ ಗುಂಪಿನಲ್ಲಿದ್ದ ಒಬ್ಬ ಗರ್ಭಾವತಿ ಸೊಸೆಗೆ ಗೂಳಿಯೊಂದು ತನ್ನ ಕೊಂಬುಗಳಿಂದ ತಿವಿದು ಸಾಯಿಸಿ ನಂತರ ಮಗುವನ್ನು ಕೊಂಬಿಗೆ ಸಿಕ್ಕಿಸಿಕೊಂಡು ಊರೆಲ್ಲಾ ತಿರುಗಿತ್ತಂತೆ. ಆದ್ದರಿಂದ ಇಲ್ಲಿನ ಜನರು ಯುಗಾದಿ ಹಬ್ಬದ ಆಚರಣೆಯನ್ನು ಬಿಡಲು ನಿರ್ಧರಿಸಿದ್ದರಂತೆ. ಅಂದಿನಿಂದ ಇದುವರೆಗೂ ಯುಗಾದಿ ಹಬ್ಬವೇ ನಡೆಯೋಲ್ಲ ಈ ಊರಲ್ಲಿ.

 

 

ಬಳ್ಳಾರಿಯ ಕೂಡ್ಲಿಗಿಯಲ್ಲಿಯೂ ಕೂಡ ಯುಗಾದಿಯಿಂದ ದೂರ ಉಳಿದಿದ್ದಾರೆ ಜನ

ಅಂತೆಯೇ ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಕೆ.ಗಜಾಪುರ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ರಾಂನಗರದ ನಾರಾಯಣ ದೇವರ ಕೆರೆ, ಹಂಪಾಪಟ್ಟಣ ಮೊದಲಾದ ಹಳ್ಳಿಗಳಲ್ಲಿ ಕೆಲವು ಸಮುದಾಯದ ಜನರು ಯುಗಾದಿ ಹಬ್ಬದ ಆಚರಣೆ ಮಾಡೋಲ್ಲ. ಹೌದು, ಯುಗಾದಿ ಆಚರಿಸಿದರೆ ತಮಗೆ ಕೆಡುಕುಂಟಾಗುವುದು ಎಂಬ ಹಿರಿಯರು ಹೇಳಿದ್ದು, ಇದುವರೆಗೂ ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ತಲಾತಲಾಂತರದಿಂದಲೂ ನಮ್ಮ ಕುಟುಂಬಗಳು ಹಬ್ಬ ಆಚರಿಸಿಲ್ಲ ಎಂದು ಹೇಳುತ್ತಾರೆ. ಅಲ್ಲದೇ ಕೆಲವರು ಹಬ್ಬದ ಮರುದಿನ ಕರಿ ಆಚರಣೆಗೆಂದು ಬೇಟೆಯಾಡಲು ಹೋದ ಹಿರಿಯರು ವಾಪಸ್ ಬಾರದ ಕಾರಣ ಅಂದಿನಿಂದ ಇದುವರೆಗೂ ಹಬ್ಬ ಆಚರಿಸಿಲ್ಲ ಎಂದು ಕೆಲವರು ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top