ಮಾಹಿತಿ

3 ನಿಮಿಷಕ್ಕಿಂತ ಹೆಚ್ಚು ಕಾಲ ಕಾದರೆ ಟೋಲ್ ಕಟ್ಟೋಹಾಗಿಲ್ಲಾ! ನಿಮಗೆ ಗೊತ್ತೇ

ನಿಮಗೆ ಗೊತ್ತೇ? 3 ನಿಮಿಷಕ್ಕಿಂತ ಹೆಚ್ಚು ಕಾಲ ಕಾದರೆ ಟೋಲ್ ಪಾವತಿಸೋಹಾಗಿಲ್ಲ…

 

ನೀವು ದೀರ್ಘ ಪ್ರಯಾಣ ಮಾಡುತ್ತಿದ್ದಲ್ಲಿ ಟೋಲ್‌ ಪಾವತಿಸಿ ಸುಸ್ತಾಗಿರುತ್ತೀರಿ. ದೀರ್ಘ ಪ್ರಯಾಣದ ನಡುವೆ ಗಂಟಗಟ್ಟಲೇ ಟೋಲ್‌ ಪ್ಲಾಜಾ ಎದುರು ಕಾದು ಕಾದು ಸುಸ್ತಾಗಿದ್ದೀರಾ.? ಇದೋ ನಿಮಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಇನ್ನು ಮುಂದೆ ಹೆಚ್ಚು ಹೊತ್ತು ಕ್ಯೂ ನಿಂತರೂ ಬೇಜಾರು ಮಾಡಿಕೊಳ್ಳಬೇಕಿಲ್ಲ. ಏಕೆಂದರೆ ಇದರಿಂದ ನಿಮ್ಮ ಹಣ ಉಳಿತಾಯವಾಗಲಿದೆ.

ಒಂದು ವೇಳೆ ಯಾವುದೇ ಒಂದು ಟೋಲ್‌ ಗೇಟ್‌ನಲ್ಲಿ ನೀವು ಶುಲ್ಕ(Toll) ಪಾವತಿಸಲು 3 ನಿಮಿಷಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡರೆ ಆ ಟೋಲ್‌ ಗೇಟ್‌ನಲ್ಲಿ ನೀವು ಶುಲ್ಕ ಪಾವತಿಸಬೇಕಾಗಿಲ್ಲ! ಹೌದು, ಇದು ಸತ್ಯ, ಹರಿ ಓಂ ಜಿಂದಾಲ್‌ ಎಂಬ ವಕೀಲರೊಬ್ಬರು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಅರ್ಜಿ ಸಲ್ಲಿಸಿ ಈ ಮಾಹಿತಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಡೆದ ಮಾಹಿತಿಯನ್ನು ಹರಿ ಓಂ ಅವರು ತಮ್ಮ ಪೇಸ್‌ಬುಕ್‌ ಪೇಜ್‌ನಲ್ಲಿ ಹಾಕಿದ್ದಾರೆ.

ಇದು ಹೈವೆ ಕಮಿಷನ್ ನ ಆದೇಶದ ಪ್ರತಿ

 

ಇನ್ನು ಮುಂದೆ ಹೆಚ್ಚು ಹೊತ್ತು ಕ್ಯೂ ನಿಂತರೂ ಬೇಜಾರು ಮಾಡಿಕೊಳ್ಳಬೇಡಿ. ಏಕೆಂದರೆ ಇದರಿಂದ ನಿಮ್ಮ ಹಣ ಉಳಿತಾಯವಾಗಲಿದೆ. ಇದರಿಂದ ವಾಹನ ಸವಾರರಿಗೆ ಸ್ವಲ್ಪ ನಿರಾಳತೆಯಿಂದ ಇರಬಹುದು. ಇನ್ನು ಮುಂದೆ ದೀರ್ಘ ಪ್ರಯಾಣ ಮಾಡುವಾಗ ಅಥವಾ ಟೋಲ್ ಗೇಟ್ ತಲುಪಿದ ಕೂಡಲೇ ಟೈಮರ್‌ ಆನ್‌ ಮಾಡುವುದನ್ನು ಮರೆಯಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top