fbpx
ಕಿರುತೆರೆ

ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ದಿಗಂತ್- ಐಂದ್ರಿತಾ.

ಯೋಗರಾಜ ಭಟ್ಟರ ದಯೆಯಿಂದ ನಟನಾಗಿ ರೂಪುಗೊಂಡು ನೆಲೆ ನಿಲ್ಲಲಾಗದೆ ಒದ್ದಾಡುತ್ತಿರೋ ದಿಗಂತ್‌ಗೆ ದೂದ್‌ಪೇಡ ಅಂತೊಂದು ಬಿರುದು ಸಿಕ್ಕಿದ್ದೇ ಗಟ್ಟಿ. ಹೈಟು, ಪರ್ಸನಾಲಿಟಿ ಮತ್ತು ಒಂದು ರೇಂಜಿಗಿರೋ ನಟನೆ… ಇಷ್ಟಿದ್ದರೂ ಬರಖತ್ತಾಗದೇ ಮಂಡೆಬಿಸಿ ಮಾಡಿಕೊಂಡಿರೋ ಈ ಮಲೆನಾಡ ಹುಡುಗ ಯಾವುದು ಏನಾದರಾಗಲಿ, ಮೊದಲೊಂದು ಮದುವೆ ಆಗಿಬಿಡೋ ನಿರ್ಧಾರ ಮಾಡಿದ್ದಾರಾ? ಹೌದು ಅನ್ನೋ ಉತ್ತರ ದಿಗಂತ್ ಕಡೆಯಿಂದಲೇ ರವಾನೆಯಾಗಿದೆ!

 

 

ಅವರೇ ಹೇಳಿಕೊಂಡಿರೋದನ್ನು ನಂಬೋದಾದರೆ ಈ ವರ್ಷದ ಕೊನೆಯಲ್ಲಿ ಸುಮುಹೂರ್ತವೊಂದರಲ್ಲಿ ಮದುವೆ ಸಮಾರಂಭ ನೆರವೇರೋದು ಪಕ್ಕಾ ಆಗಿದ್ದು ಇದಕ್ಕವರು ಅಚಲ ನಿರ್ಧಾರ ಮಾಡಿಕೊಂಡಂತಿದ್ದಾರೆ. ನಟಿ ಐಂದ್ರಿತಾ ರೇ ಮತ್ತು ದಿಗಂತ್ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಸುದ್ದಿ ಬಹಳಷ್ಟು ವರ್ಷಗಳಿಂದ ಕೇಳಿಬರುತ್ತಿದ್ದರೂ ಈಗ ಈ ವಿಷಯ ಗುಟ್ಟಾಗಿ ಉಳಿದಿಲ್ಲ.. ಇಷ್ಟು ದಿನ ಪ್ರೀತಿಯ ಕಡಲಲ್ಲಿ ಈಜುತ್ತಿದ್ದ ಈ ಕ್ಯೂಟ್ ಜೋಡಿ ಮದುವೆ ಮಾಡಿಕೊಳ್ಳುವ ಮನ್ನಸ್ಸು ಮಾಡಿದೆ, ಇದು ಕೇವಲ ಗಾಸಿಪ್ ಅಂತ ಮೂಗು ಮುರಿಯಬೇಡಿ ಈ ವಿಷ್ಯವನ್ನ ಸ್ವತಃ ದಿಗಂತ್ ಅವರೇ ಹೇಳಿದ್ದಾರೆ.

 

 

ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನೆನ್ನೆಯ ಸಂಚಿಕೆಯಲ್ಲಿ ನಟ ಯೋಗಿ, ಮತ್ತು ದಿಗಂತ್ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ.

 

 

ಕಾರ್ಯಕ್ರಮದ ಎರಡನೇ ಸುತ್ತು ಮುಕ್ತಾಯವಾದ ಮೇಲೆ ಶಿವಣ್ಣ ದಿಗಂತ್ ಮತ್ತು ಯೋಗಿ ಇಬ್ಬರಿಗೂ “ನಿಮ್ಮ ಜೀವನದಲ್ಲಿ ಯಾವ ಕ್ಷಣಕ್ಕಾಗಿ ಸಿಕ್ಕಾಪಟ್ಟೆ ಕಾಯ್ತಾಯಿದ್ದೀರಾ? ” ಎಂದು ಪ್ರಶ್ನಿಸಿದರು. ಆ ಪ್ರಶ್ನೆ ಮೊದಲು ಉತ್ತರ ಕೊಟ್ಟ ದಿಗಂತ್, “ನಾನು ನನ್ನ ಮದುವೆಗೋಸ್ಕರ ಕಾಯ್ತಾ ಇದ್ದೀನಿ, ಇದೇ ವರ್ಷದ ಕೊನೆಯಲ್ಲಿ ನಾನು ಮದುವೆ ಮಾಡ್ಕೋತಾ ಇದ್ದೀನಿ” ಎಂದು ಹೇಳಿದರು.

 

 

ದಿಗಂತ್ ಈ ರೀತಿ ಹೇಳುತ್ತಿದ್ದಂತೆ “ಆಂಡಿ (ಐಂದ್ರಿತಾ ರೇ) ಮದ್ವೆಗೆ ರೆಡಿಯಾಗಿ. ಮದುವೆ ಊಟಕ್ಕೆ ನಾವು ವೇಟ್ ಮಾಡ್ತಿದ್ದೀವಿ, ಖಂಡಿತ ನಾವು ಮದುವೆಗೆ ಬರುತ್ತೇವೆ” ಎಂದು ಶಿವಣ್ಣ ದಿಗಂತ್ ಕಾಲೆಳೆದರು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top