ಆರೋಗ್ಯ

ಕತ್ತಿನ ಹಿಂದೆ ಕಪ್ಪಗಿರೋರನ್ನ ತುಂಬಾ ಜನರನ್ನು ನೋಡಿರುತ್ತೀರಿ ಆದ್ರೆ ಅದಕ್ಕೆ ಪರಿಹಾರ ಸಿಗಲಿಲ್ಲ ಅಂತ ಚಿಂತೆ ಮಾಡುವವರಿಗೆ ಇಲ್ಲಿದೆ ನೋಡಿ ಸೂಪರ್ ಮನೆಮದ್ದು

ಕತ್ತು ಹಿಂದೆ ಕಪ್ಪಾಗಿದ್ರೆ ಇನ್ಮೇಲೆ ಯೋಚ್ನೆ ಬೇಡ ಕೆಲವು ವಾರದಲ್ಲಿ

ಮನೆ ಮದ್ದು ಬಳಸಿ ಸರಿಮಾಡ್ಕೋಬಹುದು !

 

ಅನೇಕ ಜನರಿಗೆ ತಮ್ಮ ಕುತ್ತಿಗೆಯ ಚರ್ಮ ಕಪ್ಪಗಿದ್ದು ಬಹಳ ಕಿರಿ ಕಿರಿ ಉಂಟುಮಾಡುತ್ತಿರುತ್ತದೆ ಇದು ಚರ್ಮದ ವರ್ಣದ್ರವ್ಯದ ಸಮಸ್ಯೆಯಾಗಿದ್ದು ಇದಕ್ಕೆ ಅಕ್ಯಾಂತೊಸಿಸ್ ನಿಗ್ರಿಕನ್ಸ್ ಎಂದು ಕರೆಯುತ್ತಾರೆ.

 

ವಯಸ್ಸು ,ಸಕ್ಕರೆ ಖಾಯಿಲೆ , ತೂಕದಲ್ಲಿನ ಏರಿಳಿತ ಹಾಗು ಆಹಾರ ಕ್ರಮಗಳಲ್ಲಿನ ಬದಲಾವಣೆ ಮುಖ್ಯವಾಗಿ ಈ ಬದಲಾವಣೆಗೆ ಕಾರಣ.

 

1. ಬಾದಾಮಿ

ಅರ್ಧ ಟೀಚಮಚ ಬಾದಾಮಿ ಪುಡಿ ,ಒಂದು ಟೀಚಮಚ ಹಾಲು ಮತ್ತು ಸ್ವಲ್ಪ ಜೇನು ಬೆರೆಸಿ ಕಲಸಿ ಕುತ್ತಿಗೆ ಹಿಂದಕ್ಕೆ ಹಚ್ಚಬೇಕು ರ್ಧ ಗಂಟೆ ಕಾಲ ಬಿಟ್ಟು ನಂತರ ನೀರಿನಿಂದ ತೊಳೆಯಿರಿ ವಾರಕ್ಕೆ ನಾಲ್ಕು ಬಾರಿ ಹೀಗೆ ಮಾಡಿದರೆ ಕೆಲವೇ ವಾರಗಳಲ್ಲಿ ಕುತ್ತಿಗೆ ಕಪ್ಪು ಮಾಯ.

 

 

2. ಅಲೋ ವೆರಾ

ಅಲೋ ವೆರಾ ಜೆಲ್ ತೆಗೆದು ಕುತ್ತಿಗೆಗೆ ನೇರವಾಗಿ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು
ನೀರಿನಿಂದ ತೊಳೆಯಿರಿ , ವೇಗದ ಫಲಿತಾಂಶಕ್ಕಾಗಿ ದಿನಕೊಮ್ಮೆ ಪುನರಾವರ್ತಿಸಿ.

 

 

3. ವಾಲ್ನುಟ್ಸ್

ವಾಲ್ನುಟ್ಸ್ ಪುಡಿ ಮತ್ತು ಯೋಗ್ರ್ಟ್ ಮಿಶ್ರಣ ಮಾಡಿ ಕೆಲವು ನಿಮಿಷ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು
ನೀರಿನಿಂದ ಅಥವಾ ಗುಲಾಬಿ ನೀರಿನಿಂದ ತೊಳೆಯಿರಿ.

 

 

4. ಸೌತೆಕಾಯಿ

ಸೌತೆಕಾಯಿ ರಸವನ್ನು 10 ನಿಮಿಷ ಹಚ್ಚಿ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು ದಿನಾಗಲೂ ಬೇಕಾದರೆ ಮಾಡಬಹುದು.

 

 

5. ನಿಂಬೆ ರಸ

ನಿಂಬೆ ರಸ ಹಚ್ಚಿ 20 ನಿಮಿಷಗಳ ಕಾಲ ಅದನ್ನು ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆಯಿರಿ , ನಿಂಬೆ ರಸ ಹಚ್ಚಿದ ನಂತರ ಸೂರ್ಯನ ನೇರ ಕಿರಣಗಳು ಕುತ್ತಿಗೆಯ ಮೇಲೆ ಬೀಳ ಬಾರದು.

 

 

6. ಓಟ್ಸ್

ಓಟ್ಸ್ ಹಾಗು ಟೊಮೇಟೊ ರಸ ಮಿಶ್ರಣ ಮಾಡಿ 20 ನಿಮಿಷಗಳ ಕಾಲ ಬಿಟ್ಟು
ನೀರಿನಿಂದ ಅಥವಾ ಗುಲಾಬಿ ನೀರಿನಿಂದ ತೊಳೆಯಿರಿ.

 

ಅಥವಾ ಓಟ್ಸ್ ನೊಂದಿಗೆ ಜೇನು ಮತ್ತು ಹಾಲನ್ನು ಮಿಶ್ರಣ ಮಾಡಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top