ಆರೋಗ್ಯ

ಸೌತೆಕಾಯಿಯನ್ನು ಕತ್ತರಿಸುವಾಗ ಅದರ ಎರಡು ತುದಿಗಳನ್ನು ಸ್ವಲ್ಪ ಕತ್ತರಿಸಿ ಉಜ್ಜಲಾಗುತ್ತೆ ಏಕೆ ?

ಸೌತೆಕಾಯಿನ ತಿನ್ನೋಕಿಂತ ಮುಂಚೆ ಈ ತರ ಉಜ್ಜೋದರ ಹಿಂದಿರೋ ವೈಜ್ಞಾನಿಕ ಕಾರಣ ಗೊತ್ತಾ?

 

 

ಸೌತೆಕಾಯಿಯಲ್ಲಿ ಕುಕುರ್ಬಿಟಸಿನ್ ಸಿ ಮತ್ತು ಕುಕುರ್ಬಿಟಸಿನ್ ಬಿ ಎಂಬ ಎರಡು ವಂಶವಾಹಿಗಳಿದ್ದು ಇವು ಕಹಿ ಗುಣವನ್ನು ಹೊಂದಿರುತ್ತದೆ

 

ಸೌತೆಕಾಯಿಯ ಸಿಪ್ಪೆಯ ಕೆಳ ಭಾಗದಲ್ಲಿ ಈ ಕುಕುರ್ಬಿಟಸಿನ್ ಎಂಬ ಬಿಳಿ ಸಂಯುಕ್ತವು ಅಂಟಿಕೊಂಡಿರುತ್ತದೆ ಆದ್ದರಿಂದ ನಾವು ಸೌತೆಕಾಯಿಯ ಎರಡು ತುದಿಗಳನ್ನು ಸ್ವಲ್ಪ ಕತ್ತರಿಸಿ ಉಜ್ಜಿದಾಗ ಅದು ನೊರೆಯ ರೂಪದಲ್ಲಿ ಹೊರಗೆ ಬರುತ್ತದೆ ಈ ನೊರೆಯು ಕುಕುರ್ಬಿಟಸಿನ್ ಸಂಯುಕ್ತ .

 

 

ಕೆಲವು ಬಾರಿ ಪೂರ್ತಿ ನೊರೆಯು ಹೋಗದೆ ಸೌತೆಕಾಯಿ ಕಹಿಯಾಗಿದ್ದರೆ ಸೌತೆಕಾಯಿಯ ಸಿಪ್ಪೆಯನ್ನು ತೆಗೆದರೆ ಕಹಿಯು ದೂರವಾಗುತ್ತದೆ

 

ಅಥವಾ ಸೌತೆಕಾಯಿಯ ತುದಿಗೆ ಸ್ವಲ್ಪ ಉಪ್ಪನ್ನು ಹಚ್ಚಿ ಸೌತೆಕಾಯಿಯ ತುಂಡಿನಿಂದ ಉಜ್ಜಿದರೆ ಸಹ ಕಹಿಯ ಅಂಶ ದೂರವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top