ಆರೋಗ್ಯ

ನಮ್ಮ ದೇಹ ತುಂಬಾ ಉಷ್ಣ ಅನ್ನುವವರು ಅಜ್ಜಿ ಉಪಯೋಗ ಮಾಡ್ತಿದ್ದ ಟೆಕ್ನಿಕ್ ಬಳಸಿ ದೇಹ ತಂಪು ಮಾಡ್ಕೊಳ್ಳಿ

ಉಷ್ಣ ಆದ್ರೆ ಅಜ್ಜಿ ಮಾಡ್ತಿದ್ದ ಈ ಟೆಕ್ನಿಕ್ ತುಂಬ ಉಪಯೋಗ ಆಗುತ್ತೆ !

 

ಅಯ್ಯೋ ಮೂತ್ರ ಹೋಗೋ ಜಾಗದಲ್ಲಿ ಏನೋ ಉರಿ ಸಂಕಟ ಅಂತ ಇದ್ದೋರಿಗೆ ಅಜ್ಜಿ ಮಾಡ್ತಿದ್ದ
ಈ ಸಿಂಪಲ್ ಪ್ರಯೋಗ ಸ್ವಲ್ಪ ನಿಮಿಷದಲ್ಲೇ ಉಷ್ಣ ತೆಗೆದು ಹಾಕ್ತಿತ್ತು.

 

 

ಜಾಸ್ತಿ ಏನು ಬೇಡ ಸ್ವಲ್ಪ ಹನಿ ಹರಳೆಣ್ಣೆ ತಗೊಂಡು ನೆತ್ತಿ ಮೇಲೆ ಉಜ್ಜಿ ಇದು ನೆತ್ತಿ ಮೇಲಿನ ಕೆಲವು ನಾಡಿಗಳನ್ನ ಉತ್ತೇಜನ ಗೊಳಿಸಿ ದೇಹಕ್ಕೆ ತಂಪು ತಂಪು ಎಫೆಕ್ಟ್ ಕೊಡುತ್ತೆ.

 

ಆಮೇಲೆ ಕಾಲಿನ ಪಾದಗಳಿಗೆ ಹರಳೆಣ್ಣೆ ಇಂದ ಮಸಾಜ್ ಮಾಡಿ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡ್ಬೇಕು ಇದ್ರಿಂದ ಏನ್ ಆಗುತ್ತೆ ಅಂದ್ರೆ ಕಾಲಲ್ಲಿ ಇರೋ ಕೆಲವು ಆಕು ಪ್ರೆಷರ್ ಪಾಯಿಂಟ್ ಗಳು ಜಾಗೃತವಾಗುತ್ತೆ ಆಗ ದೇಹಕ್ಕೆ ತುಂಬ ಆರಾಮ ಅನ್ನಿಸುತ್ತೆ.

 

 

ಇನ್ನೊಂದು ಟೆಕ್ನಿಕ್ ಏನಪ್ಪಾ ಅಂದ್ರೆ ಹೊಟ್ಟೆಯ ಒಕ್ಕಳಿನ ಭಾಗಕ್ಕೆ ಮಸಾಜ್ ಮಾಡೋದು , ಮುಖ್ಯವಾಗಿ ದೇಹದಲ್ಲಿ ಪಿತ್ತ ಜಾಸ್ತಿಯಾಗಿ ಅಸಿಡಿಟಿ ಜಾಸ್ತಿ ಆದಾಗ್ಲೆ ನಮ್ಮ ದೇಹದ ಉಷ್ಣ ಏರೋದು ಆದ್ದರಿಂದ ನಾವೇನು ಮಾಡ್ಬೇಕು ಅಂದ್ರೆ ಮೊದಲು ಹೊಟ್ಟೆಯ ಭಾಗಗಳನ್ನ ತಂಪು ಮಾಡ್ಕೋಬೇಕು ಹೊಟ್ಟೆ ಮಸಾಜ್ ಮಾಡೋದ್ರಿಂದ ವಿವಿಧ ಹೊಟ್ಟೆ ಭಾಗಗಳ ನಾಡಿಗಳನ್ನ ತಂಪು ಮಾಡೋದರ ಮೂಲಕ ಉಷ್ಣ ಕಮ್ಮಿಮಾಡಬಹುದು.

 

 

ಚಕ್ರ  ನಾಭಿ   ಬಸ್ತಿ ಅಂತಲೂ ಕರೆಯುತ್ತಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top