ಆರೋಗ್ಯ

ನಿಮ್ಮ ತಲೆಲ್ಲಿ ಹೇನು ಜಾಸ್ತಿ ಆಗಿದ್ಯಾ ಆಗದ್ರೆ ಪರ ಪರ ಅಂತ ತಲೆ ಕೆರ್ಕೊಳೋ ಬದ್ಲು ಈ ಮನೆಮದ್ದನ್ನು ಬಳಸಿ ಪರಿಹಾರ ಕಂಡುಕೊಳ್ಳಿ

ತಲೆಲಿ ಹೇನು ಬಂದಿದೆ ಅಂತ ಪರ ಪರ ಅಂತ ಕೆರ್ಕೊಳೋದು ಇರಲ್ಲ

ಸುಲಭವಾದ ಮನೆಮದ್ದುಗಳಿಂದ ನಿವಾರಿಸಿ !

 

ತಲೆಲಿ ಹೇನು ಕಲುಷಿತ ಕೂದಲು, ಕೂದಲ ಬ್ರಷ್ , ಬಾಚಣಿಗೆಗಳು, ಉಡುಪು ಅಥವಾ ಹಾಸಿಗೆ ಮೂಲಕ ಒಬ್ಬ ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ.

 

ತಲೆಯ ಕೆರೆತ , ಚುಚ್ಚಿದ ಅನುಭವ , ತಲೆಯಲ್ಲಿ ಗುಳ್ಳೆಗಳು ಹೇನಿನ ಸಮಸ್ಯೆಯ ಗುಣ ಲಕ್ಷಣಗಳಾಗಿವೆ :

 

 

ಇದನ್ನು ಸುಲಭವಾಗಿ ಮನೆ ಮದ್ದಿನಿಂದ ಬಗೆ ಹರಿಸಿಕೊಳ್ಳಬಹುದು :

 

1. ವಿನೆಗರ್

ವಿನೆಗರ್ ಮತ್ತು ಮಿನರಲ್ ಆಯಿಲ್ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ನಿಮ್ಮ ನೆತ್ತಿ ಮತ್ತು ಕೂದಲ ಮೇಲೆ ಹಚ್ಚಿ ರಾತ್ರಿ ಹಚ್ಚಿ ಕ್ಯಾಪ್ ನಿಂದ ಕಟ್ಟಿ ಬಿಡಬೇಕು
ಬೆಳಗ್ಗೆ ಶಾಂಪೂ ಹಚ್ಚಿ ಸ್ನಾನ ಮಾಡ ಬೇಕು .

ಶಾಂಪೂ ಮಾಡಿದ ನಂತರ ಮತ್ತೆ ವಿನೆಗರ್ ಗೆ ನೀರುಹಾಕಿ ಬೆರೆಸಿ ತಲೆಯನ್ನು ತೊಳೆದುಕೊಳ್ಳಬೇಕು 10 ನಿಮಿಷ ಬಿಟ್ಟು ಮತ್ತೆ ನೀರಿನಲ್ಲಿ ತೊಳೆಯಬೇಕು.
ಹೀಗೆ ವಾರಕ್ಕೆ ಎರಡು ಬಾರಿ ಯಂತೆ ಎರಡು ವಾರ ಮಾಡಿದರೆ ತಲೆ ಹೇನು ಮಾಯವಾಗುತ್ತದೆ.

 

 

2. ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಕಾಯಿಸಿ ಅದಕ್ಕೆ ಸ್ವಲ್ಪ ಕರ್ಪೂರ ಸೇರಿಸಿ ತಲೆಗೆ ರಾತ್ರಿ ಹಚ್ಚಬೇಕು , ಕ್ಯಾಪ್ ನಿಂದ ಕಟ್ಟಿ ಬಿಡಬೇಕು
ಬೆಳಗ್ಗೆ ಶಾಂಪೂ ಹಚ್ಚಿ ಸ್ನಾನ ಮಾಡ ಬೇಕು . ಕೂದಲು ಒಣಗಿದ ನಂತರ ಹೇನು ಬಾಚಣಿಗೆಯಿಂದ ತಲೆ ಬಾಚಿಕೊಳ್ಳಬೇಕು.

 

ಹೀಗೆ ಮೂರು ನಾಲ್ಕು ದಿನ ಮಾಡಿದರೆ ಹೇನುಗಳು ಸಾಯುತ್ತವೆ.

 

 

 

3 .ಈರುಳ್ಳಿ

ಈರುಳ್ಳಿ ರುಬ್ಬಿ ರಸ ತೆಗೆದು 2 ಗಂಟೆ ತಲೆಗೆ ಹಚ್ಚಿ ನಂತರ ತಲೆ ಸ್ನಾನ ಮಾಡಿಕೊಳ್ಳಬೇಕು , ಈರುಳ್ಳಿ ಯಲ್ಲಿರುವ ಸಲ್ಫರ್ ಹೇನುಗಳನ್ನು ತೆಗೆಯಲು ಸಹಾಯಕ.

 

 

4 .ಟೀ ಟ್ರೀ ಆಯಿಲ್

ಆಲಿವ್ ಎಣ್ಣೆ ಮೂರು ಚಮಚ ಮತ್ತು ಟೀ ಟ್ರೀ ಆಯಿಲ್ ಒಂದು ಚಮಚ ಮಿಶ್ರಣ ಮಾಡಿ ತಲೆಗೆ ಹಚ್ಚಿ 30 ನಿಮಿಷ ಬಿಡುವುದು
ನಂತರ ಶಾಂಪೂ ನಿಂದ ತಲೆಗೆ ಸ್ನಾನ ಮಾಡುವುದು ಹೀಗೆ 2 ರಿಂದ 3 ವಾರ ಮಾಡಿದರೆ ತಲೆ ಹೇನು ಸಾಯುವುದು.

 

 

5 .ನಿಂಬೆ ರಸ

ತಾಜಾ ನಿಂಬೆ ರಸ ತಲೆಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ನಂತರ ವಿನೆಗರ್ ಬಳಸಿ ತಲೆ ತೊಳೆದುಕೊಳ್ಳಬೇಕು ವಾರಕ್ಕೊಮ್ಮೆ ಈ ಚಿಕಿತ್ಸೆ ಮಾಡಿದರೆ ತಲೆ ಹೇನು ಸಾಯುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top