ಆರೋಗ್ಯ

ಹೈ ಬಿ. ಪಿ (ಅಧಿಕ ರಕ್ತದ ಒತ್ತಡ) ಇದ್ರೆ ಚಿಂತೆ ಬೇಡ ಮನೆಲ್ಲೇ ಇದೆ ಮದ್ದು !

ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ ಈಗ ಯೋಚನೆ ಬೇಡ ಈ ಆಹಾರ ಪದ್ದತಿಗಳನ್ನು ಪಾಲಿಸಿ :

 

ಅಧಿಕ ಕೊಬ್ಬುವುಳ್ಳ ಪದಾರ್ಥ, ಸಿಹಿತಿಂಡಿಗಳು, ಕರಿದ ತಿಂಡಿ, ವನಸ್ಪತಿ, ತುಪ್ಪ, ಮೊಟ್ಟೆ, ಮಾಂಸಾಹಾರ ಮೊದಲಾದವುಗಳನ್ನು ವರ್ಜಿಸಲೇಬೇಕು. ಎಣ್ಣೆ ಹಾಗೂ ಉಪ್ಪಿನ ಬಳಕೆ ಹಿತಮಿತವಾಗಿರಬೇಕು. ಚಹಾ, ಕಾಫಿ ಸೇವನೆ, ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಅಥವಾ ಇನ್ನಿತರ ಮಾದಕ ವಸ್ತುಗಳ ಬಳಕೆಯನ್ನು ತ್ಯಜಿಸಬೇಕು.

 

ನಿಂಬೆಹಣ್ಣು:

ಸ್ವಲ್ಪ ನಿಂಬೆ ರಸ ಕುಡಿದರೂ ಸಾಕು ಕೂಡಲೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿ ವಿಟಮಿನ್ ಸಿಯೊಂದಿಗೆ ಇನ್ನೂ ಸಾಕಷ್ಟು ಪೋಷಕಾಂಶಗಳು ರಕ್ತ ದ ಒತ್ತಡ ಕಡಿಮೆಯಾಗುತ್ತದೆ.

 

 

ಬಾಳೆಹಣ್ಣು:

ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ, ವಿಟಮಿನ್ ಬಿ6, ವಿಟಮಿನ್ ಸಿ, ಮೆಗ್ನಿಷಿಯಂ ಹೆಚ್ಚಾಗಿ ಬಾಳೆಹಣ್ಣಿನಲ್ಲಿ ಇದ್ದು ಬಿಪಿ ನಿಯಂತ್ರಣದಲ್ಲಿರುತ್ತದೆ.

 

 

ಬೀಟ್‌ ರೂಟ್‌ :

ರಕ್ತದೊತ್ತಡ ನಿವಾರಣೆಗೆ ಬೀಟ್‌ರೂಟ್‌ ಕೂಡ ಉತ್ತಮ ಪರಿಹಾರ, ಬೀಟ್‌ರೂಟ್‌ನಲ್ಲಿ ನೈಸರ್ಗಿಕವಾಗಿ ದೊರೆಯುವ ಹೆಚ್ಚಿನ ಪ್ರಮಾಣದಲ್ಲಿ ಇನ್‌ಆರ್‌ಗಾನಿಕ್ ನೈಟ್ರೇಟ್ ಅಡಕವಾಗಿದೆ.ನೈಟ್ರಿಕ್ ಆಕ್ಸೈಡ್ ಆಗಿ ಮಾರ್ಪಡುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸುವುದರ ಜತೆಗೆ ಅದನ್ನು ಶಾಂತವಾಗಿರಿಸುತ್ತದೆ.

 

 

ಬೆಳ್ಳುಳ್ಳಿ:

ನಿತ್ಯ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನಬೇಕು ಇದು ರಕ್ತನಾಳಗಳಲ್ಲಿ ಶೇಖರವಾಗಿರುವ ಕೊಬ್ಬನ್ನು ತೊಲಗಿಸಿ ರಕ್ತ ಸಂಚಾರವನ್ನು ಸರಾಗವಾಗಿಸುವ ಗುಣ ಬೆಳ್ಳುಳ್ಳಿಯಲ್ಲಿದೆ.

 

 

ದ್ರಾಕ್ಷಿ:

ದ್ರಾಕ್ಷಿ ಹಣ್ಣಿನಲ್ಲಿ ಪೊಟ್ಯಾಷಿಯಂ, ಪಾಸ್ಪರಸ್ ಇರುವುದರಿಂದ ಸೋಡಿಯಂ ಕಿಡ್ನಿಇಂದ ಹೊರಹೋಗುತ್ತದೆ ರಕ್ತ ದ ಒತ್ತಡ ಕಡಿಮೆಯಾಗುತ್ತದೆ.

 

 

ಎಳನೀರು:

ಸೋಡಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿಯಂತಹ ಅನೇಕ ಪೋಷಕಗಳೊಂದಿಗೆ ಎಳನೀರಿನಲ್ಲಿ ಪೊಟ್ಯಾಷಿಯಂ ಸಹ ಹೇರಳವಾಗಿರುತ್ತದೆ ಸುಲಭವಾಗಿ ಬಿಪಿ ನಿಯಂತ್ರಣದಲ್ಲಿರುತ್ತದೆ.

 

 

ಕೊತ್ತಂಬರಿ:

ಆಂಟಿ ಮೈಕ್ರೋಬಿಯಲ್, ಆಂಟಿ ಡಿಪ್ರೆಸೆಂಟ್, ಆಂಟಿ ಇನ್‌ಫ್ಲಾಮೇಟರಿ ಆಗಿದ್ದು ಇವು ಬ್ಲಡ್ ಶುಗರ್, ಕೊಲೆಸ್ಟ್ರಾಲ್, ಬಿಪಿಯನ್ನು ಕಡಿಮೆ ಮಾಡುತ್ತವೆ.

 

 

ಎಲೆಕೋಸು ಮತ್ತು ಪಾಲಕ್‌:

ತರಕಾರಿಯನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು.

 

 

ಕಲ್ಲಂಗಡಿ:

ಕಲ್ಲಂಗಡಿಯಲ್ಲಿ ಅರ್ಗಿನೈನ್ ಎಂಬ ಅಮೈನೋ ಆಸಿಡ್ ಹೇರಳವಾಗಿರುತ್ತದೆ. ರಕ್ತ ಹೆಪ್ಪುಗಟ್ಟದಂತೆ ಮಾಡುವ ಗುಣಗಳು ಇದಕ್ಕಿವೆ. ಇದರಿಂದ ರಕ್ತ ಸಂಚಾರ ಸರಾಗವಾಗುತ್ತದೆ.

 

 

ಈರುಳ್ಳಿ ರಸ ಮತ್ತು ಜೇನುತುಪ್ಪ:

ಅಧಿಕ ರಕ್ತದೊತ್ತಡವಿದ್ದವರು ಈರುಳ್ಳಿ ರಸ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಕಲೆಸಿ ಮೂರರಿಂದ ನಾಲ್ಕುವಾರ ಸೇವಿಸಬೇಕು.
ಅಡಿನೋಸಿನ್ ಎಂಬ ಸ್ನಾಯುಗಳ ರಿಲ್ಯಾಕ್ಸೆಂಟ್ ಇರುತ್ತದೆ. ಇದು ಬಿಪಿಯನ್ನೂ ನಿಯಂತ್ರಣಕ್ಕೆ ತರುತ್ತದೆ.

 

 

ಪುದೀನಾ:

ಪುದೀನಾದಲ್ಲಿನ ಔಷಧಿ ಗುಣಗಳು ರಕ್ತನಾಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತೊಲಗಿಸುತ್ತದೆ. ಇದರಿಂದ ರಕ್ತ ಸಂಚಾರ ಸುಲಭವಾಗಿ ಬಿಪಿ ನಿಯಂತ್ರಣದಲ್ಲಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top