fbpx
ಕಿರುತೆರೆ

ಡ್ರಾಮಾ ಚಿತ್ರವನ್ನ ಲೂಸ್ ಮಾದ ಯೋಗಿ ಮಾಡಬೇಕಿತ್ತು ಆದ್ರೆ ಈ ಕಾರಣದಿಂದ ಬಿಟ್ಟುಕೊಟ್ಟಿದ್ದರಂತೆ.

ಲೂಸ್ ಮಾದ ಎಂದೇ ಹೆಸರಾಗಿರುವ ನಟ ಯೋಗಿ. ದುನಿಯಾ ಚಿತ್ರದಲ್ಲಿ ಲೂಸ್ ಮಾದ ಅನ್ನೋ ಸಣ್ಣದೊಂದು ಪಾತ್ರದ ಮೂಲಕ ಹೆಸರು ಮಾಡಿದ ಯೋಗಿ ನಂತರ ಅದೇ ಹೆಸರಲ್ಲೇ ಗುರುತಿಸಿಕೊಂಡು ಬಂದವರು. ಜಿಂಕೆಮರಿ ಸಿನಿಮಾದಿಂದ ಹೀರೋ ಆಗಿ ಹೊರಹೊಮ್ಮಿದ ಯೋಗಿ ನಂತರದ ದಿನಗಳಲ್ಲಿ ಕನ್ನಡದ ಟಾಪ್ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದವರು. ವರ್ಷಕ್ಕೆ ಐದಾರು ಸಿನಿಮಾಗಳು ರಿಲೀಸಾಗೋ ಮಟ್ಟಕ್ಕೆ ಯೋಗಿ ಬ್ಯುಸಿಯಾಗಿದ್ದ ನಟ. ಇಂಥ ಯೋಗಿಗೆ ಈಗ ಸಿನಿಮಾಗಳೇ ಕಡಿಮೆಯಾಗಿಬಿಟ್ಟಿವೆ.

 

 

ಅದೃಷ್ಟ ಕೈಕೊಟ್ಟ ಕಾರಣವೋ ಏನೋ ಚಿಗರೆಯಂತೆ ಕುಣಿಯುವ, ತೊಡೆ ತಟ್ಟಿ ಫೈಟ್ ಮಾಡುವ, ಭಾವನಾತ್ಮಕ ದೃಶ್ಯಗಳಲ್ಲಾಗಲೀ, ಹಾಸ್ಯ ಪಾತ್ರದಲ್ಲಾಗಲಿ ಸಮರ್ಥವಾಗಿ ನಟಿಸುವ ಪ್ರತಿಭಾವಂತ ಯೋಗಿ. ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಂಡ ಕಾರಣಕ್ಕೋ ಏನೋ ಈ ಹುಡುಗ ಭಯಂಕರ ಸೋಲುಗಳನ್ನನುಭವಿಸಿ ಭಾಳಾ ಬೇಸರಕ್ಕೊಳಗಾಗುವಂತೆ ಆಗಿದೆ.. ಅದೇನೇ ಇರಲಿ ಈತ ಸ್ಟಾರ್ ನಂತರ ಸಾಲಿನಲ್ಲಿ ಗುರುತಿಸಿ ಕೊಂಡಿದ್ದ ಸಮಯದಲ್ಲಿ ಈತನೂ ಕೂಡ ಒಳ್ಳೆಯ ಸಿನಿಮಾಗಳನ್ನು ಬೇರೆಯವರಿಗೆ ಕೊಟ್ಟಿದ್ದಾನೆ. ಅವುಗಳಲ್ಲಿ ಯಶ್ ನಟಿಸಿದ್ದ ಮತ್ತು ಅವರ ವೃತ್ತಿ ಬದುಕಿಗೆ ತಿರುವು ಕೊಟ್ಟಿದ್ದ ಸೂಪರ್ ಹಿಟ್ ಚಿತ್ರವಾದ ಡ್ರಾಮಾ ಚಿತ್ರ ಕೂಡ ಒಂದು. ಈವಿಷ್ಯವನ್ನು ಸ್ವತಃ ಯೋಗಿನೇ ಹೇಳಿಕೊಂಡಿದ್ದಾರೆ.

 

 

ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನೆನ್ನೆಯ ಸಂಚಿಕೆಯಲ್ಲಿ ನಟ ಯೋಗಿ, ಮತ್ತು ದಿಗಂತ್ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ಯೋಗಿ ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದಲ್ಲಿ ಚರ್ಚೆ ನಡೆಸುವಾಗ ಹೀಗೆ ನಿರ್ದೇಶಕರ ಬಗ್ಗೆ ವಿಷಯವೊಂದು ಬಂತು ಆಗ ಯೋಗರಾಜ್ ಭಟ್ ಅವರ ಬಗ್ಗೆ ಮಾತನಾಡಿದ ಯೋಗಿ “ನಾನು ಭಟ್ರು ಜೊತೆ ಒಂದ್ ಚಿತ್ರ ಕೂಡ ಮಾಡಿಲ್ಲ. ಆದರೆ ಡ್ರಾಮಾ ಚಿತ್ರ ಮೊದಲು ನನಗೆ ಬಂದಿದ್ದು, ಡೇಟ್ಸ್ ಸಮಸ್ಯೆಯಿಂದ ಮಾಡೋದಕ್ಕೆ ಆಗಿರಲಿಲ್ಲ, ಡೇಟ್ಸ್ ಅಡ್ಜಸ್ಟ್ ಮಾಡಬಹುದಾ, ಸ್ವಲ್ಪ ಲೇಟ್ ಆಗಿ ಮಾಡೋಣವಾ ಅಂತ ಯೋಗರಾಜ್ ಭಟ್ ಬಳಿ ಕೇಳಿದೆ. ಆದರೆ ಅವರು ಆಗಲ್ಲ ಅಂತ ಸ್ಟಾರ್ಟ್ ಮಾಡಿಬಿಟ್ರು” ಎಂದು ನೆನಪನ್ನು ಬಿಚ್ಚಿಟ್ಟರು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top