ಉದ್ಯೋಗ

ಮತ್ತೊಮ್ಮೆ ಭರ್ಜರಿ ಉದ್ಯೋಗಾವಕಾಶಗಳ ನೇಮಕಾತಿ ಹೊರಡಿಸಿದ ರೈಲ್ವೆ ಇಲಾಖೆ

ಇತ್ತೀಚಿಗೆ ರೈಲ್ವೆ ಇಲಾಖೆಯಲ್ಲಿ 90 ಸಾವಿರ ಖಾಲಿ ಹುದ್ದೆಗಳಿವೆ ನೇಮಕಾತಿ ಆದೇಶವನ್ನು ಹೊರಡಿಸಿದ್ದ ಭಾರತೀಯ ರೈಲ್ವೆ ಇಲಾಖೆ ಈಗ ಇನ್ನೊಮ್ಮೆ ಭರ್ಜರಿ ಉದ್ಯೋಗಾವಕಾಶಗಳಿಗೆ ನೇಮಕಾತಿ ಆದೇಶ ಹೊರಡಿಸುವ ಮೂಲಕ ನಿರುದ್ಯೋಗಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ. ಕೇಂದ್ರ ರೈಲ್ವೆ ಸಚಿವರಾಗಿರುವ ಪಿಯೂಷ್ ಗೋಯಲ್ ಒಟ್ಟು 9500 ಹುದ್ದೆಗಳಿಗಾಗಿ ನೇಮಕಾತಿ ಆದೇಶ ಹೊರಡಿಸಿದ್ದಾರೆ.

 

 

ಟ್ವಿಟ್ ಮಾಡಿ ಮಾಹಿತಿ ತಿಳಿಸಿರುವ ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯೆಲ್. ಆರ್ಪಿಎಫ್ ಕ್ಯಾಟಗರಿ ಅಡಿಯಲ್ಲಿ ನೇಮಕಾತಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇದರಲ್ಲಿ ಶೇಕಡಾ 50ರಷ್ಟು ಮಹಿಳಾ ಮೀಸಲಾತಿ ಕೂಡ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

 

 

ಅರ್ಜಿ ಸಲ್ಲಿಸಬಯಸುವವರು www.indianrailways.gov.in ವೆಬ್ಸೈಟ್ನಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು www.indianrailways.gov.in ನ ಅಧಿಕೃತ ವೆಬ್ಸೈಟ್ ಮೂಲಕ ಹಾಕಬೇಕಗುತ್ತದೆ.

ಅದರಲ್ಲಿ ಒದಗಿಸಲಾದ ಅಧಿಸೂಚನೆ ಮತ್ತು ಸೂಚನೆಗಳನ್ನು ಓದಿಕೊಳ್ಳಿ.

 

 

ಸಂಪೂರ್ಣ ಸೂಚನೆಗಳನ್ನು ಓದಿದ ನಂತರ ಎಚ್ಚರಿಕೆಯಿಂದ ಸ್ಪರ್ಧಿಗಳು ಆನ್ಲೈನ್ ​​ಅರ್ಜಿ ಸಲ್ಲಿಸುವ ಲಿಂಕ್ ಒತ್ತಿ ಮತ್ತು ಅಗತ್ಯವಾದ ಮತ್ತು ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.

ಅಪ್ಲೈಯರ್ಸ್ ತಮ್ಮ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ / ಪ್ರಮಾಣಪತ್ರ / ಸಿಗ್ನೇಚರ್ ಅನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಅಗತ್ಯವಿದ್ದಲ್ಲಿ ಅಪ್ಲೋಡ್ ಮಾಡಬೇಕು.

 

ಭವಿಷ್ಯದಲ್ಲಿ ಮತ್ತಷ್ಟು ಬಳಕೆಗಾಗಿ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

ಅಧಿಕೃತ ವೆಬ್ಸೈಟ್: www.indianrailways.gov.in

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top