fbpx
ಕಿರುತೆರೆ

ಸಿಟಿಬಿಟ್ಟು ಹಳ್ಳಿ ಹಾದಿ ಹಿಡಿಯಲಿರುವ 12 ಪ್ಯಾಟೆ ಬೆಡಗಿಯರು ಇವರೇ..

ಕನ್ನಡ ಕಿರುತೆರೆಯ ರಿಯಾಲಿಟಿಶೋಗಳ ಅಬ್ಬರಕ್ಕೆ ನಾಂದಿ ಹಾಡಿದ್ದ ರಿಯಾಲಿಟಿ ಷೋ ಆದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮ ಮತ್ತೆ ಬರುತ್ತಿದೆ. ಅಭಿನಯ ಚಕ್ರವರ್ತಿ 2008ರಲ್ಲಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬಂದಿದ್ದ ಈ ಕಾರ್ಯಕ್ರಮ ನಂತರದ ಸೀಸನ್ ಗಳನ್ನ ಅಕುಲ್ ಮತ್ತು ಸಂತೋಷ್ ನಡೆಸಿಕೊಟ್ಟಿದ್ದರು. ಮೂರು ಆವೃತ್ತಿಗಳ ಭಾರಿ ಯಶಸ್ಸಿನ ನಂತರ ಸುವರ್ಣ ವಾಹಿನಿಯು ಈಗ ಆರಂಭವಾಗುತ್ತಿರುವ ನಾಲ್ಕನೇ ಆವೃತ್ತಿ ಮತ್ತೆ ಅಕುಲ್ ಬಾಲಾಜಿ ಸಾರಥ್ಯದಲ್ಲಿ ಮೂಡಿಬರುತ್ತಿದೆ,

 

 

ನಗರ ಪ್ರದೇಶದಲ್ಲಿ ಬೆಳೆದು ನಗರ ಜೀವನ ಶೈಲಿಗೆ ಒಗ್ಗಿಕೊಂಡಿರುವ ಮತ್ತು ಹಳ್ಳಿಯ ಸೊಗಡಿನ ಗಂಧವನ್ನು ತಿಳಿಯದ ಯುವತಿಯರು ಸುಮಾರು ಮೂರು ತಿಂಗಳ ಕಾಲ ಸಿಟಿ ಬಿಟ್ಟು ಹಳ್ಳಿಯಲ್ಲಿಯೇ ವಾಸ್ತವ್ಯ ಹೂಡುವುದು ಈ ಸ್ಪರ್ಧೆಯ ಮೂಲ ಗಮ್ಮತ್ತು. ಸ್ಪರ್ಧಿಗಳು ನಗರದ ಐಷಾರಾಮಿ ಜೀವನವನ್ನು ಸಂಪೂರ್ಣವಾಗಿ ತೊರೆದು ಮೂಲಭೂತ ಸೌಕರ್ಯಗಳನ್ನು ಪಡೆಯಲು ಹಳ್ಳಿಯಲ್ಲಿ ಪರದಾಡುವ ಪರಿಸ್ಥಿಯ ಹಂದರವೇ ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಕಾರ್ಯಕ್ರಮದ ಮೇಲುನೋಟ. ಸ್ಪರ್ಧಿಗಳು ಮೊಬೈಲ್ ಫೋನ್‌ ಸೇರಿದಂತೆ ಎಲ್ಲ ಬಗೆಯ ಸಂಪರ್ಕಗಳಿಂದ ದೂರವಿರುತ್ತಾರೆ.

ಪ್ರತಿದಿನ ನೀಡಲಾಗುವ ವಿವಿಧ ಬಗೆಯ ಸವಾಲುಗಳನ್ನು ಸ್ವೀಕರಿಸಿ ತಮ್ಮತಮ್ಮಲ್ಲಿಯೇ ಸೆಣಸಾಡಬೇಕಾಗುತ್ತದೆ. ಪ್ರತಿ ವಾರವೂ ಎಲಿಮಿನೇಷನ್ ಪ್ರಕ್ರೀಯೆ ನಡೆಯಲಿದ್ದು ಯಾರು ಕಾರ್ಯಕ್ರಮದ ಎಲ್ಲ ಸವಾಲುಗಳನ್ನು ಸಮರ್ಪಕವಾಗಿ ಎದುರಿಸತ್ತಾ ಮತ್ತು ವೀಕ್ಷಕರ ವಿಶ್ವಾಸವನ್ನು ಉಳಿಸಿಕೊಂಡು ಬರುತ್ತಾರೋ ಅವರು ವಿಜೇತರಾಗಿ ಆಯ್ಕೆಯಾಗುತ್ತಾರೆ.

 

 

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4 ಆಡಿಷನ್ ಮುಕ್ತಾಯವಾಗಿದ್ದು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಸ್ಪರ್ಧಿಗಳ ವಿವರ ಇಂತಿದೆ.. ದೆಹಲಿಯ ಅರ್ಪಿತ,ಉಡುಪಿಯ ಅಭಿಗ್ನ, ಬೆಂಗಳೂರಿನ ಹುಡುಗಿಯರಾದ ಭಾವನಾ, ಪ್ರತೀಕ್ಷ, ಆಸಿಯಾ ಬೇಗಂ, ಮೆಬೀನಾ, ಪ್ರತೀಕ್ಷ, ಶಮಿತಾ, ಶಹನ್ ಪೊನ್ನಮ್ಮ, ಶರಣ್ಯ, ಭವಿನ್ ಮತ್ತು ಸ್ಪೂರ್ತಿ ಗೌಡ.,ಮತ್ತು ‘ಅಧ್ಯಕ್ಷ’ ಮತ್ತು ‘ಆಟಗಾರ’ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಪ್ರಿಯಾಂಕ ಕೂಡ ಪ್ಯಾಟೆಹುಡುಗಿಯರ ಜೊತೆ ಸ್ಪರ್ಧೆಗೆ ಇಳಿಯಲಿದ್ದಾರೆ.

 

 

ಇದೇ ಮಾರ್ಚ್.26ರಿಂದ ಆರಂಭವಾಗಲಿದ್ದು ಪ್ರತಿದಿನ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.. ಈಗಾಗಲೇ ಗ್ರಾಂಡ್ ಓಪನಿಂಗ್ ಸೆರೆಮನಿ ಸಮಾರಂಭದ ಶೂಟಿಂಗ್ ಮುಗಿದಿದ್ದು ಶಿವಣ್ಣ, ರಚಿತಾ ರಾಮ್, ಮಾನ್ವಿತ್ ಕಾಮತ್ ಸೇರಿದಂತೆ ಕೆಲ ಸ್ಯಾಂಡಲ್ ವುಡ್ ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top