ಆರೋಗ್ಯ

ಉಗುರು ಸುತ್ತು ಅಥವಾ ವಿಟ್ಲೌ ಸೋಂಕಿಗೆ ಮನೆ ಮದ್ದು

ಉಗುರು ಸುತ್ತು ಅಥವಾ ವಿಟ್ಲೌ ಸೋಂಕಿಗೆ ಮನೆ ಮದ್ದು

 

 

ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡು ಖಾಯಿಲೆಯಾದ್ದರಿಂದ ಸೋಂಕಾದ ಜಾಗವನ್ನು ಬಟ್ಟೆ ಇಂದ ಕಟ್ಟಿಕೊಳ್ಳಬೇಕು.

 

 

ನೋವಾದಾಗ ಊತ ಕಡಿಮೆ ಮಾಡಿಕೊಳ್ಳಲು ಐಸ್ ಪ್ಯಾಕ್ ಸಹ ಬಳಸಬಹುದು .

 

 

ನೀರಿಗೆ ಸ್ವಲ್ಪ ಉಪ್ಪು ಹಾಕಿ ಕೈಯನ್ನು ನೆನೆಯಲು ಬಿಟ್ಟರೆ ಒಳ್ಳೆಯದು.

 

 

ಕೈಯನ್ನು ತೊಳೆಯುವಾಗ dettol ಅಥವಾ ಸೋಪನ್ನು ಬಳಸಬೇಕು.

 

ಬೇವು ಮತ್ತು ನಾರಗಸೆ(ಲಿನ್ಸೀಡ್) ಇವುಗಳ ಮಿಶ್ರಣವನ್ನು ಮಾಡಿಕೊಂಡು ಸೋಂಕಾದ ಜಾಗಕ್ಕೆ ಹಚ್ಚಿ ಬಟ್ಟೆ ಇಂದ ಅಥವಾ ಬ್ಯಾಂಡೆಡ್ ನಿಂದ ಕಟ್ಟಿಕೊಳ್ಳಬೇಕು.

 

 

 

ನುಗ್ಗೆ ಗಿಡದ ಎಲೆಗಳನ್ನು, ನೀರಗುಂಡಿ ಎಲೆಗಳನ್ನು ಸಮ ಪ್ರಮಾಣದಲ್ಲಿ ತಗೆದುಕೊಂಡು ಸ್ವಲ್ಪ ಸೈನ್ಧವ ಲವಣವನ್ನು ಬೆರೆಸಿ ಸೋಂಕಾದ ಜಾಗಕ್ಕೆ ಹಚ್ಚಿ ಬಟ್ಟೆ ಇಂದ ಅಥವಾ ಬ್ಯಾಂಡೆಡ್ ನಿಂದ ಕಟ್ಟಿಕೊಳ್ಳಬೇಕು.

 

 

ಆಮ್ಲ, ಅಳಲೆಕಾಯಿ , ತಾರೆಕಾಯಿ ಇವುಗಳ ಸಮ ಪ್ರಮಾಣವನ್ನು ಸ್ವಲ್ಪ ನೀರಲ್ಲಿ ಒಂದು ದಿನ ನೆನೆಸಿ ನಂತರ ನಿಂಬೆ ರಸವನ್ನು ಸೇರಿಸಿ ಸೋಂಕಾದ ಜಾಗಕ್ಕೆ ಹಚ್ಚಿ ಬಟ್ಟೆ ಇಂದ ಅಥವಾ ಬ್ಯಾಂಡೆಡ್ ನಿಂದ ಕಟ್ಟಿಕೊಳ್ಳಬೇಕು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top