fbpx
ಮನೋರಂಜನೆ

ನಟಿ ಮೇಘನಾ ಗಾಂವ್ಕರ್‌ರನ್ನು ಡೇಟಿಂಗ್‌ಗೆ ಕರೆದ ಫಟಿಂಗ: ಅವಾಂತರ ಹುಟ್ಟುಹಾಕಿದ್ದಾನೆ ಕಿಡಿಗೇಡಿ

ಸಿನಿಮಾ ಮತ್ತು ಸೀರಿಯಲ್ ನಟಿಯರ ಪಾಲಿಗೆ ಫೇಸ್ ಬುಕ್‌, ಟ್ವಿಟರ್ ನಂಥಾ ಸಾಮಾಜಿಕ ಜಾಲ ತಾಣಗಳು ಕಂಟಕವಾಗುತ್ತಿವೆಯಾ? ಇತ್ತೀಚೆಗೆ ನಡೆಯುತ್ತಿರೋ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಈ ಪ್ರಶ್ನೆಗೆ ಹೌದು ಎಂಬ ಉತ್ತರವೇ ಪಕ್ಕಾ ಆಗುವಂತಿದೆ. ಈ ಹಿಂದೆ ಶ್ರುತಿ ಹರಿಹರನ್ ಫೇಕ್ ಫೇಸ್ ಬುಕ್ ಅಕೌಂಟು ಕ್ರಿಯೇಟ್ ಮಾಡಿದ್ದ ಕಿಡಿಗೇಡಿಗಳು ಕೊಡಬಾರದ ಕಾಟ ಕೊಟ್ಟಿದ್ದರು. ಇತ್ತೀಚೆಗೆ ಪತ್ರಕರ್ತ ರವಿಬೆಳಗೆರೆ ಪುತ್ರಿ ಭಾವನಾ ಬಗ್ಗೆ ಇಂಥಾದ್ದೇ ಕಿರುಕುಳಕ್ಕೀಡಾದ ಬಗ್ಗೆ ನಾವೇ ವರದಿ ಮಾಡಿದ್ದೆವು.

 

 

ಸೋಷಿಯಲ್ ಮೀಡಿಯಾ, ಇಂಟರ್ ನೆಟ್ ಎನ್ನುವುದು ಈವತ್ತಿಗೆ ಎಲ್ಲೇ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು. ಅದರಲ್ಲಿಯೂ ಫೇಸ್ ಬುಕ್ ಖಾತೆ ಹೊಂದಿರೋ ಹೆಣ್ಣುಮಕ್ಕಳ ಪಾಡಂತೂ ಹೇಳತೀರದು. ಹೆಣ್ಣುಮಕ್ಕಳ ಬೇಟೆಗೆಂದೇ ಇನ್‌ಬಾಕ್ಸಲ್ಲಿ ಹೊಂಚಿಕೂತ ಆನ್‌ಲೈನ್ ಕಾಮುಖರ ಹಿಂಡೊಂದು ಫೇಸ್‌ಬುಕ್ಕಲ್ಲಿ ಜಮೆಯಾಗಿದೆ.

ಈಗ ಇಂಥದ್ದೇ ಘಟನೆಯೊಂದು ನಡೆದಿದ್ದು ಟಿಂಡರ್ ಆಪ್’ನಲ್ಲಿ ಈಕೆಯ ಫೇಕ್ ಅಕೌಂಟ್ ಸೃಷ್ಟಿಸಿ ಯಾರೋ ಕಿಡಿಗೇಡಿ ಅವಾಂತರ ಮಾಡಿದ್ದಾನೆ. ಟಿಂಡರ್ ಆಪ್ ಎನ್ನುವುದು ಎನ್ನುವುದು ಇಂಟರ್ ನ್ಯಾಷನಲ್ ಡೇಟಿಂಗ್ ಆ್ಯಪ್ ಆಗಿದ್ದು ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಡೇಟಿಂಗ್ ಬಯಸುವವರು ಈ ಆಪ್’ನ ಬಳಕೆದಾರರಾಗಿರುತ್ತಾರೆ. ಬಳಕೆದಾರರಲ್ಲಿ ತಮ್ಮಗಿಷ್ಟ ಬಂದವರಿಗೆ ಡೇಟಿಂಗ್’ಗೆ ಕರೆಯಬಹುದು.

 

 

ಈ ಆಪ್ ಬಳಸಿ ಯಾರೋ ಮೇಘನಾ ಹೆಸರಲ್ಲಿ ಅಕೌಂಟ್ ಮಾಡಿಕೊಂಡು ಕಂಡ ಕಂಡವರಿಗೆ ಡೇಟಿಂಗ್ ಬರುವಂತೆ ಕರೆದು ವಿನಾಕಾರಣ ನಟಿಯ ಹೆಸರನ್ನು ಕೆಡಿಸುತ್ತಿದ್ದಾನೆ. ಈ ವಿಷ್ಯ ಈಗ ನಟಿಯ ಕಿವಿಗೆ ಬಿದ್ದಿದ್ದು ಅಪರಿಚಿತ ವ್ಯಕ್ತಿಯೊಬ್ಬ ” ನಾನು ಟಿಂಡರ್ ಆಪ್’ನಲ್ಲಿ ನಿಮ್ಮ ಜೊತೆ ಮಾತನಾಡಿದ್ದೇನೆ. ನೀವು ನನ್ನ ಜೊತೆ ಡೇಟಿಂಗ್’ಗೆ ಬರುತ್ತೀರಾ” ಎಂದು ಈ-ಮೇಲ್ ಮಾಡಿದ್ದಾನೆ.. ಈ ಮೇಲ್ ನೋಡಿ ಎಚ್ಚೆತ್ತುಕೊಂಡ ನಟಿ ಟ್ವಿಟರ್ ನಲ್ಲಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

 

 

” ಟಿಂಡರ್‌ ಆ್ಯಪ್‌ನಲ್ಲಿ ನಾನಿಲ್ಲ, ಹಿಂದೆಯೂ ಇರಲಿಲ್ಲ. ಮುಂದಯೂ ನಾನು ಬರಲು ಖಂಡಿತಾ ಸಾಧ್ಯವಿಲ್ಲ. ನನ್ನ ಹೆಸರು, ಫೋಟೋ ಬಳಸಿಕೊಂಡು ಯಾವುದಾದರೂ ಅಕೌಂಟ್’ಗಳು ಇದ್ದರೆ ದಯವಿಟ್ಟು ರಿಪೋರ್ಟ್ ಮಾಡಿ. ಯಾರೋ ಒಬ್ಬ ನನಗೆ ಡೇಟಿಂಗ್ ಬರುವಂತೆ ಇಮೇಲ್‌ ಮಾಡಿದ್ದಾನೆ” ಎಂದು ಬರೆದುಕೊಂಡಿದ್ದಾರೆ. ಮೇಘನಾ ಗಾವ್ಕರ್ ಅವರೇ ಕೊಳಕು ಮನಸ್ಥಿತಿಯ ಕೆಲ ಕ್ರಿಮಿಗಳಿಂದ ಇಂತಾ ಪಾಡು ಪಡುತ್ತಿದ್ದಾರೆಂದರೆ ಇನ್ನುಳಿದ ಹೆಣ್ಣುಮಕ್ಕಳ ಪಾಡನ್ನು ಊಹಿಸೋದೂ ಕಷ್ಟ, ಇಂತವರನ್ನು ಶೀಘ್ರವೇ ಹತ್ತಿಕ್ಕದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top