fbpx
ಕಿರುತೆರೆ

ಖ್ಯಾತ ‘ಶನಿ’ ಧಾರಾವಾಹಿ ಬಾಲಕ ಒಬ್ಬ ಅನಾಥ ಹುಡುಗ: ಕೇಳಿ ಈತನ ಜೀವನದ ವ್ಯಥೆ

ಕಿರುತೆರೆ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ‘ಶನಿ’ ಧಾರಾವಾಹಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಇದೀಗ ಯಶಸ್ವಿಯಾಗಿ 100 ಎಪಿಸೋಡ್ ಗಳನ್ನೂ ಪೂರೈಸಿದೆ. ಈ ಧಾರಾವಾಹಿಯ ಹೈಲೈಟ್ ಶನಿಯ ಪಾತ್ರ ಮಾಡಿರುವ ಬಾಲಕ ಸುನಿಲ್. ತನ್ನ ಬೆಂಕಿಯಂತ ಕಣ್ಣೋಟ ಖಡಕ್ ಅಭಿನಯದಿದಂದ ವೀಕ್ಷಕರ ಮೆಚ್ಚುಗೆ ಗಳಿಸಿಕೊಂಡಿರುವ ಈತ ಧಾರಾವಾಹಿಯ ರೀತಿ ನಿಜಜೀವನದಲ್ಲೂ ತನ್ನ ಮಾತೃ ಪ್ರೀತಿಯಿಂದ ವಂಚಿತನಾಗಿದ್ದಾನೆ, ಅರ್ಥಾತ್ ಈತ ಸುನಿಲ್ ಬೆಳೆಯುತ್ತಿರುವುದು ಅನಾಥಾಶ್ರಮದಲ್ಲಿ.

 

 

ಅನಾಥನಾಗಿರುವ ಸುನಿಲ್ ಚಿಕ್ಕಂದಿನಿಂದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಪುತ್ರ ನಡೆಸಿಕೊಂಡು ಬರುತ್ತಿರುವ ಚಾಮರಾಜನಗರದ ದೀನಬಂದು ಅನಾಥಶ್ರಮದಲ್ಲಿ ಬೆಳೆದು ಅದೇ ಟ್ರಸ್ಟ್ ನವರದ್ದೇ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾನೆ.

ಸಣ್ಣ ವಯಸ್ಸಿನಿಂದಲೂ ಅಭಿನಯದಲ್ಲಿ ಆಸಕ್ತಿ ಹೊಂದಿದ್ದ ಈತ ಶನಿ ದಾರಾವಾಹಿಗಾಗಿ ನಡೆದ ಅಡಿಷನ್ ನಲ್ಲಿ ತನ್ನ ಅಭಿನಯ ಕೈಶಲ್ಯವನ್ನು ತೋರಿಸಿ 500 ಹುಡುಗರಲ್ಲಿ ಶನಿ ಪಾತ್ರಕ್ಕೆ ಆಯ್ಕೆಯಾಗಿದ್ದ. ಕೇವಲ ಅಭಿನಯ ಮಾತ್ರವಲ್ಲದೆ ಈ ಚೆಲುವನಿಗೆ ಡ್ಯಾನ್ಸ್ ಎಂದರೆ ಕೂಡ ಪಂಚಪ್ರಾಣ.

 

 

ಸದ್ಯ ಶನಿ ದಾರಾವಾಹಿಯ ಶೂಟಿಂಗ್’ಗಾಗಿ ಮಹಾರಾಷ್ಟ್ರದ ಗುಜರಾತ್ ಗಡಿಯಲ್ಲಿ ಹಾಕಲಾಗಿರುವ ಬೃಹತ್ ಸೆಟ್ ನಲ್ಲಿ ಧಾರಾವಾಹಿಯ ಶೂಟಿಂಗ್ ನಲ್ಲಿ ಸುನಿಲ್ ಬ್ಯುಸಿಯಾಗಿದ್ದು ತಿಂಗಳಿಗೆ ಒಮ್ಮೆ ತನ್ನ ಆಶ್ರಮಕ್ಕೆ ತೆರಳಿ ತನ್ನ ಸ್ನೇಹಿತರ ಜೊತೆ ಮಾತನಾಡಿಕೊಂಡು ಬರುತ್ತಾನೆ. ಭವಿಷ್ಯದಲ್ಲಿ ಉತ್ತಮ ನಟನಾಗಬೇಕು ಎಂದು ಅಸೆ ಇಟ್ಟುಕೊಂಡಿರುವ ಈ ಮುಗ್ದ ಪ್ರತಿಭೆಗೆ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹದ ಅವಶ್ಯಕತೆಯಿದ್ದು ಆತ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಉತ್ತಮ ಪ್ರೋತ್ಸಹ, ಅವಕಾಶ ಸಿಗಲಿ ಎನ್ನುವುದೇ ನಮ್ಮ ಆಶಯ,.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Shivanand says:

Super nanu sani Serial Daily nodatini.sani actor madata earuva sunilana fans nanu

To Top