ಅಣ್ಣಾವ್ರು ತಾವು ಹಾಡೋ ಹಾಡಿಂದ ಬಂದ ದುಡ್ಡು ಏನ್ ಮಾಡ್ತಿದ್ರು
ಗೊತ್ತಾ ?
ಅಣ್ಣಾವ್ರು ಶುಶ್ರಾವ್ಯ ಕಂಠಕ್ಕೆ ಮನಸೋಲದೆ ಇರೋರೆ ಇಲ್ಲ , ಅದ್ಭುತ ನಟ ಇದರಲ್ಲಿ ಎರಡು ಮಾತಿಲ್ಲ ,ಇದಕ್ಕೆ ಅವರು ಪಡೆದ ಬಿರುದುಗಳು ಹಾಗು ಪ್ರಶಸ್ತಿಗಳೇ ಕಾರಣ.
ಬಹು ಕಲೆಯ ವ್ಯಕ್ತಿ ನಟನೆಯೊಂದೇ ಅಲ್ಲದೆ ಹಾಡು , ಸಾಮಾಜಿಕ ಕಾರ್ಯ , ಯೋಗ ಹೀಗೆ ಅನೇಕ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಅಣ್ಣಾವ್ರು ಸಂಗೀತ ಸಂಜೆ , ರಸ ಮಂಜರಿಗಳು ಹಾಗು ಇತರ ಸಂಗೀತ ಕಾರ್ಯಕ್ರಮಗಳ ಜೊತೆಗೆ , ಭಕ್ತಿ ಗೀತೆಗಳ , ದೇವರ ಭಜನೆಗಳ ಕ್ಯಾಸೆಟ್ ಗು ಸಹ ಹಾಡುತ್ತಿದ್ದರು .
ಅದ್ಭುತ ನಟನೊಳಗೊಂದು ಅದ್ಭುತ ಗಾಯಕ ರಿದ್ದಾರೆ ಎಂಬುದು ಮನೆಮಾತು ಹಾಗು ಅಂದಿನಿಂದ ಎಲ್ಲರಿಗು ಗೊತ್ತಿರುವ ವಿಷಯವೇ ಆಗಿದೆ .
ಇದಕ್ಕೆ ಇಂಬುಕೊಡುವಂತೆ ‘ಜೀವನ ಚೈತ್ರ’ ಚಿತ್ರದ ‘ನಾದಮಯ’ ಹಾಡಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದಿದ್ದರು .
ಆದರೆ ಅಷ್ಟು ಬ್ಯುಸಿಯಾಗಿದ್ದ ಅಣ್ಣಾವ್ರು ಹಾಡುತ್ತಿದ್ದದ್ದು ಏಕೆ ಗೊತ್ತಾ ?
ಶಾಸ್ತ್ರೀಯ ಸಂಗೀತವನ್ನು ಬಹಳ ಇಷ್ಟಪಟ್ಟು ಕಲಿತ್ತಿದ್ದ ಅಣ್ಣಾವ್ರು ತಾವು ಸಂಗೀತ ಸಂಜೆ , ರಸ ಮಂಜರಿಗಳು ಹಾಗು ಇತರ ಸಂಗೀತ ಕಾರ್ಯಕ್ರಮಗಳಿಂದ ಬಂದ ಬಹು ಪಾಲು ಹಣವನ್ನು ಮೈಸೂರಿನ ‘ಶಕ್ತಿ ಧಾಮ’ ಕ್ಕೆ ನೀಡುತ್ತಿದ್ದರು , ಶಕ್ತಿಧಾಮ ಪಾರ್ವತಮ್ಮನವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಸ್ಥೆ .
ಬೀದಿಗೆ ಬಿದ್ದ ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಈ ಸಂಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅಣ್ಣಾವ್ರ ಕುಟುಂಬವೇ ನೋಡಿಕೊಳ್ಳುತ್ತಿದೆ ,ನೂರಾರು ನಿರಾಶ್ರಿತ ಮಹಿಳೆಯರಿಗೆ ದಾರಿದೀಪವಾಗಿದೆ.
ತಂದೆಗೆ ತಕ್ಕ ಮಗ ಪುನೀತ್ ಸಹ ತಂದೆಯಂತೆಯೇ ಸಜ್ಜನ , ಪುನೀತ್ ರಾಜಕುಮಾರ್ ಕೈಯಲ್ಲಿ ಹಾಡಿಸಿದ್ರೆ ಆ ಸಿನೆಮಾ ಹಿಟ್ ಆಗುತ್ತೆ ಅನ್ನೋಅಷ್ಟು ಮಟ್ಟಿಗೆ ಡೈರೆಕ್ಟರ್ಗಳಿಗೆ ಪುನೀತ್ ರ ಹಾಡಿನ ಮೇಲೆ ನಂಬಿಕೆ ಇದೆ ತಾವು ಹಾಡೋ ಹಾಡಿಂದ ಬರುವ ಗೌರವ ಧನವನ್ನು ಅಣ್ಣಾವರಂತೆಯೇ ಪುನೀತ್ ಸಹ ಸಮಾಜಮುಖಿ ಕೆಲಸಕ್ಕೆ ತೊಡಗಿಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
