ಉದ್ಯೋಗ

10ನೇ ಕ್ಲಾಸ್ ಪಾಸಾದವರಿಗೆ ವಾಯು ಸೇನೆಯಲ್ಲಿ ಭರ್ಜರಿ ಉದ್ಯೋಗಾವಕಾಶ

10 ತರಗತಿ ಮುಗಿಸಿದವರಿಗೆ ಭಾರತೀಯ ವಾಯು ಸೇನೆಯಲ್ಲಿ ಉದ್ಯೋಗದ ಸುವರ್ಣಾವಕಾಶ ಇದೆ. ಉದ್ಯೋಗಗಳ ವಿವರಗಳು ಈ ಕೆಳಗಿನಂತಿವೆ.

 

 

ಹುದ್ದೆ :

ಮಲ್ಟಿ ಟಾಸ್ಕಿಂಗ್ ಸ್ಟಾಫ್ : 90 ಪೋಸ್ಟ್

ಕೆಳ ವಿಭಾಗದ ಕ್ಲರ್ಕ್ : 06 ಪೋಸ್ಟ್

ಅಡುಗೆ ಮಾಡುವವರು: 08 ಪೋಸ್ಟ್

ಅಡುಗೆ ಸಹಾಯಕರು: 5 ಪೋಸ್ಟ್

ಹೌಸ್ ಕೀಪಿಂಗ್ ಸ್ಟಾಫ್: 19 ಪೋಸ್ಟ್

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ : ಮಾರ್ಚ್ 19, 2018ರಿಂದ 30 ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಹತೆ : ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿ ಪಾಸಾಗಿರಬೇಕು. ಕೆಳ ವಿಭಾಗದ ಕ್ಲರ್ಕ್ ಗೆ 12ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಪ್ರತಿ ನಿಮಿಷಕ್ಕೆ 30-35 ಶಬ್ಧವನ್ನು ಟೈಪ್ ಮಾಡುವ ಅರ್ಹತೆ ಹೊಂದಿರಬೇಕು.

 

 

 

ವಯೋಮಾನದ ಮಿತಿ : 18 ರಿಂದ 25 ವರ್ಷದೊಳಗಿನವರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕೌಶಲ್ಯ, ಶಾರೀರಿಕ ಪರೀಕ್ಷೆ ಮೂಲಕ ಆಯ್ಕೆ ಮಾಡುತ್ತಾರೆ.

 

 

ಅರ್ಜಿ ಸಲ್ಲಿಸುವ ವಿಧಾನ : http://careerairforce.nic.in ಗೆ ಹೋಗಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಷನ್ ತುಂಬಿ 5 ರೂಪಾಯಿ ಸ್ಟಾಂಪ್ ನ್ನು ಅಂಟಿಸಿ ಅಲ್ಲಿ ನೀಡಿರುವ ವಿಳಾಸಕ್ಕೆ ಕಳುಹಿಸಿ ಕೊಡಬೇಕು.

ಸಂಬಳ : ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ಸಂಬಳ ದೊರೆಯಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top