fbpx
ಕಿರುತೆರೆ

ಶೀಘ್ರವೇ ಯಶ್ ನಿರೂಪಣೆಯಲ್ಲಿ ಬರಲಿದೆ ಕನ್ನಡದ ಕೋಟ್ಯಧಿಪತಿ!

ಕೋಟ್ಯಧಿಪತಿ ಕಾರ್ಯಕ್ರಮ ಎಂಬ ಕಾರ್ಯಕ್ರಮ ಯಾವ ಮಟ್ಟಿಗೆ ಜನಮಾನಸದಲ್ಲಿ ಹೆಸರು ಮಾಡಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ, ಎರಡು ಸೀಸನ್ ಗಳನ್ನೂ ಯಶಸ್ವಿಯಾಗಿ ನಡೆದಿದ್ದ ಈ ಕಾರ್ಯಕ್ರಮ ಅದ್ಯಾಕೋ ಗೊತ್ತಿಲ್ಲ ಮುಂದಿನ ಸೀಸನ್’ಗಳು ಪ್ರಾರಂಭವಾಗಿರಲಿಲ್ಲ. ಆದರೀಗ ಮೂರನೇ ಸೀಸನ್ ಶುರುಮಾಡಲು ತೆರೆ ಮರೆಯಲ್ಲಿ ಸಿದ್ದತೆಗಳು ಜೋರಾಗಿ ನಡೆಯುತ್ತಿವೆ ಎಮ್ ಸುದ್ದಿಗಳು ಹರಿದಾಡುತ್ತಿದೆ.

 

 

ಈ ಹಿಂದಿನ 2 ಸೀಸನ್’ಗಳನ್ನೂ ಅನ್ನು ಪುನೀತ್ ರಾಜ್ ಕುಮಾರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು ಆದರೆ ಸದ್ಯ ಪುನೀತ್ ಕಲರ್ಸ್ ನಲ್ಲಿ ಹೊಸ ಮಾಡುತ್ತಿರುವುದರಿಂದ ಈ ಭಾರಿ ಕನ್ನಡದ ಕೋಟ್ಯಾಧಿಪತಿ ಸೀಸನ್ 3ನ್ನು ನಡೆಸಿಕೊಡೋದಕ್ಕೆ ಪುನೀತ್’ನಿಂದ ಸಾಧ್ಯವಾಗೋಲ್ಲ. ಹಾಗಾಗಿ ಈ ಶೋವನ್ನು ಯಾರು ನಡೆಸಿಕೊಡುತ್ತಾರೆ ಎಂಬುದು ಕುತೂಹಲಕರ ಸಂಗತಿಯಾಗಿದೆ..

ಕೋಟ್ಯಾಧಿಪತಿಯ ಹೊಸ ಸೀಸನ್ ಕಾರ್ಯಕ್ರಮವನ್ನು ರಾಕಿಂಗ್ ಸ್ಟಾರ್ ಯಶ್ ನಡೆಸಿಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ..ಕಲರ್ಸ್ ಚಾನೆಲ್ ನಲ್ಲಿ ಬಿಗ್ ಬಾಸ್, ಫ್ಯಾಮಿಲಿ ಪವರ್ ನಂತರ ದೊಡ್ಡ ಶೋಗಳು ಮೂಡಿಬರುತ್ತಿರುವುದರಿಂದ ಸುವರ್ಣ ವಾಹಿನಿಯು ಸ್ವಲ್ಪ ಮಟ್ಟಿಗೆ ತನ್ನ ಟಿಆರ್’ಪಿ ಬಲವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಯಶ್’ರೊಂದಿಗೆ ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಮಾಡುತ್ತಿದೆ ಎಂಬ ಸುದ್ದಿ ಎಲ್ಲಾ ಕಡೆ ಹರಡಿದೆ.

 

 

ಸದ್ಯ ಕೆಜಿಎಫ್‌ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ಯಶ್‌ ಚಿತ್ರದ ಶೂಟಿಂಗ್ ಮುಕ್ತಾಯವಾದ ನಂತ್ರ ಶೋ ನಲ್ಲಿ ಭಾಗಿಯಾಗಲಿದ್ದಾರಂತೆ. ಈ ಸಂಭಂದ ಈಗಾಗಲೇ ಎಲ್ಲ ಒಪ್ಪಂದಗಳಿಗೂ ಯಶ್ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸುವರ್ಣ ಚಾನೆಲ್ ಆಗಲಿ ಅಥವಾ ಯಶ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗಗೊಳ್ಳಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top