fbpx
ಐಪಿಎಲ್

ಐಪಿಎಲ್ ಆರಂಭಕ್ಕೂ ಮುಂಚೆಯೇ RCB ತಂಡಕ್ಕೆ ಆಘಾತ: ತಂಡದ ಸ್ಟಾರ್ ಆಟಗಾರ ಔಟ್ ಮತ್ತೋರ್ವ ಆಲ್ರೌಂಡರ್ ಇನ್..!

ಗಾಯದ ಸಮಸ್ಯೆಗೂ ಆರ್ಸಿಬಿ ತಂಡಕ್ಕೂ ಅವಿನಾಭಾವ ಸಂಭಂದವಿದ್ದಂತೆ ಕಾಣುತ್ತಿದ್ದೆ, ಕಳೆದ ಸೀಸನ್ನಿನಲ್ಲಿ ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ತಂಡವನ್ನು ಹೊರಗುಳಿದಿದ್ದರು. ಈಗ ಕೂಡ ಅದೇ ಮರುಕಳಿಸಿದೆ. ಐಪಿಎಲ್ 11ನೇ ಆವೃತ್ತಿಗೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು ಈ ಭಾರಿ ಏನೇ ಆಗಲಿ ಕಪ್ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿರುವ ನಮ್ಮ ಬೆಂಗಳೂರಿನ ಆರ್ಸಿಬಿ ತಂಡಕ್ಕೆ ಟೂರ್ನಿ ಆರಂಭವಾಗುವುದಕ್ಕೂ ಮುಂಚೆಯೇ ಭಾರಿ ಆಘಾತವಾಗಿದೆ. ಈ ಭಾರಿ RCB ತಂಡ ಕೊಂಡುಕೊಂಡಿದ್ದ ಸ್ಟಾರ್ ಆಲ್ ರೌಂಡರ್ ಆಸ್ಟ್ರೇಲಿಯಾದ ನಾಥನ್ ಕೌಲ್ಟರ್-ನಿಲ್ ಕೆಲವು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಇನ್ನೂ ಚೇತರಿಕೆಯಾಗದ ಕಾರಣ ಟೂರ್ನಿ ಆರಂಭಕ್ಕೂ ಮುನ್ನವೇ ತಂಡದಿಂದ ಹೊರಬಿದ್ದಿದ್ದಾರೆ.

 

 

ಗಾಯದ ಸಮಸ್ಯೆಯಿಂದ ತಂಡದಿಂದ ಹೊರ ಉಳಿದ ನಾಥನ್ ಕೌಲ್ಟರ್-ನಿಲ್ ಅವರ ಬದಲಿಗೆ ನ್ಯೂಜಿಲೆಂಡ್ ಮತ್ತೊಬ್ಬ ಸ್ಟಾರ್ ಆಲ್ರೌಂಡರ್ ಅನಿಸಿಕೊಂಡಿರುವ ಕೋರಿ ಆಂಡರ್’ಸನ್ RCB ತಂಡವನ್ನು ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೋರಿ ಆಂಡರ್’ಸನ್ ಡೆಲ್ಲಿ ಡೇರ್’ಡೆವಿಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು.

ಈ ಬಾರಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೋರಿ ಅಂಡರ್’ಸನ್ ಅವರನ್ನು ಯಾವೊಬ್ಬ ಪ್ರಾಂಚೈಸಿ ಕೊಂಡುಕೊಂಡಿರಲಿಲ್ಲ ಇದೀಗ ತಂಡಕ್ಕೆ ಆರ್ಸಿಬಿ ತಂಡಕ್ಕೆ ಆ ಅನಿವಾರ್ಯತೆ ಎದುರಾಗಿದ್ದು ಕಿವೀಸ್ ಆಲ್ರೌಂಡರ್’ನನ್ನು ಮೂಲಬೆಲೆ 2 ಕೋಟಿ ರುಪಾಯಿಗೆ ಖರೀದಿಸಿದೆ. ಐಪಿಎಲ್ ಟೂರ್ನಿ ಏಪ್ರಿಲ್ 7 ರಿಂದ ಆರಂಭಗೊಳ್ಳಲಿದ್ದು ಕೋಲ್ಕತಾ ಆರ್ ಸಿಬಿಯ ಮೊದಲ ಎದುರಾಳಿಯಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top