fbpx
ಮನೋರಂಜನೆ

ಈ ಭಾರಿ ಹಾಟ್ ಸೀಟ್ ನಲ್ಲಿ ಅಣ್ತಮ್ಮ ಕೂರೋದು ಗ್ಯಾರಂಟಿ

 

ಕನ್ನಡ ಕಿರುತೆರೆಯಲ್ಲಿ ಸದ್ಯ ಬಿಗ್ ಬಾಸ್ ಕಾರ್ಯಕ್ರಮದದ್ದೆ ಹವಾ ಹೀಗಿರುವಾಗ ಇನ್ನು ಸ್ವಲ್ಪ ದಿನಗಳಲ್ಲೇ ಪುನೀತ್ ನಡೆಸಿಕೊಡುತ್ತಿರುವ ಹೊಸ ರಿಯಾಲಿಟಿ ಷೋ ಕೂಡ ಶುರುವಾಗುತ್ತಿದೆ.. ಇತ್ತ ಕಲರ್ಸ್ ಚಾನೆಲ್’ಗಳಲ್ಲಿ ಕಿಚ್ಚ ಮತ್ತು ಅಪ್ಪು ಕಿರುತೆರೆಯನ್ನು ಆಕ್ರಮಿಸಿಕೊಂಡಿರುವಾಗ ಅತ್ತ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಸೀಸನ್ 3ನ್ನು ಶುರು ಮಾಡಲು ಸುವರ್ಣ ಚಾನೆಲ್ ಮುಂದಾಗಿದೆ ಎಂಬ ಸುದ್ದಿ ಈಗ ಕಾಳ್ಗಿಚ್ಚಿನಂತೆ ಹರಡಿದೆ… ಮುಂದೆ ಓದಿ

 

 

ಈ ಹಿಂದಿನ 2 ಸೀಸನ್’ಗಳನ್ನೂ ಅನ್ನು ಪುನೀತ್ ರಾಜ್ ಕುಮಾರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು ಆದರೆ ಸದ್ಯ ಪುನೀತ್ ಕಲರ್ಸ್ ನಲ್ಲಿ ಹೊಸ ಮಾಡುತ್ತಿರುವುದರಿಂದ ಈ ಭಾರಿ ಕನ್ನಡದ ಕೋಟ್ಯಾಧಿಪತಿ ಸೀಸನ್ 3ನ್ನು ನಡೆಸಿಕೊಡೋದಕ್ಕೆ ಪುನೀತ್’ನಿಂದ ಸಾಧ್ಯವಾಗೋಲ್ಲ. ಕೋಟ್ಯಾಧಿಪತಿಯ ಹೊಸ ಸೀಸನ್ ಕಾರ್ಯಕ್ರಮವನ್ನು ರಾಕಿಂಗ್ ಸ್ಟಾರ್ ಯಶ್ ನಡೆಸಿಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

 

 

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುವ ಬಗ್ಗೆ ಕಲರ್ಸ್ ಚಾನೆಲ್ ನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರುಗಳು ಶೋಗಳನ್ನು ಮಾಡುತ್ತಿರುವುದರಿಂದ ಸುವರ್ಣ ವಾಹಿನಿಯು ಸ್ವಲ್ಪ ಮಟ್ಟಿಗೆ ತನ್ನ ಟಿಆರ್’ಪಿ ಬಲವನ್ನು ಹೆಚ್ಚಿಸಿಕೊಳ್ಳಲು ಯಶ್’ರೊಂದಿಗೆ ಕನ್ನಡದ ಕೋಟ್ಯಾಧಿಪತಿ ಸೀಸನ್ 3 ಮಾಡುತ್ತಿದೆ ಎಂಬ ಸುದ್ದಿ ಎಲ್ಲಾ ಕಡೆ ಹರಡಿದೆ. ಆದರೆ ಈ ಬಗ್ಗೆ ಸುವರ್ಣ ಚಾನೆಲ್ ಆಗಲಿ ಅಥವಾ ಯಶ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.

 

 

ಇದೀಗ ಈ ಸುದ್ದಿ ಪಕ್ಕಾ ಆಗಿದ್ದು ಪುನೀತ್ ಅವರ ಜಾಗಕ್ಕೆ ಯಶ್ ಬರುತ್ತಾರೆ ಏಪ್ರಿಲ್ ನಿಂದ ಈ ಶೋ ಪ್ರಸಾರವಾಗಲಿದೆ ಶೋನ ಸಕಲ ಸಿದ್ಧತೆಗಳು ನಡೆಯುತ್ತಿವೆ .

ಸದ್ಯಕ್ಕೆ ಎಸ್ ತಮ್ಮ ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಶೂಟಿಂಗ್ನಲ್ಲಿದ್ದಾರೆ ಇದಾದ ನಂತರ ಹಾಟ್ ಸೀಟ್ನಲ್ಲಿ ಕೂತು ಸ್ಪರ್ಧಿಗಳಿಗೆ ಪ್ರಶ್ನೆ ಕೇಳುವ ಕೆಲಸ ಶುರು ಮಾಡುತ್ತಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top