fbpx
ದೇವರು

ಶ್ರೀ ರಾಮನವಮಿಯ ಸಂಜೆ ಈ ಕೆಲಸವನ್ನು ಮಾಡಿ ಸಾಕು ಕೋಟಿ ಜನ್ಮಗಳ ಪುಣ್ಯ ಫಲ ನಿಮ್ಮದಾಗುತ್ತದೆ

ಶ್ರೀ ರಾಮನವಮಿಯ ದಿನ ಈ ಕೆಲಸ ಮಾಡಿದರೆ ಸಾಕು ಕೋಟಿ ಜನ್ಮಗಳ ಪುಣ್ಯ ಫಲ ಬರುತ್ತದೆ.

 

ದಶಾವತಾರಗಳಲ್ಲಿ ಒಂದು ಶ್ರೀರಾಮನ ಅವತಾರ. ಮರ್ಯಾದ ಪುರುಷೋತ್ತಮನಾದ ರಾಮನು ಕೇವಲ ಮರ್ಯಾದಾ ಪುರುಷೋತ್ತಮನೇ ಅಲ್ಲ ಪಿತೃ ವಾಕ್ಯ ಪರಿಪಾಲಕನು ,ಸಹೃದಯ ಬಾತೃ ಅಷ್ಟೇ ಅಲ್ಲ ಪತ್ನಿಗೆ ಸಮಾನವಾದ ಹಕ್ಕುಗಳನ್ನು ನೀಡಿ ಸಹಭಾಗಿತ್ವ ನೀಡಿ ಏಕಪತ್ನಿ ವ್ರತಸ್ಥನಾಗಿ ತನ್ನ ಜೀವನದ ಉದ್ದಕ್ಕೂ  ಆದರ್ಶಗಳ ಮೇಲೆ ನೆಲೆಯೂರಿನಿಂತವನು  ಶ್ರೀರಾಮಚಂದ್ರನು.

 

 

ಅಂತಹ ರಾಮಭದ್ರನಿಗೆ ಆರಾಧಿಸುವವರು ಸಾಕಷ್ಟು ಜನ. ಯಾಕೆ ಅಂದ್ರೆ ಶ್ರೀರಾಮನು ನಮ್ಮವನು ತೀರಾ ಹತ್ತಿರದವನು ಎನ್ನುವ ಅಭಿಮಾನ ವಿಶ್ವಾಸ ನಂಬಿಕೆ ನಮ್ಮ ಮನಸ್ಸುಗಳಲ್ಲಿ ಇದೆ.ಅಷ್ಟು ಹತ್ತಿರವಾದ ಆ ಮರ್ಯಾದ ಪುರುಷೋತ್ತಮನಾದ ಶ್ರೀರಾಮನು ಆತನ ನಾಮವೇ ಅಷ್ಟು ಅದ್ಭುತವಾದದ್ದು. ಸಕಲ ಪಾಪಗಳನ್ನು ತೊಳೆದು ಹಾಕುವುದು.

ದಾಸರು ಹೇಳುತ್ತಾರೆ “ರಾಮ ನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ” ಎಂದು. ಹೌದು ಪುರಂದರದಾಸರು ಹೀಗೆಂದು ಹಾಡಿ ಹೊಗಳಿದ್ದಾರೆ. ಶ್ರೀರಾಮನ ಹೆಸರಿನ ಒಂದು ಅಕ್ಷರವನ್ನು ಜಪಿಸಿದರೆ ಸಾಕು ನಮ್ಮ ಸಕಲ ಸಂಕಷ್ಟಗಳು ತೊಳೆದುಕೊಂಡು ಹೋಗುತ್ತವೆ. ಇನ್ನು ಶ್ರೀರಾಮನ ಹೆಸರಿನಲ್ಲಿರುವ ಒಂದೊಂದು ಅಕ್ಷರವನ್ನು ಜಪಿಸುತ್ತಾ ಹೋದರೆ ನಮ್ಮ ಜೀವನವು ಸಾರ್ಥಕದ ಕಡೆಗೆ ಸಾಗಿ ಆತನ ಆದರ್ಶಗಳು ನಮ್ಮ ಜೀವನದಲ್ಲಿ ಒಂದಾಗಿ ಹಾಸುಹೊಕ್ಕಾಗಿ ಹೋಗುತ್ತವೆ.

 

 

ಈ ರಾಮಕೋಟಿಯನ್ನು  ಮನಸಾ ವಾಚಾ ಕರ್ಮೇಣ ರಾಮ ನಾಮವನ್ನು  ಸ್ಮರಿಸುತ್ತಾ ಜಪಿಸುತ್ತಾ ಆ ಮಧುರವಾದ ನಾಮವನ್ನು ಪರಮ ಪವಿತ್ರವಾದ ನಾಮವನ್ನು ಬರೆಯುವುದು. ಹೀಗೆ ರಾಮಕೋಟಿ ಬರೆಯಲು ಆಶಿಸುವವರು ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಅದೇನು  ಅಂದ್ರೆ ರಾಮ ಕೋಟಿಯನ್ನು ಬರೆಯಬೇಕು ಎಂದು ನಿರ್ಣಯ ತೆಗೆದುಕೊಂಡಾಗ ಅದನ್ನು ಕಟ್ಟುನಿಟ್ಟಾಗಿ ನಿರ್ಮಲವಾದ ಮನಸ್ಸಿನ ನಾವು ಶಾಂತ ಚಿತ್ತದಿಂದ ಬರೆಯುವ ಕಾರ್ಯವನ್ನು ಆರಂಭಿಸಬೇಕು.

ಹೀಗೆ ಬರೆಯುವಾಗ ಅನಗತ್ಯ ಕೆಲಸಗಳಿಗೆ, ಅನಗತ್ಯ ವಿಷಯಗಳ ಕಡೆ ಗಮನ ಹರಿಸಬಾರದು. ಮಲಗಿಕೊಂಡು ನೆಲದ ಮೇಲೆ ಕುಳಿತುಕೊಂಡು ಅಪಸವ್ಯ ರೀತಿಯಲ್ಲಿ ಶ್ರೀರಾಮ ಕೋಟಿಯನ್ನು ಬರೆಯಬಾರದು. ಇನ್ನೂ ಮುಖ್ಯವಾಗಿ ಸಾಧ್ಯವಾದಲ್ಲಿ ಹಸಿರು ಬಣ್ಣದ ಶಾಯಿಯಿಂದ ಶ್ರೀ ರಾಮ ಕೋಟಿಯನ್ನು ಬರೆದರೆ ಇನ್ನು ಉತ್ತಮ. ಪದ್ಮಾಸನ ಹಾಕಿಕೊಂಡು ಭಗವಂತನ ಚಿತ್ರಪಟದ ಅಥವಾ ಪೂಜಾ ಮಂದಿರದಲ್ಲಿ ಕುಳಿತುಕೊಂಡು ಭಗವಂತನ ಅಭಿಮುಖವಾಗಿ ಕುಳಿತುಕೊಂಡು ಏಕೋ ಚಿತ್ತದಿಂದ ರಾಮ ಕೋಟಿಯನ್ನು ಬರೆಯಬೇಕು.

ಇನ್ನು ಮುಖ್ಯವಾಗಿ ಮಹಿಳೆಯರು ಆ ಮೂರು ದಿನಗಳು ರಾಮಕೋಟಿ ಪುಸ್ತಕವನ್ನು  ಮುಟ್ಟಬಾರದು ಹಾಗೂ ಬರೆಯಲೇ ಬಾರದು. ಅಷ್ಟೇ ಅಲ್ಲದೆ ಹುಟ್ಟು ಮತ್ತು ಸಾವು  ಸೂತಕಗಳಲ್ಲಿ ಕೂಡ ರಾಮಕೋಟಿಯನ್ನು  ಬರೆಯಬಾರದು. ನೀವು ರಾಮಕೋಟಿ ಬರೆಯಲು ಚಿಂತಿಸಿದರೆ ಅದನ್ನು ಪುನರ್ವಸು ನಕ್ಷತ್ರ ಅ ದಿನದಿಂದ ಆರಂಭಿಸಿ ಮತ್ತೆ ಅದೇ ನಕ್ಷತ್ರಕ್ಕೆ ಅಂತ್ಯಗೊಳ್ಳುವ ರೀತಿಯಲ್ಲಿ ಯೋಜನೆ ಮಾಡಿಕೊಂಡು ರಾಮ ಕೋಟೆಯನ್ನು ಬರೆಯಲು ಆರಂಭಿಸಬೇಕು.

 

 

ಈ ರಾಮ ಕೋಟಿಯನ್ನು ಬರೆದು  ಮುಗಿಸಿದ ದಿನ  ಸಾಧ್ಯವಾದಷ್ಟು ಜನರಿಗೆ ಯತಾನುಶಕ್ತಿ ಅನ್ನಸಂತರ್ಪಣೆ ಮಾಡಬೇಕು. ಸಾಯಂಕಾಲ ಬರೆಯುವವರು ಸ್ನಾನಾದಿಗಳನ್ನು ಮುಗಿಸಿಕೊಂಡು ಭೋಜನಕ್ಕಿಂತ  ಮೊದಲೇ ರಾಮಕೋಟಿಯನ್ನು ಬರೆದರೆ ನಿಜವಾಗಲೂ ಜನ್ಮ ಧನ್ಯವಾಗುತ್ತದೆ.

ಇನ್ನೂ ಶ್ರೀ ರಾಮ ಭದ್ರನ ಈ ಶ್ಲೋಕದಿಂದ ಆರಂಭಿಸಿ ರಾಮ ಕೋಟಿಯನ್ನು ಬರೆಯುವುದನ್ನು ಆರಂಭಿಸಬೇಕು. “ಚರಿತಮ್  ರಘುನಾಥ್ ಸ್ಯ ಶತಕೋಟಿ ಪ್ರವಿಸ್ತರಮ್ ಏಕೈಕ ಅಕ್ಷರಂ ಪುಂಸಾಂ  ಮಹಾಪಾತಕ ನಾಶನಂ” ಇದರ ಅರ್ಥ ರಘು ವಂಶದ ಪ್ರಭುವಾದ ಶ್ರೀ ರಾಮಚಂದ್ರನ ಚರಿತ್ರೆ ನೂರು ಕೋಟಿ  ಶ್ಲೋಕಗಳಿಂದ ಕೂಡಿದೆ. ಆ ಶ್ಲೋಕಗಳಲ್ಲಿ ಯಾವುದಾದರೂ ಒಂದು ಅಕ್ಷರವನ್ನು ನಾವು ಉಚ್ಚರಿಸಿ ಮನಸ್ಸಾ ವಾಚ ಜಪಿಸಿದರೆ ಸಮಸ್ತ ಪಾಪಗಳು ಪರಿಹಾರವಾಗಿ ನೂರು ಕೋಟಿ ಜನ್ಮಗಳ ಪುಣ್ಯ ಫಲ ಒದಗಿ ಬರುತ್ತದೆ.

 

 

ಆ ನೂರು ಕೋಟಿ ಶ್ಲೋಕಗಳ ಶ್ರೀ ರಾಮನ ಚರಿತ್ರೆಯನ್ನು ಶ್ರೀ ರಾಮನವಮಿಯ ದಿನ ಒಂದಾದರೂ ಕೇವಲ ಒಂದೇ ಒಂದು ಆಕ್ಷರವಾದರೂ ಪಠಿಸಿದರೆ ಸಾಕು ಸಕಲ ಪಾಪಗಳು ತೊಲಗಿಸಿ, ಪುಣ್ಯವನ್ನು ಸಂಪಾದಿಸಿ ಕೊಡುತ್ತವೆ.ಪಾಪಗಳೆಲ್ಲವೂ ತೊಲಗುತ್ತವೆ ಅಂದರೆ ಅದಾಗಿ ಅದೇ ಎಲ್ಲ ಸಮಸ್ಯೆಗಳು ಕರಗಿಹೋದಂತೆಯೇ ಅಲ್ಲವೇ ? ಇವೆಲ್ಲ ದೂರವಾದರೆ ನಮಗೆ ಅದೃಷ್ಟ ಕುಡಿ ಬರುವುದು. ಶ್ರೀ ರಾಮನ ನಾಮದ ದಿವ್ಯ ಔಷಧಿಯ ಮಹತ್ವ ಎಲ್ಲರಿಗೂ ತಿಳಿದಿದೆ. ಅದರೆ ಈ ಯುಗದಲ್ಲಿ ಕೆಲವರು ಸಮಯವಿಲ್ಲದೆ ಇಲ್ಲವೇ ಮರೆತು ಹೋಗಿ ಕಷ್ಟ ಅನುಭವಿಸುತ್ತಿರುವುದು ನೋಡುತ್ತಲೇ ಇದ್ದೇವೆ. ಈ ರಾಮ ನಾಮ ಅಕ್ಷರವನ್ನು ಪಠಿಸಿ ಬರೆಯುವುದರಿಂದ ಸಕಲ ಪುಣ್ಯ ಫಲವು ಒದಗಿ ಬರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top