fbpx
ಆರೋಗ್ಯ

ಸಾಮಾನ್ಯವಾಗಿ ಎಲ್ಲರು ತಿಳ್ಕೊಳ್ಳೆ ಬೇಕಿರೋ ಕಣ್ಣಿನ ಬಗೆಗಿನ 8 ವಿಷಯಗಳು..

ಕಣ್ಣಿನ ಸಣ್ಣ ಪುಟ್ಟ ಸಮಸ್ಯೆಗಳು ನಮ್ಮ ಇಡೀ ದೇಹದ ಬಗ್ಗೆಯೇ ತಿಳಿಸುತ್ತವೆ.ನಮ್ಮ ಕಣ್ಣು ಎಲ್ಲವನ್ನೂ ಹೇಳುತ್ತವೆಯೇ?? ಹೌದು ಎಲ್ಲವನ್ನು ತಿಳಿಸುತ್ತವೆ. ನಮ್ಮ ದೇಹದ ಬೇರೆ ಬೇರೆ ಅಂಗಾಂಗಗಳ ಕಾಯಿಲೆ ಬಂದಾಗ ಅವುಗಳ ಆ ಚಿಹ್ನೆ ಮತ್ತು ಲಕ್ಷಣಗಳನ್ನು ತಿಳಿಸುತ್ತವೆಯೂ ಇಲ್ಲವೋ, ಆದರೆ ಕಣ್ಣು ಮಾತ್ರ ಖಂಡಿತವಾಗಿಯೂ ತಿಳಿಸುತ್ತವೆ.

 

ಈ ಕೆಳಗಿನ ಎಂಟು ಸಂಗತಿಗಳನ್ನು ಗುರುತಿಸಿ ಗಮನ ಹರಿಸಿ ಆಗ ನಿಮ್ಮ ಕಣ್ಣುಗಳು ಏನು ಹೇಳುತ್ತವೆ ಎಂದು ತಿಳಿಯುತ್ತದೆ.

 

1.ಕುಮ್ಮಟ ಅಥವಾ ಕಣ್ಣಿನ ಮೇಲೆ ಆಗುವ ಗುಳ್ಳೆ.

 

ಈ ಗುಳ್ಳೆ ಅಥವಾ ಕುಮ್ಮಟ ವನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.ಇದು ತುಂಬಾ ಕಿರಿಕಿರಿ ಮತ್ತು ನೋವುಂಟು ಮಾಡುತ್ತದೆ. ಒಂದೇ ಸಮಯದಲ್ಲಿ ಯಾವ ಮುನ್ನೆಚ್ಚರಿಕೆ ಇಲ್ಲದೆ ತಕ್ಷಣ ಬಂದು ಬಿಡುತ್ತದೆ ಮತ್ತು ಹಾಗೆಯೇ ಸ್ವಲ್ಪ ದಿನಗಳಲ್ಲಿ ಇದ್ದಕಿದ್ದಂತೆ ಮಾಯವಾಗುತ್ತದೆ. ಒಂದು ಪಕ್ಷ ಇದು ಬಹಳ ದಿನಗಳು ಇದ್ದಲ್ಲಿ 3 ತಿಂಗಳುಗಳ ಕಾಲ ಉಳಿದುಕೊಂಡು ಬಿಡುತ್ತದೆ. ಇದು ಒಂದು ತುಂಬಾ ವಿರಳವಾದ ಖಾಯಿಲೆಯ ಮುನ್ಸೂಚನೆಯನ್ನು ಕೊಡುತ್ತದೆ. ಆ ಖಾಯಿಲೆಯ ಹೆಸರು(ಚರ್ಮದ ಮೇಲೆ ಬೆವರನ್ನು ಉತ್ಪಾದನೆ ಮಾಡುವ ಗ್ರಂಥಿಗಳು) ಅಂದರೆ ಸೇಬಿಸಿಯಸ್ ಗ್ರಂಥಿಗಳ ಕ್ಯಾನ್ಸರ್( sebaceous gland cancer).ಇದು ಒಂದೇ ಕಣ್ಣಿನಲ್ಲಿ ಒಂದೇ ಜಾಗದಲ್ಲಿ ಪದೇ ಪದೇ ಕಂಡು ಬಂದರೆ.ಇದು ಕ್ಯಾನ್ಸರ್ ನ ಸೂಚನೆಯಾಗಿದೆ.

 

2.ಕಣ್ಣಿನ ರೆಪ್ಪೆಯ ಮೇಲಿನ ಕೂದಲುಗಳು ಉದುರುವುದು.

 

ಈ ರೀತಿ ಆಗುವುದು ತುಂಬಾ ಸಾಮಾನ್ಯ ಕಾರಣಗಳಿಗೆ ಕೂಡ. ಅದೇನೆಂದರೆ ಸಮತೋಲನ,ಪೌಷ್ಟಿಕಾಂಶ ಭರಿತ ಆಹಾರ ಸೇವಿಸದೇ ಇರುವುದು,ಕಲುಷಿತ ನೀರಿನ ಸೇವನೆ,ಇನ್ನೂ ಅನೇಕ.ಈ ರೀತಿಯ ಸಮಸ್ಯೆ ಇದ್ದರೆ ಇದು ನಮ್ಮ ಶರೀರದಲ್ಲಿ ನಾವು ತೀವ್ರ ತರವಾದ ಖಾಯಿಲೆಯಿಂದ ಬಳಲುವುದನ್ನು ಸೂಚಿಸುತ್ತದೆ ಅದೇ ಥೈರಾಯ್ಡ (thyroid) ಗ್ರಂಥಿಗಳು ಖಾಯಿಲೆ.

 

3.ಕಣ್ಣುಗಳು ಮಬ್ಬಾಗುವುದು.(ದೃಷ್ಟಿ ಮಬ್ಭಾಗಿ ಕಾಣುವುದು)

 

ಇದು ಯಾರು ಜಾಸ್ತಿ ಕುರ್ಚಿಯ ಮೇಲೆ ಕುಳಿತುಕೊಂಡು ಮೇಜಿನ ಮೇಲಿರುವ ಕಂಪ್ಯೂಟರಿನಲ್ಲಿ ದಿನಪೂರ್ತಿ ಕೆಲಸ ಮಾಡುತ್ತಾರೋ ಅಂತಹವರಲ್ಲಿ ಇದು ಸಾಮಾನ್ಯ. ಈಗಿನ ಕಾಲದಲ್ಲಿ ಎಲ್ಲರೂ ಮೊಬೈಲ್, ಟಿ.ವಿ,ಲ್ಯಾಪ್ಟಾಪ್, ಕಂಪ್ಯೂಟರ್ ಮುಂದೆಯೇ ಇರುತ್ತಾರೆ. ಇದು ಕಂಪ್ಯೂಟರ್ ದೃಷ್ಟಿ ರೋಗ ಎಂದು ಕರೆಯುತ್ತಾರೆ.

 

4.ಕುರುಡು ತಾಣಗಳು(blind spots)

 

ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಇದು ಮುಂದೆ ಪ್ರಬಲವಾದ ಖಾಯಿಲೆಗಳಿಗೆ ಕಾರಣವಾಗುತ್ತದೆ. ಇದು ನಿಮ್ಮ ಕಣ್ಣಿನ ದೃಷ್ಟಿಯನ್ನು ಪೂರ್ತಿಯಾಗಿ ಕುರುಡಾಗಿಸಬಹುದು. ಪ್ರಾರಂಭದಲ್ಲಿ ಇದರ ಚಿಹ್ನೆ ಗಳಾದ ಮಿನುಗುವ ಬೆಳಕಿಗೆ ಕಣ್ಣು ಬಿಡಲು ಕಷ್ಟವಾಗುವುದು, ಅಲೆ ಅಲೆಯಾದ ರೇಖೆಗಳು ಕಾಣಿಸುವುದು .ಇದು ಅರ್ದತಲೆನೋವು,ತಲೆಸುತ್ತುವುದು, ಕೊನೆಗೆ ಪೂರ್ತಿಯಾಗಿ ತಲೆನೋವಿಗೆ ಕಾರಣವಾಗುತ್ತದೆ.

 

5.ಊತ ಬಂದಿರುವ ಕಣ್ಣು.

 

ನಿಮ್ಮ ಕಣ್ಣು ಊತ ಬಂದಿರುವುದನ್ನು ನೀವು ಕನ್ನಡಿ ನೋಡಿ ಕಂಡು ಹಿಡಿಯಬಹುದು. ಈ ರೀತಿ ಸರಿಯಾಗಿ ನಿದ್ರೆ ಮಾಡದಿದ್ದರೂ ಆಗುತ್ತದೆ. ಇದರಿಂದ ನೋವು,ಉರಿ ಯುಂಟಾಗುತ್ತದೆ. ಇದು ಕೂಡ ಥೈರಾಯ್ಡ್ ಸಮಸ್ಯೆಯನ್ನು ಸೂಚಿಸುತ್ತದೆ. ಈ ರೀತಿ ಇದ್ದಲ್ಲಿ ಅಧಿಕವಾಗಿ ಥೈರಾಯ್ಡ್ ಹಾರ್ಮೋನ್ಗಳ ಉತ್ಪತ್ತಿಯಾಗುತ್ತಿದೆ ಎಂದರ್ಥ.

 

6.ಕಣ್ಣು ಹಳದಿ ಬಣ್ಣಕ್ಕೆ ತಿರುಗುವುದು.

 

ಇದು ಸಾಮಾನ್ಯವಾಗಿ ಎಲ್ಲಾರಿಗೂ ಗೊತ್ತಿರುವ ಹಾಗೆ ಲಿವರ್ ಅಂದರೆ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವಿರಿ ಎಂಬ ಸೂಚನೆ ನೀಡುತ್ತದೆ. ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ,ಲಿವೆರ್ ಖಾಯಿಲೆ,ಜಾಂಡೀಸ್ ನಂತಹ ಖಾಯಿಲೆಯ ಸೂಚನೆ. ಲಿವೆರ್ ನ ಸಮಸ್ಯೆ ಸಾಮಾನ್ಯವಾಗಿ ಮದ್ಯಪಾನ ಮಾಡುವವರಲ್ಲಿ ಅಧಿಕ ಮತ್ತು ಸಾಮಾನ್ಯ.

 

7.ಕಣ್ಣಿನ ದೃಷ್ಟಿ ಮಬ್ಬಾಗುವಿಕೆ ಮಧುಮೇಹಿಗಳಲ್ಲಿ.

 

ನೀವು ಮಧುಮೇಹ ದಿಂದ ಬಳಲುತ್ತಿದ್ದರೆ ಮತ್ತು ದೃಷ್ಟಿ ಮಬ್ಬಾಗಿ ಕಾಣುತ್ತಿದ್ದರೆ.ಇದು ಮಧುಮೇಹ ದಿಂದಾಗುವ ರೇಟಿನೋಪತಿ(diabetic retinopathy) ಎಂಬ ಖಾಯಿಲೆಯ ಸೂಚನೆಯಾಗಿದೆ.ಕಣ್ಣಿನ ರಕ್ತ ಪರಿಚಲನೆಗೆ ಹಾನಿಯುಂಟು ಮಾಡುತ್ತದೆ.ಇತ್ತೀಚಿನ ಕಾಲದಲ್ಲಿ ಮಧುಮೇಹಿಗಳಲ್ಲಿ ಇದು ಮುಂಚೂಣಿಯಲ್ಲಿರುವ ಖಾಯಿಲೆಯಾಗಿದೆ ಈ ಕಾರಣದಿಂದ ಸಂಪೂರ್ಣವಾಗಿ ಕುರುಡುತನ ಉಂಟಾಗುತ್ತಿದೆ.

 

8.ದೃಷ್ಟಿ ಮಬ್ಬಾಗುವಿಕೆ,ಎರಡು ಎರಡು ದೃಷ್ಟಿ,ಕುರುಡುತನ .

 

ಈ ಮೇಲಿನ ಮೂರರಲ್ಲಿ ಯವುದಾದರು ಒಂದರಿಂದ ನೀವು ಬಳಲುತ್ತಿದ್ದರೆ.ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ.ಇದು ಲಕ್ವ(stroke) ಹೊಡೆಯುವ ಮುನ್ಸೂಚನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top