fbpx
ಆರೋಗ್ಯ

ತಲೆ ನೋವು ,ಸೊಂಟ ನೋವು ,ಕುತ್ತಿಗೆ ನೋವು ಹೀಗೆ ಯಾವುದೇ ನೋವಿದ್ರು ಆಯುರ್ವೇದದ ಈ ಮನೆ ಮದ್ದುಗಳನ್ನ ಮಾಡ್ಕೊಂಡು ವಾಸಿ ಮಾಡ್ಕೊಳ್ಳಿ

ಯಾವುದಾದರೊಂದು ನೋವು ಯಾವಾಗಲೂ ನಮ್ಮನ್ನು ಬಾಧಿಸುತ್ತಿದೆ ಎನ್ನಿಸಿದರೆ ಆಯುರ್ವೇದ ಪ್ರಕಾರ ಪ್ರತಿ ನೋವಿಗೂ ಈ ರೀತಿಯ ಪರಿಹಾರಗಳನ್ನು ನಾವು ಮಾಡಿಕೊಳ್ಳಬಹುದು

 

 

ಈ ರೀತಿಯ ವಿವಿಧ ನೋವುಗಳಿಗೆ ಅನೇಕ ಕಾರಣಗಳಿರುತ್ತವೆ ಇದರಲ್ಲಿ ಮುಖ್ಯವಾದ ಅಂಶಗಳನ್ನು ನಾವು ಗಮನಿಸಬೇಕು ಎಂದರೆ ವಯಸ್ಸು ಹಾಗೂ ಮನಸ್ಥಿತಿ ,ದೇಹಸ್ಥಿತಿ ,ಅನುವಂಶಿಕತೆ ಹಾಗೂ ಭಾವನೆಗಳು ಸಹ ನಮ್ಮ ಆರೋಗ್ಯದ ಮೇಲೆ ಪರಿಹಾರ ಬೀರುತ್ತವೆ ಶರೀರದ ಆರೋಗ್ಯ ಸ್ಥೂಲಕಾಯ ಹಾಗೂ ನಾವು ಬೆಳೆದ ಪರಿಸ್ಥಿತಿ ನಮ್ಮ ಹಾವಭಾವ ಇವೆಲ್ಲವೂ ಸಹ ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ .

ಬನ್ನಿ ಇನ್ನು ನಾವು ಯಾವ ಯಾವ ನೋವುಗಳಿಗೆ ಆಯುರ್ವೇದದ ಪ್ರಕಾರ ಯಾವ ರೀತಿಯ ಮದ್ದುಗಳನ್ನು ಕಂಡು ವಾಸಿ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ

ಕುತ್ತಿಗೆ ನೋವು

 

 

ಕತ್ತಿನ ಮೂಳೆ ಸ್ಥಾನಪಲ್ಲಟವಾದಾಗ ಹಾಗೂ ಸರಿಯಾದ ರೀತಿಯಲ್ಲಿ ನಡೆಯದೇ ಇದ್ದಾಗ ಈ ಸಮಸ್ಯೆ ಕಾಣಸಿಗುತ್ತದೆ ಅಷ್ಟೇ ಅಲ್ಲದೆ ಶಿಕ್ಷಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ ಏಕೆಂದರೆ ಅವರು ಭುಜವನ್ನು ಮೇಲೆ ಮಾಡಿ ಅಕ್ಷರಗಳನ್ನು ಬರೆಯಬೇಕು ಇದರಿಂದಾಗಿ ಕುತ್ತಿಗೆ ಹಾಗೂ ಭುಜವೂ ಹೆಚ್ಚಾಗಿ ಕಾಡುತ್ತದೆ

ಇದಕ್ಕೆ ಪರಿಹಾರಗಳು

ಹೆಚ್ಚು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು ಹಾಗೂ ನೇರವಾಗಿ ನಡೆಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ,ಹೆಚ್ಚು ತೂಕದ ವಸ್ತುಗಳನ್ನು ಎತ್ತು ನಡೆಡಾಡಬಾರದು ,ವೇಗವಾಗಿ ವಾಹನವನ್ನು ಚಲಾಯಿಸಬಾರದು .

ಮೂರು ರಿಂದ ನಾಲ್ಕು ದಿನ ಹುಣಸೆ ಮರದ ಸೊಪ್ಪನ್ನು ಒಂದು ಹಿಡಿಯಷ್ಟು ತೆಗೆದುಕೊಂಡು ಅದನ್ನು ಚೆನ್ನಾಗಿ ಕುಟ್ಟಿ ಮುದ್ದೆಯಂತೆ ಮಾಡಿ ಅದನ್ನು ಕತ್ತಿಗೆ ಪಟ್ಟು ಹಾಕಬೇಕು ಹೀಗೆ ಮಾಡಿದರೆ ಮೂರ್ನಾಲ್ಕು ದಿನದಲ್ಲಿ ಕುತ್ತಿಗೆ ನೋವು ಮಾಯವಾಗುತ್ತದೆ

ಭುಜದ ನೋವು

 

 

ಅತಿಯಾಗಿ ಕೈಗಳನ್ನು ಬಳಸಿ ಕೆಲಸ ಮಾಡುವುದು ಇದಕ್ಕೆ ಮೂಲ ಕಾರಣ ಆದ್ದರಿಂದಾಗಿ ವಿಶ್ರಾಂತಿ ಬಹಳ ಮುಖ್ಯ ಕೈಗಳನ್ನು ಹಾಸಿಗೆಯ ಮೇಲೆ ಇಟ್ಟು ವಿಶ್ರಾಂತಿ ನೀಡಬೇಕು .

ಸೊಂಟ ನೋವು

 

 

ಹೆಣ್ಣುಮಕ್ಕಳಲ್ಲಿ ಋತುಚಕ್ರ ಸರಿಯಾಗಿ ಆಗದೇ ಇದ್ದರೆ ಅಥವಾ ಕಡಿಮೆ ರಕ್ತಸ್ರಾವವಾದರೆ ಈ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ ಇನ್ನು ಅತಿಯಾಗಿ ಕೆಲಸ ಮಾಡುವುದು ಭಾರ ಎತ್ತುವುದು ಸಹ ಈ ಸಮಸ್ಯೆ ಗೆ ಮುಖ್ಯ ಕಾರಣವಾಗುತ್ತದೆ .

ಪರಿಹಾರಗಳು

ಒಂದು ಹಿಡಿಯಷ್ಟು ಬೇವಿನ ಸೊಪ್ಪನ್ನು ತೆಗೆದುಕೊಂಡು ಅದನ್ನುಬಿಸಿ ನೀರಿನಲ್ಲಿ ನೆನೆಸಿಡಬೇಕು ಆ ನಂತರ ಸೋಸಿಕೊಂಡು ಆ ನೀರಿನಿಂದ ಬಟ್ಟೆಯನ್ನು ಹಿಂಡಿ ನೋವಾದ ಜಾಗಕ್ಕೆ ಶಾಖ ಕೊಡಬೇಕು ಹೀಗೆ ಮಾಡಿದರೆ ಎರಡರಿಂದ ಮೂರು ದಿನದಲ್ಲಿ ಸೊಂಟ ನೋವು ಕಡಿಮೆಯಾಗುತ್ತದೆ .

ಎರಡು ಚಮಚ ಗಸಗಸೆ ಎರಡು ಚಮಚ ಕೆಂಪು ಮೆಣಸಿನ ಪುಡಿ ಇದನ್ನು ಸೇರಿಸಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಇದನ್ನು ರಾತ್ರಿಯ ಸಮಯ ಹಾಗೂ ಬೆಳಗಿನ ಜಾವ ಬಿಸಿ ಹಾಲಿನಲ್ಲಿ ಸೇರಿಸಿ ಹತ್ತು ಗ್ರಾಂ ನಷ್ಟು ಮಿಶ್ರಣ ಮಾಡಿ ಕುಡಿಯಬೇಕು .

ಎರಡು ಚಮಚ ಶುಂಠಿ ರಸ ಹಾಗೂ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ನೋವು ಇರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚುತ್ತಾ ಬರಬೇಕು .

ಋತು ಚಕ್ರದ ಹೊಟ್ಟೆ ನೋವು

 

 

ಋತು ಚಕ್ರದ ಹೊಟ್ಟೆ ನೋವಿಂದ ಬಳಲುತ್ತಿರುವವರು ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡಬೇಕು , ಮಾಂಸಾಹಾರವನ್ನು ವಾರದಲ್ಲಿ ಒಂದು ದಿನ ಮಾತ್ರ ಸೇವಿಸಬೇಕು ಹಾಗೆಯೇ ದಿನಕ್ಕೆ ಎರಡು ರೀತಿಯ ಹಣ್ಣುಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು , ಒಂದು ಬಾಟಲ್ ನಲ್ಲಿ ಬಿಸಿ ನೀರನ್ನು ತುಂಬಿಸಿ ಕಿಬ್ಬೊಟ್ಟೆಯ ಕೆಳಗೆ ಇಟ್ಟುಕೊಳ್ಳಬೇಕು ಇದರಿಂದ ನೋವು ಕಡಿಮೆಯಾಗುತ್ತದೆ

ಒಂದು ಚಮಚ ಬೆಲ್ಲವನ್ನು ಒಂದು ಲೋಟ ಮೂಸಂಬಿ ರಸಕ್ಕೆ ಮಿಶ್ರಣ ಮಾಡಿ ಕುಡಿಯುತ್ತಾ ಬರಬೇಕು

ತಲೆನೋವು

 

 

ತಲೆನೋವಿನಿಂದ ಬಳಲುತ್ತಿರುವವರು ಒಂದು ಲೋಟ ನೀರಿಗೆ ಅರ್ಧ ಚಮಚದಷ್ಟು ಸೈಂಧವ ಲವಣ ಅಥವಾ ಹಿಮಾಲಯನ್ ಸಾಲ್ಟ್ ಇದನ್ನು ಬೆರೆಸಿ ಕುಡಿಯಬೇಕು ಇದು ದೇಹದಲ್ಲಿ ಕ್ಷಾರದ ಪ್ರಮಾಣವನ್ನು ಸಮತೋಲನಗೊಳಿಸಿ ತಲೆನೋವನ್ನು ಮಾಯ ಮಾಡುತ್ತದೆ .

ಮೈಗ್ರೇನ್

 

ಅರ್ಧ ಚಮಚದಷ್ಟು ಕಸ್ತೂರಿ ಅರಿಶಿನ ಪುಡಿಯನ್ನು ನೀರಿನಲ್ಲಿ ಮುದ್ದೆ ಮಾಡಿಕೊಂಡು ಹಣೆಗೆ ಪಟ್ಟು ಕಟ್ಟಬೇಕು.

ನೆಲ್ಲಿಕಾಯಿ ಪುಡಿಯನ್ನು ನೀರಿನಲ್ಲಿ ಮುದ್ದೆ ಮಾಡಿಕೊಂಡು ಹಣೆಗೆ ಪಟ್ಟು ಕಟ್ಟಬೇಕು.

ಅರ್ಧ ಹಿಡಿಯಷ್ಟು ನುಗ್ಗೆ ಸೊಪ್ಪನ್ನು ಒಂದು ಚಮಚ ಕಾಳು ಮೆಣಸಿನ ಪುಡಿಯಲ್ಲಿ ಬೆರೆಸಿ ಸೇವನೆ ಮಾಡಬೇಕು

ಪಾದದ ನೋವು ಮೊಣಕಾಲಿನ ನೋವು ಹಾಗೂ ಕೀಲು ನೋವು

 

 

ಪಾದದ ನೋವಿನಿಂದ ಬಳಲುತ್ತಿದ್ದರೆ ಒಂದು ಬಕೆಟ್ ನಲ್ಲಿ ಬಿಸಿ ನೀರನ್ನು ಹಾಕಿಕೊಂಡು ಅದಕ್ಕೆ ಎರಡರಿಂದ ಮೂರು ಚಮಚ ಸೈನ್ಧವ ಲವಣವನ್ನು ಬೆರೆಸಿ ಕಾಲನ್ನು ಹತ್ತರಿಂದ ಹದಿನೈದು ನಿಮಿಷ ಬಿಸಿ ನೀರಿನಲ್ಲಿ ಅದ್ದಿ ಹಾಗೆಯೇ ಬಿಡಬೇಕು

ಮೊಣಕಾಲು ಹಾಗೂ ಕೀಲು ನೋವಿನಿಂದ ಬಳಲುತ್ತಿರುವವರು ನಾಲ್ಕು ಚಮಚದಷ್ಟು ಹುಣಿಸೆ ಬೀಜದ ಪುಡಿಯನ್ನು ಮಾಡಿಕೊಂಡು ಇದನ್ನು ಕಾಲಿಗೆ ಪಟ್ಟು ಕಟ್ಟಿಕೊಳ್ಳಬೇಕು ಆ ನಂತರ ಹದಿನೈದು ನಿಮಿಷದ ನಂತರ ಇದನ್ನು ಶುಭ್ರವಾದ ನೀರಿನಲ್ಲಿ ತೊಳೆದುಕೊಂಡು ಹರಳೆಣ್ಣೆಗೆ ಒಂದು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಕಾಲಿಗೆ ಹಚ್ಚಿ ಹಾಗೆಯೇ ಹತ್ತು ನಿಮಿಷ ಬಿಟ್ಟು ಬಿಡಬೇಕು ಇದರಿಂದ ಕಾಲುಗಳಿಗೆ ವಿಶ್ರಾಂತಿ ದೊರೆಯುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top