fbpx
ಸಿನಿಮಾ

ಈ ಕಾರಣಕ್ಕೆ ಹಗ್ಗಾ-ಜಗ್ಗಾಟಕ್ಕೆ ಬಿದ್ದ ಬಾಲಿವುಡ್ ಬೆಡಗಿಯರು

ಚಿತ್ರ ರಂಗದಲ್ಲಿ ಮೇಲ್ನೋಟಕ್ಕೆ ನಗು ನಗುತ್ತ ಮಾತನಾಡುವ ನಟ ನಟಿಯರು ಕೆಲವೊಮ್ಮೆ ಒಳಗೋಳಕ್ಕೆ ಆಂತರಿಕ ಕಲಹ ಇಟ್ಟು ಕೊಂಡಿರುತ್ತಾರೆ. ಇನ್ನು ಪ್ರಿಯಾಂಕಾ ಹಾಗು ದೀಪಿಕಾ ಪಡುಕೋಣೆ ಮಧ್ಯೆ ಕೂಡ ಮಧ್ಯೆ ಕೂಡ ಕಲಹಗಳು ಇವೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತವೆ. ಹೌದು ಎರಡು ಜಡೆಗಳು ಯಾವತ್ತೂ ಕೂಡಲ್ಲ ಅಂತಾರಲ್ಲ ಇದಕ್ಕೆ ಇರಬಹುದೇನೋ ಬಹುಶ.

 

 

ಮೂಲಗಳ ಪ್ರಕಾರ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ನಡುವೆ ಭಾರಿ ಸ್ಪರ್ಧೆ ಇದೆಯಂತೆ. ‘ಬಾಜಿರಾವ್‌ ಮಸ್ತಾನಿ’ ಚಿತ್ರದ ನಂತರ ಈ ಬಾಲಿವುಡ್‌ ನಟಿ ಮಣಿಯರು ಒಬ್ಬರಿಗೊಬ್ಬರು ಸ್ಪರ್ಧೆಗೆ ಇಳಿದಿದ್ದಾರಂತೆ. ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೆಲ ದಿನಗಳಲ್ಲೇ ಡಿಪ್ಪಿ ಕೂಡ ಹಾಲಿವುಡ್‌‌ಗೆ ಹಾರಿದ್ದರು. ಇದು ಇವರಿಬ್ಬರ ನಡುವಿನ ಸ್ಪರ್ಧೆಯನ್ನು ಜಗತ್ ಜಾಹೀರು ಮಾಡಿತ್ತು.

 

ಇದೀಗ ಬಂದ ಸುದ್ದೀಯ ಪ್ರಕಾರ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಸ್ಫರ್ಧೆ ಹ್ಯಾಂಡ್‌ಬ್ಯಾಗ್‌ನಲ್ಲೂ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ದೀಪಿಕಾ ಪಡುಕೋಣೆ 2,24,000 ರೂ. ಮೌಲ್ಯದ ಹ್ಯಾಂಡ್‌ಬ್ಯಾಗ್‌ ಖರೀದಿ ಮಾಡಿದ್ದರು. ಇದನ್ನು ಮೀರಿಸಲು ಒಂದು ಹೆಜ್ಜೆ ಮುಂದು ಹೋಗಿರುವ ಪ್ರಿಯಾಂಕಾ ಚೋಪ್ರಾ, ಬರೋಬ್ಬರಿ 3,60,000 ರೂ. ಮೌಲ್ಯದ ಖರೀದಿಸಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಕೇವಲ ದೀಪಿಕಾ ಮತ್ತು ಪ್ರಿಯಾಂಕಾ ಅಷ್ಟೇ ಅಲ್ಲ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಕಾಮೆಂಟ್ ಮಾಡುತ್ತ ಜಗಳವಾಡುತ್ತಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top