fbpx
ಸಮಾಚಾರ

ಫೇಸ್ಬುಕ್ ಬಳಕೆಗಾರರ ಕ್ಷಮೆ ಕೇಳಿದ ಮಾರ್ಕ್ ಜುಗರ್ ಬರ್ಗ್

2016 ರಲ್ಲಿ ನಡೆದ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಸಂಧರ್ಭದಲ್ಲಿ ಡೊನಾಲ್ಡ್ ಟ್ರಂಪ್ ತನ್ನ ಬೆಂಬಲಿಗರ ಮಾಹಿತಿ ಪಡೆಯಲು ಕ್ಯಾಂಬ್ರಿಜ್ ಅನಲೆಟಿಕಾ ಎಂಬ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದರು. ಕ್ಯಾಂಬ್ರಿಜ್ ಅನಲೆಟಿಕಾ ಸಂಶೋಧಕರು ತಮಗೆ ಬೇಕಾದ ಡೇಟಾವನ್ನು ಫೇಸ್ಬುಕ್ ನಿಂದ ಪಡೆದಿದ್ದರು. ಆಮೇಲೆ ಇದನ್ನು ಚುನಾವಣೆಗಾಗಿ ಬಳಸಿದ್ದರು.

 

 

ಕ್ಯಾಂಬ್ರಿಜ್ ಅನಲೆಟಿಕಾ ಸಂಸ್ಥೆಯ ಸಂಶೋಧಕ ಅಲೆಕ್ಸಾಂಡರ್ ಕೋಗಾನ್ ಎಂಬುವರು ಫೇಸ್ಬುಕ್ ಬಳಕೆದಾದರಿಗೆ ಒಂದು ಕ್ವಿಜ್ ಮಾಡಿ, ಇದರ ಮೂಲಕ ಬಳಕೆದಾರ ಮಾಹಿತಿ ಸಂಗ್ರಹಣೆ ಮೂಲಕ ವರದಿಯನ್ನು ಮಾಡಿ ಚುನಾವಣೆಗಾಗಿ ಬಳಸಿದ್ದರು. ಮೂಲಗಳ ಪ್ರಕಾರ 50 ಮಿಲಿಯನ್ ಫೇಸ್ಬುಕ್ ಬಳಕೆದಾರರ ಮಾಹಿತಿ ಪಡೆದಿತ್ತು ಎಂದು ವರದಿಯಾಗಿದೆ.

 

 

ಈಗ ಈ ಮಾಹಿತಿ ಬಹಿರಂಗವಾಗಿದ್ದು ಜಗತ್ ಜಾಹಿರವಾಗಿದೆ. ಈಗ ಸಿಟ್ಟಿಗೆದ್ದಿರುವ ಜನರು ಡಿಲೀಟ್ ಫೇಸ್ಬುಕ್ ಎಂಬ ಅಭಿಯಾನ ಶುರು ಆಗಿದೆ. ಇದರಿಂದ ಭಯಗೊಂಡಿರುವ ಫೇಸ್ಬುಕ್ ಬಳಕೆದಾರರ ಕ್ಷಮೆ ಕೇಳಿದೆ. ಅಮೆರಿಕಾದ ಪ್ರಖ್ಯಾತ ಪತ್ರಿಕೆಗಳಲ್ಲಿ ಪೂರ್ತಿ ಪುಟದಷ್ಟು ಕ್ಷಮಾಪಣೆ ಜಾಹಿರಾತು ನೀಡಿದೆ. ನಿಮ್ಮ ಮಾಹಿತಿಯನ್ನು ರಕ್ಷಿಸಲು ನಮಗೆ ಜವಾಬ್ದಾರಿ ಇದೆ. ನಮಗೆ ಸಾಧ್ಯವಾಗದಿದ್ದರೆ, ನಾವು ಅದನ್ನು ಅರ್ಹತೆ ಹೊಂದಿಲ್ಲ ಎಂದು ಅದರಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

 

 

ಇತ್ತೀಚಿಗೆ ಕೇಂದ್ರ ಕಾನೂನು ಸಚಿವರಾಗಿರುವ ರವಿಶಂಕರ್ ಅವರು ಕೂಡ ಸೋಶಿಯಲ್ ಮೀಡಿಯಾ ತಾಣಗಳಿಗೆ ಖಡಕ್ ಸಂದೇಶ್ ರವಾನೆ ಮಾಡಿದ್ದರು. ದೇಶದ ಬಳಕೆದಾರರ ಮಾಹಿತಿ ಸೋರಿಕೆ ಮಾಡಿದರೆ ಅವರ ಪರವಾನಿಗೆ ರದ್ದು ಮಾಡುವುದಾಗಿ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top