fbpx
ಸಿನಿಮಾ

ಪಕ್ಷದಿಂದ ಪಕ್ಷಕ್ಕೆ ಹಾರಿ ಮೂರು ಪಕ್ಷ ಬದಲಾಯಿಸಿರೋ ಪೂಜಾ ಈ ಸಾರಿ ಮುಖ ಮಾಡಿದ್ದು ಎಲ್ಲಿಗೆ ಗೊತ್ತಾ

ನಟ ಗಣೇಶ್ ಅವರು ಜೊತೆ ‘ಮುಂಗಾರು ಮಳೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪೂಜಾ ಗಾಂಧಿ ಅವರು ಕನ್ನಡದಲ್ಲಿ ಕೆಲವು ಸಿನಿಮಾ ಗಳಲ್ಲಿ ನಟಿಸಿ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಮೊದಲು ಜೆಡಿಎಸ್ ಪಕ್ಷ ಸೇರ್ಪಡೆಗೊಂಡು, ನಂತರ ಒಂದು ವರ್ಷದೊಳಗೆ ಜೆಡಿಎಸ್ ಬಿಟ್ಟು ಕೆಜೆಪಿ (ಕರ್ನಾಟಕ ಜನತಾ ಪಕ್ಷ) ಸೇರಿದರು. ಅನಂತರ ಶ್ರೀರಾಮುಲು ಅವರ ಬಡವರ ಶ್ರಮಿಕರ ಕಾಂಗ್ರೆಸ್ ಪಕ್ಷ (ಬಿ.ಎಸ್.ಆರ್ ಕಾಂಗ್ರೆಸ್) ಸೇರಿ ಅಲ್ಲಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದರು.

 

 

ರಾಜ್ಯ ರಾಜಕೀಯದಲ್ಲಿ ಇಷ್ಟೆಲ್ಲಾ ಪರಂಪರೆಯನ್ನು ಹೊಂದಿರುವ ಪೂಜಾ ಗಾಂಧಿ ಈಗ ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ. ತಾವು ಬಿಜೆಪಿಗೆ ಸೇರ್ಪಡೆಯಾಗುವುದರ ಬಗ್ಗೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಬಳಿ ಪೂಜಾ ಗಾಂಧಿ ಚರ್ಚಿಸಿದ್ದಾರೆ ಎನ್ನುವ ಸುದ್ದಿಗಳು ರಾಜಕೀಯ ವಲಯದಲ್ಲಿ ಗಿರಕಿ ಹೊಡೆಯುತ್ತಿವೆ. ಆದರೆ ಪೂಜಾ ಗಾಂಧಿಯನ್ನ ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ಕಾರ್ಯಕರ್ತರನ್ನೂ ಸೇರಿ ಮುಖಂಡರುಗಳೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಮೂರ್ನಾಲ್ಕು ಪಕ್ಷಗಳನ್ನು ಸೇರಿ ಬಿಟ್ಟುಬಂದಿರುವ ಪೂಜಾ ಗಾಂಧಿಗೆ ಬಿಜೆಪಿ ಪಕ್ಷ ಬಾಗಿಲು ತೆರೆಯುವುದೇ ಕಾದು ನೋಡಬೇಕು.

 

 

ಚಿತ್ರನಟಿ ಪೂಜಾ ಗಾಂಧಿ ಅವರು ಬಿಜೆಪಿ ಸೇರುವುದಕ್ಕೆ ಕೆಲವು ಬಿಜೆಪಿ ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮುಂದೆ ಈ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಪೂಜಾ ಗಾಂಧಿ ಬಿಜೆಪಿ ಸೇರ್ಪಡೆ ವಿಚಾರ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರ ಮುಂದೆ ಹೋಗಿದೆ. ಅವರು ಹೈಕಮಾಂಡ್ ನಾಯಕರ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ. ಹೈಕಮಾಂಡ್ ನಾಯಕರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪೂಜಾ ಗಾಂಧಿ ಸೇರ್ಪಡೆ ನಿರ್ಣಯ ಅಂತಿಮವಾಗಲಿದೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top