fbpx
ದೇವರು

ರಾಮನ ವಿಶೇಷ ವಿಗ್ರಹವನ್ನು ಹೊಂದಿರೋ ಭದ್ರಾಚಲಂನ ಶ್ರೀಕೋದಂಡರಾಮನ 10 ವಿಷಯಗಳು ತಿಳ್ಕೊಂಡ್ಮೇಲೆ ದೇವರ ಮೇಲಿನ ಭಕ್ತಿ ಇನ್ನಷ್ಟು ಜಾಸ್ತಿ ಆಗುತ್ತೆ

ಕೋದಂಡರಾಮ, ಭದ್ರಾಚಲ ರಾಮ, ಶ್ರೀರಾಮ ,ಅವತಾರ ಪುರುಷ ,ಮಹಾಮಹಿಮ ಹೀಗೆ ಭಕ್ತರಿಂದ ವಿವಿಧ ರೀತಿಯ ನಾಮಾವಳಿಗಳಿಂದ ಕರೆಯಲ್ಪಡುವ ಶ್ರೀರಾಮನನ್ನು ಯಾರು ತಾನೇ ಇಷ್ಟಪಡುವುದಿಲ್ಲ ಇಂತಹ ಮಹಾಮಹಿಮರನ್ನು ಎಷ್ಟು ಆಡಿ ಹೊಗಳಿದರೂ ಸಾಲದು ವಿಷ್ಣುವಿನ ಅವತಾರವಾಗಿ ಜನ್ಮ ತಾಳಿ ಈ ಭೂಮಿಯ ಮೇಲೆ ಮನುಜನಾಗಿ ಬದುಕಿ ಸದಾ ಸನ್ಮಾರ್ಗದಲ್ಲಿ ನಡೆದ ಶ್ರೀರಾಮನನ್ನು ಭಕ್ತರು ಕೊಂಡಾಡುತ್ತಾರೆ ಹೀಗೆ ಉತ್ತಮವಾದ ಆದರ್ಶಗಳು ಅಭಿಪ್ರಾಯಗಳು ಇರುವ ಸ್ಥಳವನ್ನು ರಾಮರಾಜ್ಯ ಎಂದೇ ಕರೆಯುವುದನ್ನು ನಾವು ಕಾಣುತ್ತೇವೆ .

 

 

ಇಂದು ನಾವು ಪ್ರಪಂಚದಲ್ಲಿಯೇ ಕೆಲವೇ ರಾಮ ಮಂದಿರಗಳಲ್ಲಿ ಅತ್ಯಂತ ಜನಪ್ರಿಯಗೊಂಡಿರುವ ಭದ್ರಾಚಲ ರಾಮನ ದೇವಾಲಯದ ಕೆಲವು ವಿಶೇಷತೆಗಳ ಬಗ್ಗೆ ತಿಳಿಯೋಣ

 

1. ಶ್ರೀರಾಮ ನವಮಿಯ ದಿನ ಭದ್ರಾಚಲ ದೇವಾಲಯದಲ್ಲಿ ಶ್ರೀರಾಮ ಹಾಗೂ ಸೀತೆಯ ಮೇಲೆ ಹಾಕುವ ಅಕ್ಷತೆಯನ್ನು ಕೈಗಳಿಂದಲೇ ತಯಾರು ಮಾಡುತ್ತಾರೆ ನೆಲ್ಲನ್ನು ತಂದು ಸಿಪ್ಪೆಯನ್ನು ಮೆಷಿನ್ ಮೂಲಕ ಬೇರ್ಪಡಿಸುವುದಿಲ್ಲ, ಒರಳಿನಲ್ಲಿ ಹಾಕಿ ಒನಕೆಯ ಮೂಲಕ ಸಿಪ್ಪೆಯನ್ನು ತೆಗೆಯುವುದಿಲ್ಲ ಬದಲಾಗಿ ಪ್ರತಿಯೊಂದು ಅಕ್ಕಿಯ ಕಾಳನ್ನು ಕೈಗೆ ತೆಗೆದುಕೊಂಡು ಸಿಪ್ಪೆಯನ್ನು ಕೈಯಿಂದ ಬೇರ್ಪಡಿಸುತ್ತಾರೆ .

 

 

2. ಶ್ರೀರಾಮ ಹಾಗೂ ಸೀತೆಯ ಕಲ್ಯಾಣದಲ್ಲಿ ಬಳಸುವ ಮಾಂಗಲ್ಯವನ್ನು ಹದಿನಾರನೇ ಶತಮಾನದಲ್ಲಿ ಮಹಾ ಭಕ್ತ ರಾಮದಾಸ ಮಾಡಿಸಿಕೊಟ್ಟಿದ್ದರಂತೆ ಇಂದಿಗೂ ಸಹ ಅದೇ ಮಾಂಗಲ್ಯವನ್ನು ಶ್ರೀರಾಮ ಕಲ್ಯಾಣದಲ್ಲಿ ಬಳಸಲಾಗುತ್ತದೆ.

 

 

3. ಶ್ರೀರಾಮನ ಮುತ್ತಿನ ಅಕ್ಷತೆ ವಿಧಿ ವಿಧಾನವು ಬಹಳ ಹಿಂದಿನಿಂದಲೇ ಜಾರಿಯಲ್ಲಿತ್ತು ಭಕ್ತ ರಾಮದಾಸ ದಯೆಯಿಂದ ಆಗ ರಾಜನಾಗಿದ್ದ ತಾನಶನಿಗೆ ಶ್ರೀರಾಮನು ಕನಸಿನಲ್ಲಿ ಕಾಣಿಸಿಕೊಂಡನಂತೆ ಇದರಿಂದ ಬಹಳ ಸಂತುಷ್ಟನಾದ ರಾಜ ಮಾರನೆಯ ದಿನ ದೇವರ ಅಕ್ಷತೆ ಗೆಂದು ಮುತ್ತಿನ ಮಣಿಗಳನ್ನು ಕೊಟ್ಟನಂತೆ ಇದಾದ ನಂತರ ಶಾಸನ ಒಂದನ್ನು ಬರೆದಿದ್ದನಂತೆ ಇದರ ಪ್ರಕಾರ ರಾಜ್ಯದ ಒಡೆಯ ಯಾರು ಇರುತ್ತಾನೋ ಅವನು ತಲೆಯ ಮೇಲೆ ಹೊತ್ತುಕೊಂಡು ಬಂದು ಮುತ್ತಿನ ಮಣಿಗಳನ್ನು ಅಕ್ಷತೆಗಾಗಿ ನೀಡಬೇಕು ಎಂದು .

 

 

4 . ಯಾವುದೇ ದೇವಾಲಯದಲ್ಲದರೂ ಸರ್ಕಾರ ಅಥವಾ ಜನರು ದೇವಾಲಯದ ಆಭರಣಗಳಿಗಾಗಿ ಹಣವನ್ನು ಅಥವಾ ದಾನವನ್ನು ನೀಡುತ್ತಾರೆ ಆದರೆ ಭದ್ರಾಚಲದಲ್ಲಿ ಮಾತ್ರ ಶ್ರೀರಾಮನೇ ಆತನ ಆಭರಣಗಳಿಗೆ ಹಣವನ್ನು ನೀಡಿದ್ದಾನೆ ಎಂಬ ಪ್ರತೀತಿ ಇದೆ ಇದಕ್ಕೆ ಇಂಬು ಕೊಡುವಂತೆ ಭಕ್ತ ರಾಮದಾಸ ನನ್ನು ದೇವರಿಗೆ ಆಭರಣ ಮಾಡಿಸಲು ಹಣ ಕದ್ದಿದ್ದ ಎಂಬ ಆರೋಪದ ಮೇಲೆ ಸೆರೆಮನೆಯಲ್ಲಿ ಇರಿಸುತ್ತಾರೆ ಇದಾದ ನಂತರ ಆಗಿನ ಕಾಲದ ಸುಮಾರು ಆರುವರೆ ಲಕ್ಷದಷ್ಟು ಹಣವನ್ನು ನೀಡಿ ಶ್ರೀರಾಮನು ಆತನನ್ನು ಬಿಡಿಸಿಕೊಂಡು ಬಂದನಂತೆ ಆ ಕಾಲದ ನಾಣ್ಯಗಳನ್ನು ನಾವು ಈಗಲೂ ದೇವಾಲಯದ ಮ್ಯೂಸಿಯಂನಲ್ಲಿ ನೋಡಬಹುದು.

 

 

5 . ದೇವಾಲಯದ ಗೋಪುರದ ಮೇಲೆ ಇರುವ ಶಿಖರವನ್ನು ಏಕಶಿಲೆಯಿಂದ ಕೆತ್ತಲಾಗಿದೆಯಂತೆ ಇದರ ತೂಕ ಸುಮಾರು ಮೂವತ್ತು ಎರಡು ಟನ್ ಗಳಷ್ಟು ಆ ಕಾಲದಲ್ಲಿ ಅಷ್ಟು ತೂಕದ ಕಲ್ಲನ್ನು ಅಷ್ಟು ಮೇಲೆ ಹೇಗೆ ತೆಗೆದುಕೊಂಡು ಹೋದರು ಎಂಬುದೇ ಆಶ್ಚರ್ಯಕರ ಸಂಗತಿ.

 

 

6. ದೇವಾಲಯದ ಶಿಖರದ ಮೇಲಿರುವ ಶ್ರೀಚಕ್ರವನ್ನು ಯಾರು ಕೆತ್ತಲಿಲ್ಲವೇ ಗೋದಾವರಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಭಕ್ತ ರಾಮದಾಸುವಿನ ಕೈಗೆ ಈ ಚಕ್ರ ನೀರಿನಲ್ಲಿ ಹರಿದು ಬರುವಾಗ ಸೇರಿದಂತೆ ಆಗ ಆತ ಶ್ರೀರಾಮನೇ ಇದನ್ನು ಪ್ರಸಾದಿಸಿದ ಎಂದು ಭಾವಿಸಿ ದೇವಾಲಯದ ಮೇಲೆ ಪ್ರತಿಷ್ಠಾಪನೆ ಮಾಡಿದನಂತೆ.

 

 

7. ರಾಮದಾಸನನ್ನು ಬಂಧಿಸಿ ಇಟ್ಟಿದ್ದ ಗೋಲ್ಕೊಂಡದ ಕೋಟೆಯಲ್ಲಿ ಇಂದಿಗೂ ಸಹ ಶ್ರೀರಾಮ ಸೀತೆ ಹಾಗೂ ಆಂಜನೇಯನ ಕೆತ್ತನೆಗಳನ್ನು ನಾವು ಕಾಣಬಹುದು.

 

 

8. ಭದ್ರಾಚಲ ರಾಮನ ಈಗಿನ ಗುಡಿ ಕಟ್ಟುವುದಕ್ಕೆ ಮುಂಚೆ ಒಂದು ಸಣ್ಣ ಗುಡಿಯಲ್ಲಿ ರಾಮನ ಹಾಗೂ ಸೀತೆಯ ವಿಗ್ರಹವನ್ನು ಇಟ್ಟು ಪೂಜೆ ಮಾಡುತ್ತಿದ್ದರಂತೆ ಅಲ್ಲಿನ ಬುಡಕಟ್ಟು ಜನಗಳು ಇದಾದ ನಂತರ ಭಕ್ತ ರಾಮದಾಸು ದೇವರಿಗಾಗಿ ಒಂದು ದೊಡ್ಡ ಆಲಯವನ್ನು ನಿರ್ಮಾಣ ಮಾಡಿದ್ದಾನೆ ಇದಕ್ಕೂ ಒಂದು ಸಾವಿರ ವರ್ಷಗಳ ಮುಂಚೆ ಮಹಾಮಹಿಮ ಶಂಕರಾಚಾರ್ಯರು ಈ ಸ್ಥಳಕ್ಕೆ ಭೇಟಿ ನೀಡಿದ್ದರಂತೆ ಶ್ರೀರಾಮ ದರ್ಶನ ಪಡೆದ ಇವರು ವೈಕುಂಠಕ್ಕೆ ಹೋದಷ್ಟೇ ಸಂತೋಷವಾಯಿತು ಎಂದು ಶ್ರೀರಾಮನಿಗೆ ವೈಕುಂಠ ರಾಮ ಎಂಬ ಹೆಸರನ್ನು ನೀಡಿ ಕರೆದರಂತೆ ಆಗಿನಿಂದ ವೈಕುಂಠ ರಾಮ ಎಂಬ ಹೆಸರು ಪ್ರಖ್ಯಾತಿ ಹೊಂದಿತ್ತು .

 

 

9. ಈಗ ಭದ್ರಾಚಲ ದೇವಾಲಯ ಇರುವ ಸ್ಥಳದಲ್ಲಿ ಹಿಂದೊಮ್ಮೆ ಭದ್ರಾ ಎಂಬ ಖುಷಿ ತಪಸ್ಸನ್ನು ಕೈಗೊಂಡಿದ್ದ ನಂತೆ ಆತ ತಪಸ್ಸು ಮಾಡಿದ ಬಂಡೆ ಕಲ್ಲುಗಳನ್ನು ನಾವು ಈಗಲೂ ಸಹ ನೋಡಬಹುದು ಇದಕ್ಕೆ ಭದ್ರ ಕೊಂಡ ಎಂದು ಕರೆಯುತ್ತಾರೆ .

 

 

10.ಶ್ರೀ ರಾಮ ಲಕ್ಷ್ಮಣರು ಸೀತೆ ಸಮೇತವಾಗಿ ಅರಣ್ಯ ವಾಸ ಮಾಡುವಾಗ ಇಲ್ಲಿನ ಕಾಡಿನ ಗುಡಿಸಲೊಂದರಲ್ಲಿ ವಾಸವಿದ್ದರೆ ಆ ಸಮಯದಲ್ಲಿ ರಾವಣನು ಸೀತೆಯನ್ನು ಅಪಹರಣ ಮಾಡುತ್ತಾನೆ ಆಗ ಸೀತೆಯನ್ನು ಹುಡುಕಿ ಹೊರಟ ರಾಮನಿಗೆ , ದಾರಿಯಲ್ಲಿ ಸಿಕ್ಕ ಭದ್ರಾ ಋಷಿಯು ಒಂದು ವರವನ್ನು ನೀಡುವಂತೆ ಬೇಡಿಕೊಳ್ಳುತ್ತಾನೆ ಅದರ ಪ್ರಕಾರ ತಾನು ನೆಲೆಸಿರುವ ಈ ಬೆಟ್ಟದಲ್ಲಿ ಶ್ರೀರಾಮನು ಬಂದು ಇರಬೇಕು ಎಂದು ಕೇಳಿಕೊಳ್ಳುತ್ತಾನೆ ಆದರೆ ಈಗ ನಾನು ಸೀತೆಯನ್ನು ಹುಡುಕುತ್ತಿರುವುದಾಗಿ ಆ ನಂತರ ಬಂದು ಇಲ್ಲಿ ನೆಲೆಸುತ್ತೇನೆ ಎಂದು ಹೊರಟು ಹೋಗುತ್ತಾನೆ ರಾಮ ಇದಾದ ಬಳಿಕ ಸೀತೆ ಸಿಕ್ಕಳು ಆ ನಂತರ ವೈಕುಂಠಕ್ಕೆ ತನ್ನ ಹೊಸ ಅವತಾರಕ್ಕೆ ಹೊರಟು ಹೋಗುತ್ತಾನಂತೆ ರಾಮ ಆಗ ಘೋರ ತಪಸ್ಸು ಮಾಡಿದ ಭಧ್ರ ಮತ್ತೆ ರಾಮನನ್ನು ಓಲಿಸಿಕೊಳ್ಳುತ್ತಾನೆ ಈ ತರಾತುರಿಯಲ್ಲಿ ರಾಮನು ತನ್ನ ಬಿಲ್ಲು ಬಾಣದ ಜೊತೆಗೆ ಶಂಖ ಚಕ್ರವನ್ನು ಸಹ ತಂಡು ಬಿಡುತ್ತಾನೆ ಹಾಗೆಯೇ ಲಕ್ಷ್ಮಣನು ತನ್ನ ಎಡಭಾಗದಲ್ಲಿ ಬಂದು ಇಲ್ಲಿ ನೆಲೆಸುತ್ತಾನೆ ಎಂಬ ಪ್ರತೀತಿ ಸಹ ಇದೇ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top