fbpx
ವಿಶೇಷ

ಸಾವು ಯಾರನ್ನ ಬಿಡುತ್ತೆ ಹೇಳಿ , ಕೆಲವು ದೇಶಗಳಲ್ಲಿ ಸತ್ತ ಹೆಣಗಳಿಗೆ ಮಾಡುವ ಅಂತಿಮ ಕ್ರಿಯೆಗಳನ್ನು ಕೇಳಿದ್ರೆ ಬೆಚ್ಚಿ ಬೀಳೋದು 100 % ಗ್ಯಾರಂಟೀ

ಸಾವು , ಸಾವನ್ನು ಕಂಡು ಹೆದರದೇ ಇರುವವರು ಯಾರಿದ್ದಾರೆ ಹೇಳಿ ಸಾವು ಒಂದು ಕರೆಯದೇ ಬರುವ ಅತಿಥಿ ಪ್ರಪಂಚದಲ್ಲಿರುವ ಕೊಟ್ಯಧಿ ಮಂದಿಯಲ್ಲಿ ಅನೇಕ ಜನ ದಿನ ಸಾಯುತ್ತಲೇ ಇರುತ್ತಾರೆ ಅನೇಕ ಜನ ದಿನ ಹುಟ್ಟುತ್ತಲೇ ಇರುತ್ತಾರೆ ಕೆಲವರಿಗೆ ಪುನರ್ಜನ್ಮದ ಪರಿಕಲ್ಪನೆ ಇದ್ದರೆ ಇನ್ನೂ ಕೆಲವರಿಗೆ ಆತ್ಮ ಜೀವ ಇವುಗಳಲ್ಲಿ ಯಾವುದೇ ನಂಬಿಕೆಯೂ ಇರುವುದಿಲ್ಲ ಕೊನೆಯದಾಗಿ ನಾವೆಲ್ಲರೂ ಪ್ರಕೃತಿಯ ಒಂದು ಭಾಗ ಎಂಬುದಷ್ಟೇ ಸತ್ಯ ಕೆಲವರಿಗೆ ಸಾವೆಂದರೆ ಆನಂದ ಇನ್ನು ಕೆಲವರಿಗೆ ಸಾವು ಆತ್ಮ ಎಂದರೆ ಭಯ ಒಟ್ಟಿನಲ್ಲಿ ಈ ಸಾವು ಬದುಕಿನ ನಡುವೆ ಜೀವನ ನಡೆಸುತ್ತೇವೆ.

ಸತ್ತ ನಂತರ ಹೆಣಗಳಿಗೆ ಯಾವ ರೀತಿಯ ಅಂತಿಮ ಕಾರ್ಯಗಳನ್ನ ಪ್ರಪಂಚದ ನಾನಾ ಕಡೆಯಲ್ಲಿ ಹೇಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳೊಣ ಬನ್ನಿ ಇದನ್ನು ಕೇಳಿ ನೀವು ಬೆಚ್ಚಿ ಬಿದ್ದರೆ ಆಶ್ಚರ್ಯವಿಲ್ಲ.

 

ಟಿಬೆಟ್ನ ಬೌದ್ಧರು

 

ಟಿಬೆಟ್ನಲ್ಲಿರುವ ಆಳವಾದ ಕಲ್ಲುಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಹೆಣಗಳನ್ನು ಹೂಳುವುದು ಬಹಳ ಕಷ್ಟದ ಕೆಲಸ ಆದ್ದರಿಂದ ಟಿಬೆಟನ್ನರು ಅದರಲ್ಲೂ ಬೌದ್ಧರು ಸತ್ತ ಹೆಣಗಳನ್ನು ಕತ್ತರಿಸಿ ಆಕಾಶದಲ್ಲಿ ಬಿಸಾಡುತ್ತಾರೆ ಈ ರೀತಿ ಸತ್ತ ಹೆಣದ ದೇಹದ ಭಾಗಗಳನ್ನು ಹದ್ದು ಹಾಗೂ ಇನ್ನಿತರ ರಣಹದ್ದು ,ಪಕ್ಷಿ ,ಪ್ರಾಣಿಗಳು ತಿಂದುಕೊಂಡು ಹೋಗುತ್ತವೆ

 

ಸೋಕು ಶಿನ್ ಬುತ್ಸು ಜಪಾನ್ನ ಬೌದ್ಧ ಭಿಕ್ಷುಗಳು

 

ಜಪಾನ್ ನಲ್ಲಿರುವ ಬೌದ್ಧ ಭಿಕ್ಷುಗಳು ಅದರಲ್ಲೂ ಸೋಕು ಶಿನ್ ಬುತ್ಸು ಎಂದು ಕರೆಯುವ ಈ ಭಿಕ್ಷುಗಳು ತಮ್ಮ ದೇಹಕ್ಕೆ ತಾವೇ ಮಮ್ಮಿ ಕ್ರಿಯೆಯನ್ನು ಮಾಡಿಕೊಳ್ಳುತ್ತಾರೆ
ಅವರು ಸಾಯಲು ನಿರ್ಧರಿಸಿ ನಿರ್ಧರಿಸುವ ಸಾವಿರ ದಿನಗಳ ಮುಂಚೆಯಿಂದಲೂ ಸಹ ಬೀಜಗಳು ,ಕಾಳು ಕಡಿಗಳು , ಕಾಯಿಗಳು ಇವುಗಳನ್ನೇ ತಿನ್ನುತ್ತಾ ಬದುಕುತ್ತಾರೆ ಇದರಿಂದಾಗಿ ದೇಹದಲ್ಲಿನ ಕೊಬ್ಬಿನ ಅಂಶವು ಕಡಿಮೆಯಾಗುತ್ತಾ ಬರುತ್ತದೆ ಆ ನಂತರ ಇನ್ನಿತರ ಸಾವಿರ ದಿನಗಳು ವಿಷಯುಕ್ತವಾದ ದ್ರವ್ಯವನ್ನು ಸೇವಿಸುತ್ತಾ ಬರುತ್ತಾರೆ ಇದು ದೇಹದಲ್ಲಿನ ಅನಗತ್ಯ ನೀರನ್ನು ಹೊರಹಾಕುತ್ತದೆ ವಾಂತಿ ಭೇದಿ, ತಲೆಸುತ್ತು ಇವು ಸಹ ಇದರ ಅಡ್ಡ ಪರಿಣಾಮಗಳು

 

 

ಇದಾದ ನಂತರ ಕಲ್ಲಿನಿಂದ ಕಟ್ಟಲಾಗಿರುವ ಗೋರಿಯ ಒಳಗೆ ಕುಳಿತುಕೊಂಡು ಬಿಡುತ್ತಾರೆ ಅವರ ಜೊತೆಗೆ ಒಂದು ಗಂಟೆಯನ್ನು ತೆಗೆದುಕೊಂಡು ಹೋಗುತ್ತಾರೆ ಪ್ರತಿದಿನವೂ ಗಂಟೆಯನ್ನು ಹೊಡೆಯುತ್ತಾರೆ ಯಾವ ದಿನ ಗಂಟೆ ಹೊಡೆಯುವುದು ನಿಲ್ಲುವುದೋ ಆ ದಿನ ಭಿಕ್ಷು ಸತ್ತನೆಂದು ಅರ್ಥ .

ಆ ನಂತರ ಸಾವಿರ ದಿನಗಳು ಗೋರಿಯ ಒಳಗೆ ಬಿಟ್ಟು ಆ ನಂತರ ಹೊರತೆಗೆದು ಆತನ ಶಿಷ್ಯಂದಿರು ಮತ್ತೆ ಮಮ್ಮಿ ಮಾಡುತ್ತಾರೆ.

 

ಎಂಡೋ ಕ್ಯಾನೆಬಾಲಿಸಮ್

 

 

ದಕ್ಷಿಣ ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲಿರುವ ಕೆಲವು ಬುಡಕಟ್ಟು ಜನಾಂಗದಲ್ಲಿ ಈ ರೀತಿಯ ಪದ್ಧತಿ ಜಾರಿಯಲ್ಲಿದೆ ಇವರು ಸತ್ತ ಮನುಷ್ಯನ ದೇಹದ ವಿವಿಧ ಭಾಗಗಳನ್ನು ತಿನ್ನುತ್ತಾರೆ ಇದರಿಂದ ಸತ್ತ ಮನುಷ್ಯನ ಬುದ್ಧಿಶಕ್ತಿ ಹಾಗೂ ವಿಶಿಷ್ಟವಾದ ಶಕ್ತಿಯೊಂದು ದೊರೆಯುತ್ತದೆ ಎಂದು ಇಲ್ಲಿನ ಬುಡಕಟ್ಟು ಜನಾಂಗದವರು ನಂಬುತ್ತಾರೆ ಹಾಗೆಯೇ ಹೂತಿಟ್ಟ ಹೆಣಗಳು ಹಾಗೂ ಸುಟ್ಟ ಹೆಣಗಳ ಬೂದಿಯನ್ನು ಸಹ ಇವರು ತಿನ್ನುತ್ತಾರೆ

 

ವೈಕಿಂಗ್

 

 

ಅರಬ್ ದೇಶದಲ್ಲಿ ಚಾಲ್ತಿಯಲ್ಲಿದ್ದ ಈ ಅನಿಷ್ಟ ಪದ್ಧತಿಯ ಪ್ರಕಾರ ದೇಶದ ರಾಜನು ಸತ್ತಾಗ ಹತ್ತು ದಿನಗಳ ಕಾಲ ರಾಜನ ಸೇವಕಿ ಕೂಡ ಆ ಹಣದ ಜೊತೆ ಇರಬೇಕಾಗುತ್ತದೆ ಇದಾದ ನಂತರ ಆಕೆ ಆರು ಜನ ಅಪರಿಚಿತರ ಜೊತೆಗೆ ಲೈಂಗಿಕ ಸಂಪರ್ಕವನ್ನು ಮಾಡಬೇಕಾಗುತ್ತದೆ ಪ್ರತಿಯೊಬ್ಬರ ಜೊತೆ ಲೈಂಗಿಕ ಸಂಪರ್ಕ ಮಾಡುವಾಗ ಪ್ರತಿಯೊಬ್ಬರೂ “ನಾನು ಇದನ್ನು ನಿಮ್ಮ ರಾಜನ ನೆನಪಿಗಾಗಿ ಮಾಡಿದ್ದೇನೆ” ಎಂದು ಹೇಳಿ ಕಳಿಸುತ್ತಿದ್ದರು ಕೊನೆಗೆ ಆಕೆಯನ್ನೂ ಸಹ ರಾಜನೊಂದಿಗೆ ಸೇರಿ ಅಂತಿಮ ಕ್ರಿಯೆ ನಡೆಸಿ ಬಿಡುತ್ತಿದ್ದರು ಇದರಿಂದಾಗಿ ರಾಜನ ಸೇವಕಿಯಾಗಿ ಆಕೆ , ಆತ ಯಾವಾಗಲೂ ರಾಜನಾಗಿ ಇರುತ್ತಾನೆ ಎಂಬ ನಂಬಿಕೆ ಅಲ್ಲಿನ ಜನರಲ್ಲಿ ಇತ್ತು

 

ಉಗುರು ಕತ್ತರಿಸಿಕೊಳ್ಳುವುದು

 

 

ಗಿನಿಯಾ ದೇಶದ ಬುಡಕಟ್ಟು ಸಮುದಾಯದಲ್ಲಿ ಈ ರೀತಿಯ ಅನಿಷ್ಟ ಪದ್ಧತಿ ಇದೆ ಯಾರಾದರೂ ಪ್ರೀತಿಪಾತ್ರರು ಸತ್ತರೆ ಅವರನ್ನು ಬಹಳವಾಗಿ ಪ್ರೀತಿಸುವ ವ್ಯಕ್ತಿಗಳ ಕೈ ಬೆರಳುಗಳನ್ನು ಕತ್ತರಿಸಲಾಗುತ್ತದೆ .

 

ಹೆಣದ ಜತೆ ನೃತ್ಯಗಾರ್ತಿಯರು

 

 

ತೈವಾನ್ ದೇಶದಲ್ಲಿ ಸತ್ತ ಹೆಣವನ್ನು ಆತನ ಆತ್ಮವನ್ನು ಸಂತುಷ್ಟಿ ಪಡಿಸಬೇಕು ಎಂದು ಭಾವಿಸುತ್ತಾರೆ ಇದರಿಂದಾಗಿಯೇ ಬಟ್ಟೆಯನ್ನು ಬಿಚ್ಚಿ ನೃತ್ಯಗಾರ್ತಿಯರು ಹೆಣದ ಮುಂದೆ ನೃತ್ಯ ಮಾಡುತ್ತಾರೆ.

 

ಇಂಡೋನೇಷ್ಯಾದ ತಾನ ಟೊರಾಜ

 

ಈ ದೇಶದಲ್ಲಿ ಹೆಣಗಳನ್ನು ಹೂಳುವಾಗ ನೃತ್ಯಗಳು ಹಾಡುಗಳು ಹೀಗೆ ಅನೇಕ ರೀತಿಯ ಸಂತೋಷದಾಯಕ ಸಂಭ್ರಮಗಳನ್ನು ಆಚರಿಸಿ ಆ ನಂತರ ಹೆಣಗಳನ್ನು ಹೂಳುತ್ತಾರೆ ಇದಾದ ಬಳಿಕ ಪವಿತ್ರ ದಿನಗಳಲ್ಲಿ ಹೆಣಗಳನ್ನು ಮಣ್ಣಿನಿಂದ ಹೊರತೆಗೆದು ಅದಕ್ಕೆ ಸಿಂಗಾರ ಮಾಡಿ ಹೊಸ ಬಟ್ಟೆಗಳನ್ನು ಧರಿಸಿ ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತಾರೆ ಇದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.

 

ಜೊರಾಷ್ಟ್ರಿಯನ್ನರು

 

 

ಜೊರಾಷ್ಟ್ರಿಯನ್ನರು ಹೆಣಗಳನ್ನು ಹೂಳುವುದಾಗಲಿ , ಸುಡುವುದಾಗಲಿ ಮಾಡುವುದಿಲ್ಲ ಇದರಿಂದ ಪಂಚಭೂತಗಳು ಮಲಿನಗೊಳ್ಳುತ್ತಿವೆ ಎಂದು ಅವರು ಭಾವಿಸುತ್ತಾರೆ ಆದ್ದರಿಂದ ಹೆಣಗಳನ್ನು ಹಾಗೆಯೇ ಬಿಟ್ಟು ಪ್ರಾಣಿ ಪಕ್ಷಿಗಳು ಅಥವಾ ರಣಹದ್ದುಗಳು ತಿಂದುಕೊಂಡು ಹೋಗಲಿ ಎಂದು ಅವರು ಬಯಸುತ್ತಾರೆ

ವಾರಣಾಸಿ

 

 

ಗಂಗಾ ನದಿಯ ದಂಡೆಯಲ್ಲಿ ನಾವು ಸಾವಿರಾರು ಹೆಣಗಳನ್ನು ಪ್ರತಿನಿತ್ಯ ನೋಡಬಹುದು ಹೀಗೆ ಗಂಗೆಯಲ್ಲಿ ತೇಲಿ ಹೋದ ಹೆಣಗಳು ತಮ್ಮ ಪಾಪ ಕರ್ಮಗಳಿಂದ ಮುಕ್ತಿ ಹೊಂದಿ ಉತ್ತಮ ಆತ್ಮಗಳಾಗಿ ಪರಿವರ್ತನೆ ಹೊಂದುತ್ತವೆ ಎಂದು ಇಲ್ಲಿನ ಜನರು ಭಾವಿಸುತ್ತಾರೆ.

 

ಹೆಣದ ಮಣಿಗಳು ದಕ್ಷಿಣ ಕೊರಿಯಾ

 

 

ದಕ್ಷಿಣ ಕೊರಿಯಾದಲ್ಲಿ ಹೆಣಗಳನ್ನು ಹೂಳುವುದು ಬಹಳ ಸವಾಲಾದ ಕೆಲಸವೇ ಸರಿ ಏಕೆಂದರೆ ಈ ದೇಶ ಬಹಳ ಚಿಕ್ಕದು ಆದ್ದರಿಂದ ಅನೇಕರು ಹೆಣಗಳನ್ನು ಸುಡುವ ಬದಲು ಹೆಣ ಗಳಿಂದ ಮಾಡಲ್ಪಟ್ಟ ಮಣಿಗಳನ್ನು ಮನೆಯಲ್ಲಿ ಇರಿಸುವುದು ಲೇಸು ಎಂದು ಭಾವಿಸುತ್ತಾರೆ , ಈ ರೀತಿ ಸತ್ತ ವ್ಯಕ್ತಿಗಳಿಂದ ಮಣಿ ಮಾಡುವ ಅನೇಕ ಕಂಪನಿಗಳು ಇವೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top