ವಿಶೇಷ

ಭಾರತದಲ್ಲಿ ಮದುವೆಯಾಗಿ ಆಮೇಲೆ ಕೈ ಕೊಟ್ಟು ಓಡಿಹೋಗುವ ಫಾರಿನ್ ಗಂಡುಗಳಿಗೆ ಇನ್ಮುಂದೆ ಇದೆ ಮಾರಿಹಬ್ಬ

ಮದುವೆ ಎಂಬುದು ಎರಡು ಮನಸ್ಸುಗಳ ಅನುಬಂಧ ಮಗಳು ಭುಜದೆತ್ತರಕ್ಕೆ ಬೆಳೆದ ಅಂದ್ರೆ ಸಾಕು ಕೆಲವರಿಗೆ ಆಕೆಗೆ ಒಂದು ಸುಂದರವಾದ ಒಳ್ಳೆಯ ವರನನ್ನು ನೋಡಿ ಮದುವೆ ಮಾಡಿಬಿಡಬೇಕು ಎಂದು ಅನಿಸುವುದು ಸಹಜ ಹೀಗಿರುವಾಗ ಅನೇಕರಿಗೆ ಹುಡುಗನ ವರಮಾನ ಎಷ್ಟು, ಆತನಿಗೆ ಎಷ್ಟು ಆಸ್ತಿ ಪಾಸ್ತಿಗಳಿಗೆ , ಆತನ ಸ್ವಭಾವ ಹೇಗೆ ಇವುಗಳ ಜೊತೆ ಇತ್ತೀಚೆಗೆ ಹುಡುಗ ಫಾರಿನ್ನಲ್ಲಿ ಇದ್ದಾನಾ ಸಾಫ್ಟ್ ವೇರ್ ಕೆಲಸದಲ್ಲಿ ಇದ್ದಾನಾ ಈ ರೀತಿಯ ವಿಚಿತ್ರ ವಿಚಿತ್ರವಾದ ಬಯಕೆಗಳು ಇರುತ್ತವೆ .

 

 

ಈ ರೀತಿಯ ಫಾರಿನ್ ಗಂಡುಗಳ ಹುಚ್ಚು ಪೋಷಕರಿಗೆ ಹೆಚ್ಚಾಗುತ್ತಿರುವಾಗ ಅಪರಾಧಗಳ ಸಂಖ್ಯೆಯೂ ಕೂಡ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ ಭಾರತದಲ್ಲಿ ಮದುವೆಯಾಗಿ ಹುಡುಗಿಯರಿಗೆ ಕೈಕೊಟ್ಟು ವಿದೇಶದಲ್ಲಿ ಹೋಗಿ ಸೆಟಲ್ ಆಗುವ ಹುಡುಗರ ಸಂಖ್ಯೆ ಏನು ಕಡಿಮೆಯಿಲ್ಲ .

ಈ ರೀತಿ ಅದ್ಧೂರಿಯಾಗಿ ಮದುವೆ ಮಾಡಿಸಿಕೊಂಡು ಆ ನಂತರ ಹೆಂಡತಿಯನ್ನು ವಿವಿಧ ಕಾರಣ ಹೇಳಿ ಬಿಟ್ಟು ಹೋಗುವುದು ಅಥವಾ ಗರ್ಭಿಣಿ ಮಾಡಿ ಬಿಟ್ಟು ಹೋಗುವ ಗಂಡಂದಿರಿಗೆ ಕೇಂದ್ರ ಸರ್ಕಾರ ಶಾಕ್ ನೀಡಲಿದೆ.

 

 

ಈ ರೀತಿ ಕಟ್ಟಿಕೊಂಡ ಹೆಂಡತಿಯನ್ನು ಅಮಾನುಷ ರೀತಿಯಲ್ಲಿ ಇಲ್ಲಿಯೇ ಬಿಟ್ಟು ಓಡಿಹೋಗುವ ಎನ್ನಾರೈ ಗಂಡುಗಳಿಗೆ ಸರ್ಕಾರ ಈಗ ಶಾಕ್ ನೀಡುತ್ತಿದೆ ಸರ್ಕಾರದ ಹೊಸ ಕಾನೂನಿನ ಪ್ರಕಾರ ಅಂತಹ ಹುಡುಗರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕುವ ಎಲ್ಲಾ ಹಕ್ಕು ಸರ್ಕಾರಕ್ಕೆ ಇರುತ್ತದೆ

ಹಾಗೆಯೇ ಈ ರೀತಿಯ ಹುಡುಗರಿಗೆ ಮೂರು ಬಾರಿ ಸರ್ಕಾರದಿಂದ ನೋಟಿಸ್ ಅನ್ನು ನೀಡಲಾಗುತ್ತದೆ ಈ ನೋಟಿಸ್ ಗೂ ಸಹ ಆತ ಸ್ಪಂದಿಸದೇ ಇದ್ದ ಪಕ್ಷದಲ್ಲಿ ಅಂಥವರ ವಿರುದ್ಧ ಕಾನೂನು ರೀತಿಯಲ್ಲಿ ಕೇಸ್ ಹಾಕಲಾಗುವುದು.

 

 

ಕೇಂದ್ರ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣ ಸಚಿವೆಯಾಗಿರುವ ಮೇನಕಾ ಗಾಂಧಿ ಈ ವಿಷಯದ ಬಗ್ಗೆ ಗಂಭೀರವಾದ ಕಾನೂನೊಂದನ್ನು ರೂಪಿಸಲು ಆಲೋಚನೆ ನಡೆಸುತ್ತಿದ್ದಾರೆ .

3385 ಕೇಸ್ ಗಳು ಈಗಾಗಲೇ ಕೈಕೊಟ್ಟಿ ಓಡಿಹೋದ ಎನ್ಆರ್ಐಗಳ ವಿರುದ್ಧ ಅವರ ಹೆಂಡತಿಯರು ಕೇಸ್ ಮಾಡಿದ್ದಾರಂತೆ ಈ ರೀತಿಯ ಕಾನೂನು ಬರುವುದರಿಂದ ಇಂತಹ ಹೆಣ್ಣು ಬಾಕರಿಗೆ ಸಮಾಜಘಾತುಕರಿಗೆ ಒಳ್ಳೆಯ ಶಿಕ್ಷೆಯಾಗಲಿದೆ ಎನ್ನುವುದಂತೂ ನಿಜ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top