fbpx
ಮನೋರಂಜನೆ

‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ನ ತಳುಕು-ಬಳುಕಿನ ಬೆಡಗಿಯರ ಅಸಲಿ ಕಥೆ ಇಲ್ಲಿದೆ ಓದಿ

ಕನ್ನಡ ಕಿರುತೆರೆಯ ರಿಯಾಲಿಟಿಶೋಗಳ ಅಬ್ಬರಕ್ಕೆ ನಾಂದಿ ಹಾಡಿದ್ದ ರಿಯಾಲಿಟಿ ಷೋ ಆದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮ ಮತ್ತೆ ಬರುತ್ತಿದೆ. ಅಭಿನಯ ಚಕ್ರವರ್ತಿ 2008ರಲ್ಲಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬಂದಿದ್ದ ಈ ಕಾರ್ಯಕ್ರಮ ನಂತರದ ಸೀಸನ್ ಗಳನ್ನ ಅಕುಲ್ ಮತ್ತು ಸಂತೋಷ್ ನಡೆಸಿಕೊಟ್ಟಿದ್ದರು. ಮೂರು ಆವೃತ್ತಿಗಳ ಭಾರಿ ಯಶಸ್ಸಿನ ನಂತರ ಸುವರ್ಣ ವಾಹಿನಿಯು ಈಗ ನಾಲ್ಕನೇ ಆವೃತ್ತಿ ಮತ್ತೆ ಅಕುಲ್ ಬಾಲಾಜಿ ಸಾರಥ್ಯದಲ್ಲಿ ಮೂಡಿಬರುತ್ತಿದೆ.

 

 

ನಗರ ಪ್ರದೇಶದಲ್ಲಿ ಬೆಳೆದು ನಗರ ಜೀವನ ಶೈಲಿಗೆ ಒಗ್ಗಿಕೊಂಡಿರುವ ಮತ್ತು ಹಳ್ಳಿಯ ಸೊಗಡಿನ ಗಂಧವನ್ನು ತಿಳಿಯದ ಯುವತಿಯರು ಸುಮಾರು ಮೂರು ತಿಂಗಳ ಕಾಲ ಸಿಟಿ ಬಿಟ್ಟು ಹಳ್ಳಿಯಲ್ಲಿಯೇ ವಾಸ್ತವ್ಯ ಹೂಡುವುದು ಈ ಸ್ಪರ್ಧೆಯ ಮೂಲ ಗಮ್ಮತ್ತು. ಸ್ಪರ್ಧಿಗಳು ನಗರದ ಐಷಾರಾಮಿ ಜೀವನವನ್ನು ಸಂಪೂರ್ಣವಾಗಿ ತೊರೆದು ಮೂಲಭೂತ ಸೌಕರ್ಯಗಳನ್ನು ಪಡೆಯಲು ಹಳ್ಳಿಯಲ್ಲಿ ಪರದಾಡುವ ಪರಿಸ್ಥಿಯ ಹಂದರವೇ ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಕಾರ್ಯಕ್ರಮದ ಮೇಲುನೋಟ. ಸ್ಪರ್ಧಿಗಳು ಮೊಬೈಲ್ ಫೋನ್‌ ಸೇರಿದಂತೆ ಎಲ್ಲ ಬಗೆಯ ಸಂಪರ್ಕಗಳಿಂದ ದೂರವಿರುತ್ತಾರೆ.

ಪ್ರತಿದಿನ ನೀಡಲಾಗುವ ವಿವಿಧ ಬಗೆಯ ಸವಾಲುಗಳನ್ನು ಸ್ವೀಕರಿಸಿ ತಮ್ಮತಮ್ಮಲ್ಲಿಯೇ ಸೆಣಸಾಡಬೇಕಾಗುತ್ತದೆ. ಪ್ರತಿ ವಾರವೂ ಎಲಿಮಿನೇಷನ್ ಪ್ರಕ್ರೀಯೆ ನಡೆಯಲಿದ್ದು ಯಾರು ಕಾರ್ಯಕ್ರಮದ ಎಲ್ಲ ಸವಾಲುಗಳನ್ನು ಸಮರ್ಪಕವಾಗಿ ಎದುರಿಸತ್ತಾ ಮತ್ತು ವೀಕ್ಷಕರ ವಿಶ್ವಾಸವನ್ನು ಉಳಿಸಿಕೊಂಡು ಬರುತ್ತಾರೋ ಅವರು ವಿಜೇತರಾಗಿ ಆಯ್ಕೆಯಾಗುತ್ತಾರೆ.

 

 

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4 ಆಡಿಷನ್ ಮುಕ್ತಾಯವಾಗಿದ್ದು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಸ್ಪರ್ಧಿಗಳ ವಿವರ ಇಂತಿದೆ.. ದೆಹಲಿಯ ಅರ್ಪಿತ,ಉಡುಪಿಯ ಅಭಿಗ್ನ, ಬೆಂಗಳೂರಿನ ಹುಡುಗಿಯರಾದ ಭಾವನಾ, ಪ್ರತೀಕ್ಷ, ಆಸಿಯಾ ಬೇಗಂ, ಮೆಬೀನಾ, ಪ್ರತೀಕ್ಷ, ಶಮಿತಾ, ಶಹನ್ ಪೊನ್ನಮ್ಮ, ಶರಣ್ಯ, ಭವಿನ್ ಮತ್ತು ಸ್ಪೂರ್ತಿ ಗೌಡ.,ಮತ್ತು ‘ಅಧ್ಯಕ್ಷ’ ಮತ್ತು ‘ಆಟಗಾರ’ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಪ್ರಿಯಾಂಕ ಕೂಡ ಪ್ಯಾಟೆಹುಡುಗಿಯರ ಜೊತೆ ಸ್ಪರ್ಧೆಗೆ ಇಳಿದಿದ್ದಾರೆ.

ಬೆಡಗಿಯರ ಅಸಲಿ ಕಥೆ ಇಲ್ಲಿದೆ ಓದಿ

 

ಸ್ಪರ್ಧಿ ೧: ಮಬಿನ್ ಮೈಕಲ್

 

 

ಈಕೆಯ ವಯಸ್ಸು 19 ವರ್ಷ , ಕೊಡಗಿನ ಕುವರಿ , ಈಕೆಯ ಹವ್ಯಾಸಗಳು ಡ್ಯಾನ್ಸಿಂಗ್, ಮಾಡಲಿಂಗ್, ಯೋಗ, ಸ್ವಿಮಿಂಗ್
ಇವರ ತಂದೆಗೆ ಮಬಿನ್ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮ ದಲ್ಲಿ ಮಬಿನ್ ಭಾಗವಹಿಸಬೇಕಿತ್ತು ಅನ್ನೋ ಆಸೆ ಇತ್ತಂತೆ ,ಈಗ ಅವರ ತಂದೆ ಬದುಕಿಲ್ಲ .

 

ಸ್ಪರ್ಧಿ ೨ : ಶಾಹನ್ ಪೊನಮ್ಮ

 

 

ಈಕೆಯ ವಯಸ್ಸು 22 ವರ್ಷ, ಕೊಡಗಿನ ಕುವರಿ ,ಈಕೆಗೆ ಸಿಕ್ಕಾಪಟ್ಟೆ ಮಾತಾಡೋದು ಅಂದ್ರೆ ತುಂಬಾನೇ ಇಷ್ಟ, ಈಕೆಯ ಹವ್ಯಾಸಗಳು ಡ್ಯಾನ್ಸ್, ಜಿಮ್, ಬೈಕ್ ಅಂದ್ರೆ ಸಕ್ಕತ್ ಕ್ರೇಜ್ .

 

ಸ್ಪರ್ಧಿ ೩ : ಅಭಿಜ್ಞ ಭಟ್

 

 

ಈಕೆಯ ವಯಸ್ಸು 19 ವರ್ಷ , ಉಡುಪಿಯ ಕುವರಿ , ಈಕೆಯ ಹವ್ಯಾಸಗಳು ಡ್ಯಾನ್ಸ್, ಶಾಪಿಂಗ್, ಪಾರ್ಟಿ, ಆಕ್ಟಿಂಗ್ ಮಾಡೋದು .

ಸ್ಪರ್ಧಿ ೪ : ಸ್ಪೂರ್ತಿ ಗೌಡ

 

 

ಈಕೆಯ ವಯಸ್ಸು 21 ವರ್ಷ, ಶಿವಮೊಗ್ಗ ಕುವರಿ , ಈಗಾಗಲೇ ಮಾಡೆಲ್ ಆಗಿರುವ ಇವರು ‘ಮಿಸ್ ಪಾಪುಲರ್ ಫೇಸ್ ಆಫ್ ಸೌತ್ ಕರ್ನಾಟಕ’ ಕಿರೀಟ ಗೆದಿದ್ದಾರೆ , ಈಕೆಯ ಹವ್ಯಾಸಗಳು ಶಾಪಿಂಗ್, ಪಾರ್ಟಿ ಮಾಡೋದು .

 

ಸ್ಪರ್ಧಿ ೫ : ಶಮಿತಾ ಮಂಜೆಗೌಡ

 

 

ಈಕೆಯ ವಯಸ್ಸು 25 ವರ್ಷ, ಬೆಂಗಳೂರು ಕುವರಿ , ಈಗಾಗಲೇ ಮಾಡೆಲ್ ಆಗಿರುವ ಇವರಿಗೆ ಹರಟೆ ಹೊಡೆಯೋದು ತುಂಬಾನೇ ಇಷ್ಟ , ಶಾಪಿಂಗ್, ಪಾರ್ಟಿ ಮತ್ತು ಮಾಡಲಿಂಗ್ ನಂಥ ಹವ್ಯಾಸಗಳು ಇಟ್ಕೊಂಡಿದ್ದಾರೆ

ಸ್ಪರ್ಧಿ ೬ : ಭವಿನ್ ಮಚ್ಚಮಡ

 

 

ಈಕೆಯ ವಯಸ್ಸು 20 ವರ್ಷ, ಕೊಡಗಿನ ಕುವರಿ ,ಈಕೆಗೆ ಸಿಕ್ಕಾಪಟ್ಟೆ ಮಾತಾಡೋದು ಅಂದ್ರೆ ತುಂಬಾನೇ ಇಷ್ಟ ಫ್ರೆಂಡ್ಸ್ ಜೊತೆ ಸುತ್ತೋದು ಇಷ್ಟ , ಈಕೆ ಸ್ಪೋರ್ಟ್ಸ್ ಪರ್ಸನ್ ಬಾಸ್ಕೆಟ್ ಬಾಲ್ ಹಾಗೂ ಬ್ಯಾಟ್ ಮಿಂಟೋನ್ ಆಡೋದು ಇಷ್ಟ

ಸ್ಪರ್ಧಿ ೭ : ಅರ್ಪಿತಾ

 

 

ಈಕೆಯ ವಯಸ್ಸು 24 ವರ್ಷ, ಬೆಂಗಳೂರು ಕುವರಿ, ಈಕೆಗೆ ಸ್ವಿಮ್ ಮಾಡೋದು , ಬೈಕ್ ಅಂದ್ರೆ ಪಂಚ ಪ್ರಾಣ

 

ಸ್ಪರ್ಧಿ ೮ : ಶರಣ್ಯ

 

 

ಈಕೆಯ ವಯಸ್ಸು 20 ವರ್ಷ, ಬೆಂಗಳೂರು ಕುವರಿ, ಈಗಾಗಲೇ ಮಾಡೆಲ್ ಆಗಿರುವ ಇವರಿಗೆ ಹರಟೆ ಹೊಡೆಯೋದು ಅಷ್ಟು ಇಷ್ಟ ಆಗೋಲ್ಲ ,ತುಂಬಾ ಸೈಲೆಂಟ್ ಆಕ್ಟಿಂಗ್ ನಲ್ಲಿ ಆಸಕ್ತಿ ಇದೆ

 

ಸ್ಪರ್ಧಿ ೯ : ಆಸಿಯಾ ಬೇಗಂ

 

 

ಈಕೆಯ ವಯಸ್ಸು 19 ವರ್ಷ, ಬೆಂಗಳೂರು ಕುವರಿ, ಡ್ಯಾನ್ಸ್, ಶಾಪಿಂಗ್, ಪಾರ್ಟಿ, ಆಕ್ಟಿಂಗ್ ,ಮ್ಯೂಸಿಕ್ ತುಂಬಾ ಇಷ್ಟ

 

ಸ್ಪರ್ಧಿ ೧೦ : ಪ್ರಿಯಾಂಕಾ

 

 

ಈಕೆಯ ವಯಸ್ಸು 25 ವರ್ಷ , ಮದ್ದೂರಿನ ಕುವರಿ , ಈಗಾಗಲೇ ಮಾಡೆಲ್ ಆಗಿರುವ ಇವರು ಆಕ್ಟಿಂಗ್ ಸಹ ಮಾಡಿದ್ದಾರೆ , ಆಟಗಾರ , ಅಧ್ಯಕ್ಷ, ಕಿರಿಕ್ ಪಾರ್ಟಿ ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ ಪ್ರಿಯಾಂಕಾ

 

ಸ್ಪರ್ಧಿ ೧೧ : ಪ್ರತೀಕ್ಷ ನಾರಾಯಣ್

 

 

ಈಕೆಯ ವಯಸ್ಸು 20 ವರ್ಷ, ಬೆಂಗಳೂರು ಕುವರಿ, ಡ್ಯಾನ್ಸ್,ಪೇಂಟಿಂಗ್ ,ಇಂಡೋರ್ ಗೇಮ್ಸ್ ಅಂದ್ರೆ ಇಷ್ಟ

ಸ್ಪರ್ಧಿ ೧೨ : ಭಾವನ

 

 

ಈಕೆಯ ವಯಸ್ಸು 19 ವರ್ಷ, ಬೆಂಗಳೂರು ಕುವರಿ, ಡ್ಯಾನ್ಸ್ , ಆಕ್ಟಿಂಗ್ ನಲ್ಲೂ ಆಸಕ್ತಿ ಇದೆ ,ಈಗಾಗಲೇ ಅನೇಕ ಡಬ್ ಸ್ಮಾಶ್ ಮಾಡಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top