fbpx
ಸಮಾಚಾರ

ದೇಶ್ಯಾದ್ಯಂತ ಡಿಲೀಟ್ ಫೇಸ್ಬುಕ್ ಅಭಿಯಾನ ಶುರುವಾಗಿದೆ ಏಕೆ ಗೊತ್ತೇ

ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಅನೇಕರು ತಮ್ಮ ಫೇಸ್ಬುಕ್ ಅಕೌಂಟ್ಗಳನ್ನು ಡಿಲೀಟ್ ಮಾಡುತ್ತಿದ್ದಾರೆ ಇದರಲ್ಲಿ ಭಾರತದ ಅನೇಕ ಗಣ್ಯಾತಿ ಗಣ್ಯರು ಸಹ ಇದ್ದಾರೆ ಈಗ ಫೇಸ್ ಬುಕ್ ಡಿಲೀಟ್ ನ ಬಿಸಿ ಭಾರತಕ್ಕೂ ತಟ್ಟಿದ್ದು ಭಾರತೀಯರು ಸಹ ಡಿಲೀಟ್ ಫೇಸ್ ಬುಕ್ ಎಂಬ ಅಭಿಯಾನದಲ್ಲಿ ಸಾಕಷ್ಟು ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದಾರೆ.

 

 

 

ಫೇಸ್ಬುಕ್ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿ ತನ್ನ ಗ್ರಾಹಕರ ಅಥವಾ ಬಳಕೆದಾರರ ಮಾಹಿತಿಯನ್ನು ನೀಡಿದ್ದು ಇದನ್ನು ಕೇಂಬ್ರಿಜ್ ಅನಲಿಟಿಕಾ ಸಂಸ್ಥೆ ವಿವಿಧ ದೇಶಗಳ ಚುನಾವಣೆಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರಿತ್ತು ಎಂಬ ಆಪಾದನೆಯನ್ನು ಹೊತ್ತ ಹಿನ್ನೆಲೆಯಲ್ಲಿ ಅನೇಕರು ಫೇಸ್ ಬುಕ್ಕನ್ನು ಅಸುರಕ್ಷಿತ ಎಂದು ಭಾವಿಸಿ ತಮ್ಮ ಅಕೌಂಟ್ಗಳನ್ನು ಡಿಲೀಟ್ ಮಾಡಿಕೊಳ್ಳುತ್ತಿದ್ದಾರೆ.

 

 

 

ಹೀಗಿರುವಾಗ ಬಾಲಿವುಡ್ ನಟ ಫರಾನ್ ಅಖ್ತರ್ ಕೂಡ ಫೇಸ್ ಬುಕ್ ಸೇಫ್ ಅಲ್ಲ ಎಂದು ತಮ್ಮ ಅಕೌಂಟನ್ನು ಡಿಲೀಟ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಹಾಗೆಯೇ ತಮ್ಮ ವೈಯಕ್ತಿಕ ಅಕೌಂಟನ್ನು ಡಿಲೀಟ್ ಮಾಡಿರುವ ಫರಹಾನ್ ತಮ್ಮ ಇನ್ನೊಂದು ಪುಟ ವಾದ ಫರಹಾನ್ ಅಕ್ತರ್ ಲೈವ್‌ ಎಂಬ ಪುಟವನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top