fbpx
ಆರೋಗ್ಯ

ಈ ಮನೆಮದ್ದನ್ನು ಬಳಸಿಕೊಂಡು ನಿಮ್ಮ ತಲೆ ಹೊಟ್ಟಿನ ಸಮಸ್ಯೆಯಿಂದ ಬೇಗ ಹೊರಬನ್ನಿ

ತಲೆ ಹೊಟ್ಟು ನಿಯಂತ್ರಣಕ್ಕೆ ಮನೆಮದ್ದುಗಳು..

 

1. ವಿಟಮಿನ್ ಬಿ, ಸಿ ಹಾಗೂ ಈ ಮತ್ತು ಸಂಸ್ಕರಿಸಿದ ಶರ್ಕರ ಪದಾರ್ಥಗಳನ್ನು ಕಟ್ಟುನಿಟ್ಟಾಗಿ ಆಹಾರ ಕ್ರಮದಲ್ಲಿ ಬಳಸುವುದರಿಂದ ತಲೆಹೊಟ್ಟನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ.

 

2. ಬೆಚ್ಚಗಿನ ಎಣ್ಣೆಯ ಉಪಚಾರ ತಲೆಹೊಟ್ಟನ್ನು ನಿವಾರಿಸಲು ಅತ್ಯಂತ ಸರಳ ಉಪಾಯವಾಗಿದೆ.ಆಲಿವ್ ಅಥವಾ ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ತಲೆ ಬುರುಡೆಗೆ ಮಸಾಜ್ ಮಾಡಿ ಕೊಳ್ಳಬೇಕು. ಸ್ವಲ್ಪ ಸಮಯದ ನಂತರ ಬಿಸಿ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ತಲೆಗೆ ಸುತ್ತಿಕೊಂಡು ನಂತರ ತಲೆಯನ್ನು ತೊಳೆದುಕೊಳ್ಳಬೇಕು.

 

 

3. ಬಿಸಿ ಎಣ್ಣೆಯನ್ನು ರಾತ್ರಿಯೇ ತಲೆಗೆ ಹಚಿಕ್ಕೊಂಡು , ಒಡೆದ ಹಾಲಿನ ಸಾರವನ್ನು ಅಂತಿಮ ತೊಳೆತಕ್ಕೆ ಬಳಸಬೇಕು.

 

4. ಸೇಬಿನ್ ವಿನೆಗರ್ ಅನ್ನು ಬಿಸಿ ನೀರಿನಲ್ಲಿ ಬೆರೆಸಿ ತಲೆಗೆ ಪೂರ್ತಿಯಾಗಿ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹಾಗೆ ಬಿಟ್ಟು ಬೆಳ್ಳಗ್ಗೆ ಮೊಟ್ಟೆಯಿಂದ ಮಾಡಿದ ಶಾಂಪುವಿನಿಂದ ತೊಳೆದುಕೊಳ್ಳಬೇಕು.

 

5. ವಾರಕ್ಕೊಮ್ಮೆ ಚೆನ್ನಾಗಿ ಗೋಟಾಯಿಸಿದ ಹಸಿ ಮೊಟ್ಟೆ(ಹಳದಿ) ಲೋಳೆಯನ್ನು ತಲೆ ಬುರುಡೆಗೆ ಹಚ್ಚಿಕೊಳ್ಳಬೇಕು.

 

6. ರೋಸಮೇರಿ ಗಿಡದ ಕಡುವಾದ ಕಷಾಯವನ್ನು ತಲೆಬುರುಡೆಗೆ ಹಚ್ಚಿಕೊಳ್ಳುವುದು ತಲೆ ಹೊಟ್ಟಿನ ನಿವಾರಣೆಗೆ ಪರಿಣಾಮಕಾರಿ ವಿಧಾನ.

7. ನಾಲ್ಕು ಟೇಬಲ್ ಚಮಚದಷ್ಟು ಒಡೆದ ಹಾಲಿನ ಸಾರ,ನಾಲ್ಕು ಟೇಬಲ್ ಚಮಚ ಕರ್ಪುರ ಮಿಶ್ರಿತ ನೀರನ್ನು ಬೆರೆಸಿ, ತಲೆಗೆ ಹಚ್ಚಿಕೊಂಡು ಮೂರು ಗಂಟೆಗಳ ನಂತರ ತೊಳೆದುಕೊಳ್ಳಬೇಕು.

 

8. ಬ್ರಾಂಡಿಯನ್ನು ತಲೆಬುರುಡೆಗೆ ಹಚ್ಚಿ ಕೊಳ್ಳುವುದು ತಲೆ ಹೊಟ್ಟಿಗೆ ನಿವಾರಣೆಗೆ ಹೇಳಿ ಮಾಡಿಸಿದ್ದು.

 

9. ತೆಂಗಿನಕಾಯಿಯ ಗಟ್ಟಿಯಾದ ಸಾರವನ್ನು ಹಿಂಡಿಕೊಂಡು ಅದಕ್ಕೆ ಬಿಸಿ ನೀರು ಮತ್ತು ನಿಂಬೆರಸ ಬೆರೆಸಿ,ಇದ್ದನ್ನು ತಲೆಬುರುಡೆಗೆ ಹಚ್ಚಿಕೊಂಡು,ಅರ್ಧಗಂಟೆ ಬಿಟ್ಟು ನಂತರ ತೊಳೆದುಕೊಳ್ಳಬೇಕು.

 

10. ಏನು ಮಾಡಿದರು ತಲೆಯಲ್ಲಿ ಹೊಟ್ಟು ಹಾಗೆ ಉಳಿದುಕೊಂಡರೆ ತಜ್ಞರನ್ನು ಬೇಟಿ ಮಾಡುವುದು ಉತ್ತಮ.

11. ಉತ್ತಮವಾದ ತಲೆಹೊಟ್ಟು ನಿವಾರಕ ಶಾಂಪೂ ಬಳಸುವುದು ಉತ್ತಮ.

12. ಆದಷ್ಟು ನೈಸರ್ಗಿಕ ಸಂಪನ್ಮೂಲಗಳಿಂದ ಮಾಡಿದ ಶಾಂಪೂಗಳನ್ನು ಬಳಸಿ.ಉದಾಹರಣೆಗೆ ಪತಂಜಲಿ,ಹಿಮಾಲಯ ಉತ್ಪನ್ನಗಳನ್ನು ಬಳಸಿ.

13. ತಾಜಾ ಮೆಂತ್ಯದ ಸೊಪ್ಪನ್ನು ಅರೆದು ಪೇಸ್ಟನಂತೆ ತಯಾರಿಸಿ ತಲೆಬುರುಡೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ನಂತರ ತೊಳೆಯಿರಿ.

 

14. ಆಗಾಗ ಮಜ್ಜಿಗೆಯಿಂದ ತಲೆಗೆ ಸ್ನಾನ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಯಾಗುತ್ತದೆ.

 

15. ಹುಣಸೆಹಣ್ಣಿನ ನೀರಿಗೆ ಬೆಲ್ಲ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ತಲೆಯ ಹೊಟ್ಟು ಬರುವುದಿಲ್ಲ.

 

16. ರಾಗಿ ಹಿಟ್ಟನ್ನು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ದೂರವಾಗುತ್ತದೆ.

 

17. ಬಿಲ್ವ ಪಾತ್ರೆಯ ಕಾಯಿಯ ತಿರುಳನ್ನು ಬೇಯಿಸಿ ತಲೆಗೆ ಹಚ್ಚಿದರೆ ಹೊಟ್ಟು ದೂರವಾಗುತ್ತದೆ.

 

18. ಮೆಂತ್ಯ ಕಾಳನ್ನು ನೀರಿನಲ್ಲಿ ನೆನೆಸಿ ರುಬ್ಬಿ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುತ್ತದೆ.

19. ಬಾಳೆ ದಿಂಡಿನ ರಸವನ್ನು ಎಣ್ಣೆಯ ಜೊತೆಗೆ ಬೆರೆಸಿ ಹಚ್ಚಿದರೆ ತಲೆ ಹೊಟ್ಟು ನಿಯಂತ್ರಣವಾಗುತ್ತದೆ.

 

20. ಮೂರು ನಾಲ್ಕು ದಿನದ ಹುಳಿಮೊಸರು ಹಚ್ಚಿ ನೋಡಿ ತಲೆ ಹೊಟ್ಟು ಮಾಯವಾಗುತ್ತದೆ.

 

21. ಎರಡು ಮೊಟ್ಟೆ ಮತ್ತು ಎರಡು ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಹಚ್ಚಿ.ತಲೆ ಹೊಟ್ಟಿನ ಸಮಸ್ಯೆ ಬಗೆಹರಿಯುತ್ತದೆ.

 

22. ಯಾವುದೇ ಬಣ್ಣದ ದಾಸವಾಳದ ಎಲೆ ರುಬ್ಬಿ ಮೊಸರು ಹಾಕಿ ಕಲೆಸಿ ಹಚ್ಚಿ ತಲೆಹೊಟ್ಟು ಹೋಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top