fbpx
ಭವಿಷ್ಯ

ನೀವು ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ ನೋಡಿ

ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ.

ನಮ್ಮ ಜ್ಯೋತಿಷ್ಯರ ಪ್ರಕಾರ ಹುಟ್ಟಿದ ಸಮಯ ಅತೀ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಜ್ಯೋತಿಷ್ಯರ ಹತ್ತಿರ ಹೋದರೆ ಹುಟ್ಟಿದ ತಿಂಗಳು, ಹುಟ್ಟಿದ ಸಮಯ ಮತ್ತು ದಿನಾಂಕವನ್ನು ಕೇಳುತ್ತಾರೆ.ನೀವು ಹುಟ್ಟಿದ ಸಮಯದ ಆಧಾರದ ಮೇಲೆ  ಯಾವ ಸಮಯದಲ್ಲಿ ಹುಟ್ಟಿದರೆ ಎಂತಹ ವ್ಯಕ್ತಿತ್ವ ಹೊಂದುತ್ತೀರ ಎಂದು ತಿಳಿದುಕೊಳ್ಳೋಣ ಬನ್ನಿ.

 

 

1.ಮುಂಜಾನೆ 4 am ರಿಂದ 6 am ಗಂಟೆ ಮದ್ಯ ಹುಟ್ಟಿರುವವರು:- ಇವರು  ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ,ಬೇರೆಯವರು ಮಾಡುವ ಮೋಸದಿಂದ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಹಿಡಿದ ಕೆಲಸವನ್ನು ಹಠದಿಂದ ಮಾಡುತ್ತಾರೆ.ಇವರ ಜೀವನ ಉಜ್ವಲವಾಗಿರುತ್ತದೆ.

2.ಮುಂಜಾನೆ 6am ರಿಂದ 8am ಮದ್ಯೆ ಹುಟ್ಟಿರುವವರು:- ಇವರಿಗೆ  ಕಡಿಮೆ ಆಸೆ  ಪಟ್ಟರು ಹೆಚ್ಚಿನ ಫಲ ಸಿಗುತ್ತದೆ.ಇವರ ಮನಸ್ಸು ಪ್ರಶಾಂತವಾಗಿರುತ್ತದೆ.ಇವರು ಕಠಿಣ ಪರಿಶ್ರಮ, ಕ್ರಿಯಾಶೀಲತೆಯ ಜೀವನ ಶೈಲಿ ಇರುವ ಹಾಗೆ ನೋಡಿಕೊಳ್ಳಬೇಕು. ಸರಿಯಾಗಿ ಬಂಡವಾಳ ಹೂಡಿದರೆ ಹೆಚ್ಚಿನ ಲಾಭ ಸಿಗುತ್ತದೆ. ಇಲ್ಲದಿದ್ದರೆ ಹೆಚ್ಚಿನ ಅಪಾಯಕ್ಕೆ ಸಿಲುಕುತ್ತಾರೆ.

3.ಬೆಳಗ್ಗೆ 8am ರಿಂದ 10 am ಗಂಟೆಯ ಮದ್ಯೆ ಹುಟ್ಟಿರುವವರು:- ಇವರಿಗೆ ಹಣಕಾಸಿನ ಸ್ಥಿತಿ ಚೆನ್ನಾಗಿದ್ದರೆ ಮಾತ್ರ ನಿಮ್ಮ ಸ್ನೇಹಿತರು ಹಾಗೂ ಸಂಭಂಧಿಕರು ನಿಮ್ಮ ಜೊತೆ ಆತ್ಮೀಯವಾಗಿ ಇರುತ್ತಾರೆ.ನಿಮ್ಮ ಜೀವನದಲ್ಲಿ ಹಣ ಮುಖ್ಯ ಪಾತ್ರ ವಹಿಸುತ್ತದೆ.ನೀವು ಅಂದುಕೊಂಡದ್ದು ಆಗದೇ ಇದ್ದಾಗ ನಿರಾಸೆ ಹಾಗೂ ಮನೋಬಲ ಕುಗ್ಗಿ ಖಿನ್ನರಾಗುವ ಅಪಾಯವಿದೆ.

 

 

4.ಬೆಳಗ್ಗೆ 10am ರಿಂದ 12 pm ಗಂಟೆಯ ಮದ್ಯ ಹುಟ್ಟಿರುವವರು:-  ಇವರಿಗೆ ವಿಜಯೋತ್ಸವ ಹೆಚ್ಚಾಗಿ ಇರುತ್ತದೆ.ಪ್ರತಿ ಕಾರ್ಯದಲ್ಲೂ ಯಶಸ್ಸು ಕಾಣುತ್ತಾರೆ.ನಿಮ್ಮ ಜೀವನ ಸಂತೋಷವಾಗಿರುತ್ತದೆ.ಕೈಯಲ್ಲಿರುವ ಕೆಲಸವನ್ನು ಹಾಗೂ ನಿಮ್ಮ ಶಕ್ತಿಯನ್ನು  ಕಳೆದುಕೊಂಡರೆ ತುಂಬಾ ಅಪಾಯವನ್ನು ಅನುಭವಿಸುತ್ತೀರ.

5.ಮಧ್ಯಾಹ್ನ 12pm ರಿಂದ 2pm ಗಂಟೆಯ ಮದ್ಯ ಹುಟ್ಟಿರುವವರು:- ಇವರು ತುಂಬಾ ಸುಂದರವಾಗಿ ಹಾಗೂ ಬುದ್ಧಿವಂತಿಕೆ ಹೆಚ್ಚಾಗಿ ಇರುತ್ತದೆ. ಎಲರನ್ನು ಕರುಣೆ ,ವಾತ್ಸಲ್ಯ, ಹಾಗೂ ಪ್ರೀತಿಯಿಂದ ನೋಡುವುದರಿಂದ ಇವರನ್ನು  ಎಲ್ಲರೂ ಗೌರವಿಸುತ್ತಾರೆ.ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯುತ್ತಾರೆ.ಇವರ  ಭವಿಷ್ಯ ಉತ್ತಮವಾಗಿರುತ್ತದೆ.ಎಲ್ಲಾ ಚೆನ್ನಾಗಿ ಇದೆ ಎಂದು ಬೇಜವಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಅಪಾಯ ತಪ್ಪದು.

6.ಮಧ್ಯಾಹ್ನ 2pm ರಿಂದ 4pm ಗಂಟೆಯೊಳಗೆ ಹುಟ್ಟಿದವರು:-  ದುಡ್ಡಿನ ವಿಷಯಗಳಾದ ಬ್ಯಾಂಕ ಖಾತೆಗಳಲ್ಲಿ ತುಂಬಾ ಬುದ್ಧಿವಂತಿಕೆಯಿಂದ ಇರುತ್ತಾರೆ. ಕೆಲವು ಸಮಯದಲ್ಲಿ ಸಬಂಧಗಳಲ್ಲಿ ಕಷ್ಟಗಳು ಕಾನೂನು ಬದ್ಧವಾಗಿ  ಅಪಾಯಗಳು,ಅಪಘಾತಗಳು ಇವರ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ.

 

 

7.ಸಂಜೆ 4pm ರಿಂದ 6 pm ಗಂಟೆಯೊಳಗೆ ಹುಟ್ಟಿದವರು:-  ಇವರಿಗೆ ಒಳ್ಳೆಯ ಗೌರವ ಮತ್ತು ಪ್ರಾಧಾನ್ಯತೆ ಸಿಗುತ್ತದೆ.ಜೀವನದಲ್ಲಿ ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.ಮದುವೆಯ ನಂತರ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಕಾನೂನು ಬದ್ಧವಾಗಿ ಮದ್ಯ ವರ್ತಿಗಳಂತಹ ಕೆಲಸದಲ್ಲಿ ಹೆಚ್ಚಾಗಿ ಸಂಪಾದನೆ ಮಾಡುತ್ತೀರ. ಇವರಿಗೆ ಶತ್ರುಗಳು ಹೆಚ್ಚಾಗಿ ಇರುತ್ತಾರೆ.

8.ಸಂಜೆ 6 pm  ರಿಂದ 8 pm ಗಂಟೆಯೊಳಗೆ ಹುಟ್ಟಿದವರು:-  ನಿಮ್ಮ ಆಪ್ತ ಸ್ನೇಹಿತರ ಆಧಾರದ ಮೇಲೆ ನಿಮ್ಮ ಜೀವನ ಆಧಾರವಾಗಿರುತ್ತದೆ.ಅವರ ಜೊತೆ ನಿಮ್ಮ ಸಂಬಂಧ ಹೇಗಿರುತ್ತದೆಯೋ ಅದರ ಆಧಾರದ ಮೇಲೆ ನಿಮ್ಮ ಜೀವನ ಅವಲಂಬಿಸಿರುತ್ತದೆ. ಸಾಮಾಜಿಕ ಜೀವನವೇ ಪ್ರಧಾನವಾಗಿರುತ್ತದೆ. ಕಷ್ಟ ಪಡುವ ವ್ಯಕ್ತಿತ್ವ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೂರಿಸುತ್ತದೆ.

9.ರಾತ್ರಿ 8pm ರಿಂದ 10 pm ಗಂಟೆಯೊಳಗೆ ಹುಟ್ಟಿದವರು :-  ಇವರಿಗೆ ಸೃಜನಶೀಲ ಕೌಶಲ್ಯ ಹೆಚ್ಚಾಗಿ ಇರುತ್ತದೆ. ಅಭಿನಯಿಸುವ ಕ್ಷೇತ್ರದಲ್ಲಿ ಇವರಿಗೆ ಉದ್ಯೋಗ ದೊರಕುತ್ತದೆ. ನಿಮ್ಮ ಒಳ್ಳೆಯ ತನವನ್ನು ಭಯಸುವವರು ಮಾತುಗಳನ್ನು ಕೇಳದೆ ಇರುವುದರಿಂದ ವಿಬ್ಭಿನ್ನ ಪರಿಣಾಮ ಎದುರಿಸ ಬೇಕಾಗುತ್ತದೆ.

 

 

10.ರಾತ್ರಿ 10pm ರಿಂದ 12am  ಗಂಟೆಯೊಳಗೆ ಹುಟ್ಟಿದವರು:- ಇವರಿಗೆ ಆಸ್ತಿ ಸಂಪಾದನೆ ಮಾಡುವುದು ತುಂಬಾ ಕಷ್ಟಕರವಾಗಿದೆ. ರಿಯಲ್ ಎಸ್ಟೇಟ್ ನಲ್ಲಿ ಉನ್ನತ ಸ್ಥಾನಕ್ಕೆ  ಏರುತ್ತಾರೆ. ಇವರಿಗೆ ಜೀವನದಲ್ಲಿ ಕಷ್ಟ ನಷ್ಟಗಳು ಎರಡು ಸಮಾನವಾಗಿ ಬರುತ್ತವೆ.

11.ಮಧ್ಯರಾತ್ರಿ 12 am ರಿಂದ 2pm ಗಂಟೆಯೊಳಗೆ ಹುಟ್ಟಿದವರು:- ಇವರು ಹೆಚ್ಚು ಬುದ್ಧಿವಂತಿಕೆಯಿಂದ ಸಾಧನೆ ಮಾಡುತ್ತಾರೆ,ಛಲ ಹೊಂದಿರುತ್ತಾರೆ. ಮಾಧ್ಯಮಕ್ಕೆ  ಸಂಬಂದಿಸಿದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಸಂಭಂಧಿಕರು ಹಾಗೂ ಸ್ನೇಹಿತರು ಹೆಚ್ಚಾಗಿ ಇವರ ಜೀವನದಲ್ಲಿ ಪ್ರಭಾವ ಬೀರುತ್ತಾರೆ.ಒಳ್ಳೆಯ ಸಾಮಾಜಿಕ ಜೀವನವನ್ನು ಹೊಂದುತ್ತಾರೆ.

12.ಬೆಳೆಗಿನ ಜಾವ 2am ರಿಂದ 4am ಗಂಟೆಯೊಳಗೆ ಹುಟ್ಟಿದವರು:- ಇವರು ಆಹಾರ ಉತ್ಪಾದನೆಯ ಉದ್ಯಮದ ಕೆಲಸದಲ್ಲಿ ಒಳ್ಳೆಯ ಸ್ಥಾನ ಮಾನ ಗಳಿಸುತ್ತಾರೆ.ಇವರು ಯಾವುದಾದರೂ ಕೆಲಸ ಪ್ರಾರಂಭ ಮಾಡಿದರೆ ಮುಗಿಯುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top