fbpx
ಉಪಯುಕ್ತ ಮಾಹಿತಿ

ನಿಮ್ಮ ವಿವಾಹ ಜೀವನ ಸೂಪರ್ ಖುಷಿ ಖುಷಿಯಾಗಿ ಇರಬೇಕು ಅಂದ್ರೆ ದ್ರೌಪದಿ ಹೇಳೋ ಈ 7 ಸಲಹೆ ತಪ್ಪದೆ ಪಾಲಿಸಿ

ದ್ರೌಪದಿ ಹೇಳಿದ ಈ 7 ರಹಸ್ಯವಾದ ವಿಷಯಗಳನ್ನು  ನಿಮ್ಮ ವಿವಾಹಿತ ಜೀವನದಲ್ಲಿ  ಅಳವಡಿಸಿಕೊಂಡು  ಸಂತೋಷವಾಗಿರಿ.

 

ಪಾಂಡವರನ್ನು ಗಡಿಪಾರು ಮಾಡಿದ ಸಮಯದಲ್ಲಿ ಒಂದು ದಿನ ಐದು ಜನ ಅಣ್ಣ-ತಮ್ಮಂದಿರು ಮತ್ತು ದ್ರೌಪದಿಯು  ಒಂದು ಸ್ಥಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಆಗ ಭಗವಂತನಾದ ಶ್ರೀ ಕೃಷ್ಣನು ಮತ್ತು ಅವನ ಹೆಂಡತಿ ಸತ್ಯಭಾಮ ಅಲ್ಲಿಗೆ ಇವರನ್ನು ಭೇಟಿ ಮಾಡಲು ಬಂದರು.

 

 

ಆಗ ಸತ್ಯಭಾಮೆಯು ದ್ರೌಪದಿಗೆ ನಾನು ನಿನ್ನ ಜೊತೆ ಪ್ರತ್ಯೇಕವಾಗಿ ಮಾತನಾಡಬೇಕು ಎಂದು ವಿನಂತಿಸಿ ಕೊಂಡಳು. ಅವರಿಬ್ಬರೇ ಕುಳಿತು ಮಾತನಾಡುವಾಗ  ಸತ್ಯಭಾಮೆ  ದ್ರೌಪದಿಯನ್ನು ಕೇಳಿದಳು ನೀನು ನಿನ್ನ ಈ ಐದು ಜನ ಗಂಡಂದಿರನ್ನು ಹೇಗೆ ಎಲ್ಲಾ ಸಮಯದಲ್ಲಿಯೂ ಸಂತೋಷವಾಗಿರುವಂತೆ ನೋಡಿಕೊಂಡಿರುವೆ ಎಂದು ಕೇಳಿದಳು.

 

ಸತ್ಯಭಾಮೆ ಇದರಿಂದ ಪ್ರಭಾವಿತಳಾಗಿದ್ದಳು, ಹೇಗೆ  ದ್ರೌಪದಿಯು ಐದು ಜನ ಗಂಡಂದಿರನ್ನು ಮದುವೆಯಾದ ನಂತರ ಇಷ್ಟು ಚೆನ್ನಾಗಿ ಎಲ್ಲವನ್ನು ನಿರ್ವಹಿಸಿದ್ದಾಳೆ? ಇದು ಹೇಗೆ ಸಾಧ್ಯ ? ಎಂದು ದ್ರೌಪದಿಯ ಹತ್ತಿರ ಸಲಹೆಯನ್ನು ಕೇಳಿದಳು.

 

 

ಆಗ ದ್ರೌಪದಿಯು ವಿವಾಹಿತ ಜೀವನದಲ್ಲಿ   ಎಲ್ಲವನ್ನೂ ನಿರ್ವಹಿಸಿ ಸಂತೋಷವಾಗಿ ಜೀವನ ನೆಡೆಸುವುದಕ್ಕೆ  ಕೆಲವು ರಹಸ್ಯಗಳನ್ನು ಸತ್ಯಭಾಮೆಗೆ ಹೇಳಿದಳು.ಆ 7 ರಹಸ್ಯಗಳನ್ನು ಇಲ್ಲಿ ಬಹಿರಂಗ ಪಡಿಸಲಾಗಿದೆ.

 

1. ವಿವಾಹಿತ ಜೀವನದಲ್ಲಿ ಸಂತೋಷವಾಗಿರಲು, ದಂಪತಿಗಳ ನಡುವೆ ಯಾವುದೇ ಅಸೂಯೇ ಇರಬಾರದು. ತಮ್ಮನ್ನು ಹೆತ್ತವರಿಗೆ ಅಂದರೆ ತಂದೆ ತಾಯಿಗೆ ಬದ್ಧರಾಗಿರಬೇಕು ಮತ್ತು ಎಲ್ಲಾ ಅಹಂಕಾರವನ್ನು ಬಿಟ್ಟು ಬಿಡಬೇಕು.

 

2. ಹೆಂಗಸರು ಯಾವತ್ತೂ ಕೂಡ ತನ್ನ ಗಂಡಂದಿರನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡಬಾರದು ಎಂದು ದ್ರೌಪದಿಯು ಹೇಳುತ್ತಾಳೆ. ಕೆಲವು ಹೆಂಗಸರು ಯಂತ್ರ, ತಂತ್ರ, ಮಂತ್ರಗಳಿಂದ ಮತ್ತು ಹಲವಾರು ಇತರೆ ವಿಧಾನಗಳನ್ನು ಬಳಸಿ ಅವರ ಪತಿಯನ್ನು ತಮ್ಮ ಹಿಡಿತದಲ್ಲಿಟ್ಟುಕ್ಕೊಳ್ಳಲು ಪ್ರಯತ್ನಿಸುತ್ತಾರೆ, ಆದರೆ ಇದು ತಪ್ಪು ಹೀಗೆ ಮಾಡುವುದರಿಂದ ಮದುವೆಯು ಮುರಿದು ಹೋಗುವ ಸಂಭವವಿರುತ್ತದೆ.

3. ಹೆಂಗಸು ತನ್ನ ಬುದ್ಧಿವಂತಿಕೆ ಮತ್ತು ಚಾಣಾಕ್ಷತನದಿಂದ ತನ್ನ ಗಂಡನ ಕುಟುಂಬದವರು ಬಗ್ಗೆ ಎಲ್ಲ ವಿಷಯವನ್ನು ತಿಳಿದಿರುತ್ತಾಳೆ.ಅವಳು ಎಲ್ಲರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಕುಟುಂಬದ ಅಗತ್ಯತೆಯನ್ನು ಪೂರೈಸಲು ಆಸಹಾಯಕವಾಗಿರುವ ಮಹಿಳೆಯರು ತಮ್ಮ ವಿವಾಹಿತ ಜೀವನವನ್ನು ಕಳೆದುಕೊಳ್ಳುತ್ತಾರೆ.

 

 

4. ವಿವಾಹಿತ ಜೀವನವನ್ನು ಸಂತೋಷದಿಂದ ಇಡುವುದಕ್ಕೆ ಮಹಿಳೆಯು ತಾನು ಯಾವ ಗುಂಪಿನಲ್ಲಿರುವ ಮಹಿಳೆಯರ ಜೊತೆ ಸ್ನೇಹ ಬೆಳೆಸಿದ್ದೀನಿ, ಅವರ ಸ್ವಭಾವ ಎಂತದ್ದು ಎಂದು ತಿಳಿದುಕೊಳ್ಳಬೇಕು. ಕೆಟ್ಟ ಸ್ವಭಾವ ಹೊಂದಿರುವ ಮಹಿಳೆಯರಿಂದ ದೂರವಿರಬೇಕು, ಅಂತಹ ಮಹಿಳೆಯರೊಂದಿಗೆ ಸ್ನೇಹ ಬೆಳೆಸುವುದರಿಂದ ತಪ್ಪು ಆಲೋಚನೆಗಳನ್ನು ನಮ್ಮ ಮನಸ್ಸಿನಲ್ಲಿ ಹುಟ್ಟು ಹಾಕುತ್ತದೆ, ಮದುವೆಯ ಜೀವನವೂ ಕೂಡ ಮರಿದುಬೀಳುತ್ತದೆ.

 

 

5. ಒಂದು ಕುಟುಂಬದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಜವಾಬ್ದಾರಿಗಳಿಂದ ದೂರ ಉಳಿಯಬಾರದು. ಯಾವತ್ತೂ ಕೂಡ ಒಬ್ಬರು ಇನ್ನೊಬ್ಬರನ್ನು ಅವಮಾನಿಸಬಾರದು. ಪುರುಷ ಮತ್ತು ಮಹಿಳೆ ಒಬ್ಬರನ್ನೊಬ್ಬರು ಪರಸ್ಪರ ನೋಡಿಕೊಳ್ಳಬೇಕು, ಆಗ ಅವರಲ್ಲಿ ಪ್ರೀತಿಯು ಹೆಚ್ಚಾಗಿ ಅವರ ವಿವಾಹಿತ ಜೀವನವು ಇನ್ನೂ ಪ್ರಭಲವಾಗುತ್ತದೆ ಎಂದು ದ್ರೌಪದಿಯು ಹೇಳಿದ್ದಾಳೆ.

 

 

6. ಕೆಲವು ವಿಷಯಗಳನ್ನು ಮಹಿಳೆಯರು ವಿವಾಹಿತ ಜೀವನದಲ್ಲಿ ತಡೆಗಟ್ಟಬೇಕು. ಅವು ಕೋಪ, ನಿರ್ಲಕ್ಷ್ಯತನ, ಅಪರಿಚಿತರೊಂದಿಗೆ ಅನಗತ್ಯ ಸಂಭಾಷಣೆಯನ್ನು ಮಾಡಬಾರದು, ಹಾಗೆ ಮಾಡುವ ಮಹಿಳೆಯರು ಅವರ ಗೌರವವನ್ನು ಸಮಾಜದಲ್ಲಿ ಕಳೆದುಕೊಳ್ಳುತ್ತಾರೆ.

7. ವಿವಾಹಿತ ಜೀವನದಲ್ಲಿ ಗಂಡನು ತನ್ನ ಹೆಂಡತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ ಹೆಂಡತಿಯನ್ನು ಸಂತೋಷ ಪಡಿಸಬೇಕು, ಆದರೆ ಅದೇ ಸಮಯದಲ್ಲಿ ಹೆಂಡತಿಯೂ ಕೂಡ ಅನಗತ್ಯ ವಿಷಯಗಳನ್ನು ಕೇಳಬಾರದು. ಗಂಡನು ಯಾವಾಗಲು ತನ್ನ ಹೆಂಡತಿಯ ರಕ್ಷಕನಾಗಿರಬೇಕು ಮತ್ತು ಆಕೆಯ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿ ಕೊಳ್ಳಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top