fbpx
ಉಪಯುಕ್ತ ಮಾಹಿತಿ

ಪೋಷಕರು ಆದಷ್ಟು ಟ್ರಿಪ್ ,ಪ್ರವಾಸಗಳಿಗೆ ಹೋಗಲು ಈ ಬೇಸಿಗೆಯಲ್ಲಿ ಪ್ಲಾನ್ ಮಾಡುತ್ತಾರೆ ಅಂತವರು ತಪ್ಪದೆ ಟ್ರಿಪ್ ಹೋಗುವಾಗ ಈ ಸಲಹೆಗಳನ್ನು ಪಾಲಿಸಿ

ಪ್ರವಾಸಿಗರಿಗೆ ಸಲಹೆಗಳು.

 

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಶಾಲಾ ಕಾಲೇಜು  ಮಕ್ಕಳಿಗೆ ಎಲ್ಲರಿಗೂ ಬೇಸಿಗೆ ರಜೆ ಇರುತ್ತದೆ. ಬೇಸಿಗೆ ರಜೆ  ಅಂತಲೇ ಪ್ರತ್ಯೇಕವಾಗಿ ರಜೆ  ಕೊಡುತ್ತಾರೆ. ಮನೆಯಲ್ಲಿ ಮಕ್ಕಳು ಇರುತ್ತಾರೆ.ನೀವು ಕೂಡ ಕೆಲಸಕ್ಕೆ ಒಂದೆರಡು ದಿನ ರಜಾ ಹಾಕಿ ತಂಪಾದ ಸ್ಥಳಗಳಿಗೆ ಭೇಟಿನೀಡಿ ತಂಪಾಗಿ, ಖುಷಿಯಾಗಿ ಕಾಲ ಕಳೆದುಕೊಂಡು ಬರಬಹುದು. ಪ್ರವಾಸ ಕೈಗೊಳ್ಳುವ ಮುನ್ನ ನೀವು ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕು,ಯಾವ ಎಚ್ಚರಿಕೆಗಳನ್ನು ಮುಂಜಾಗೃತವಾಗಿ ತೆಗೆದುಕೊಳ್ಳಬೇಕು ಎಂದು ತಿಳಿದುಕೊಳ್ಳಿ.ಅದರಲ್ಲಿ ಇಲ್ಲಿವೆ ನಿಮಗೆ ಸಹಾಯಕವಾಗುವ  ಸಲಹೆಗಳು.

 

 

ಪ್ರವಾಸ ಮಾಡುವ ಮುನ್ನ ಪ್ರವಾಸಿ ತಾಣಗಳ ಪರಿಚಯದ ಅಗತ್ಯವಿದೆ.ಪರಿಚಯ,ವಿಮರ್ಶೆ,ಊಟ,ವಸತಿಗಳ ವಿವರಗಳನ್ನು ನೀಡುವ ಸಾಕಷ್ಟು ವೆಬ್ಸೈಟ್ಗಳು ಇಂದಿನ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಇವೆ ಅವುಗಳ ಪ್ರಯೋಜನ ಪಡೆಯಿರಿ.

 

ಸಮಾಧಾನವಾಗಿ ಹೋಗುವಂತ ಪ್ರವಾಸ ಕೇವಲ ಸ್ಥಳಗಳಿಗೆ ಮಾತ್ರ ಮೀಸಲಲ್ಲ. ನೀವು ನಿಮ್ಮ ಜೊತೆ ತೆಗೆದುಕೊಂಡು ಹೋಗುವ ಬಟ್ಟೆ,ಬರೆ ಸೇರಿದಂತೆ ಇತರೇ ಅಗತ್ಯ ವಸ್ತುಗಳು ಅತ್ಯಗತ್ಯ, ಆದ್ದರಿಂದ ಪ್ಯಾಕಿಂಗ್ ಬಗ್ಗೆ ಕೂಡ ಮುಂಚೆಯೇ ಯೋಚಿಸಿರಬೇಕು.

 

ಕೆಲವು ಪ್ರದೇಶಗಳಲ್ಲಿ ಊಟ ತಿಂಡಿಗಳು ನಿಮಗೆ ಇಷ್ಟವಾಗುವುದಿಲ್ಲ.ಅದರಲ್ಲೂ ವಿದೇಶ ಪ್ರವಾಸವಾಗಿದ್ದರೆ ತಿನ್ನಲು ಮನೆಯಿಂದಲೇ  ತಯಾರು ಮಾಡಿಕೊಂಡು ತೆಗೆದುಕೊಂಡು ಹೋಗಿ.

 

 

ಯಾವ ಯಾವ ಸ್ಥಳಗಳಿಗೆ ಹೋಗಬೇಕು,ಅಲ್ಲಿ ಎಷ್ಟು ಸಮಯ ಕಳೆಯಬೇಕು ,ಒಂದು ದಿನದಲ್ಲಿ ಎಷ್ಟು ಸ್ಥಳಗಳನ್ನು ನೋಡಬಹುದು ಎಷ್ಟು ದೂರವಿದೆ ಇವೆಲ್ಲವನ್ನೂ ಮುಂಚೆಯೇ ಯೋಚನೆ ಮಾಡಿ ಪಟ್ಟಿ ಮಾಡಿಟ್ಟುಕೊಳ್ಳಿ ಆಗ ನಿಮಗೆ  ಬೇಕಾದಲ್ಲಿ  ಸಹಾಯಕ್ಕೆ ಬರುತ್ತದೆ.

 

 

ಬೇಸಿಗೆಯ ಸಮಯದಲ್ಲಿ ಆದಷ್ಟು ತಂಪಾದ ಸ್ಥಳಗಳಿಗೆ ಭೇಟಿ ನೀಡಿ ನಮ್ಮ ಕರ್ನಾಟಕದಲ್ಲಿಯೇ ಇರುವಂತಹ

ಕುದುರೆಮುಖ , ಊಟಿ ,ಎರಕಾಡ್, ಕೊಡಗು , ವೈನಾಡ ,  ನಾಗರಹೊಳೆ, ಬೆಳ್ಳಿಕಲ್, ಭೀಮೇಶ್ವರಿ, ಮಧುಮಲೈ, ಹಳೇಬೀಡು.

ಇಂತಹ ಸ್ಥಳಗಳಿಗೆ ಪ್ರವಾಸ ಹೋಗಹುದು ಉತ್ತಮ.

 

 ನೀವು ಪ್ರವಾಸ ಹೋದ ಕಡೆ ಏನಾದರೂ ಖರೀದಿಸುವುದಾದರೆ ಅತೀ ಹೆಚ್ಚರ ವಹಿಸಿ ನೋಡಿ ಪರೀಕ್ಷೆ ಮಾಡಿ ಖರೀದಿಸಿ,ಮೋಸಹೋಗಬೇಡಿ.

 ಪ್ರವಾಸಿ ತಾಣಗಳಿಗೆ ಹೋಗುವಾಗ ಜೊತೆಗೆ ಕ್ಯಾಮೆರಾ ತೆಗೆದುಕೊಂಡು ಹೋಗಿ,ಪ್ರವಾಸದ ಸುಂದರವಾದ ಕ್ಷಣಗಳನ್ನು ಕಾದಿಡಲು ನಿಮ್ಮ ಫೋಟೋಗಳು ನಿಮ್ಮ ಜೊತೆಗೆ ಇರಲು ನೆನಪಿಗೆ ಬೇಕಾಗುತ್ತವೆ.

 

 

 

ನೀವು ಪ್ರವಾಸ ಹೋಗುವಾಗ ಗಮನದಲ್ಲಿಡಿ ಹೆಂಗಸರು ಅಧಿಕ ಒಡವೆಗಳನ್ನು ಹಾಕಿಕೊಂಡು ಹೋಗಬೇಡಿ.ಅಲ್ಲಿ ನೀವು ಕಳೆದುಕೊಂಡು ಬರುವ ಸಾಧ್ಯತೆ ಹೆಚ್ಚು.

 

 ನಿಮ್ಮ ಲಗೇಜ್ ಬ್ಯಾಗನ್ನು ಬಹಳ ಎಚ್ಚರದಿಂದ ನೋಡಿಕೊಳ್ಳಿ ಯಾಕೆಂದರೆ ಪ್ರವಾಸಿ ತಾಣಗಳಲ್ಲಿ ಕಳ್ಳರು ಜಾಸ್ತಿ .

 

 

 ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯದ ಕಡೆ ಗಮನ ಕೊಡಿ ಒಳ್ಳೆಯ ಹೋಟೆಲಗಳಲ್ಲಿ ಊಟ ತಿಂಡಿಮಾಡಿ.ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ,ಕಾಪಾಡಿಕೊಳ್ಳಿ.ನಿಮ್ಮ ಮನಸ್ಸನ್ನು ಕೆಡಿಸಿಕೊಳ್ಳಬೇಡಿ ಖುಷಿಯಾಗಿರಿ.

 

 

 ಮಕ್ಕಳನ್ನು ಕರೆದುಕೊಂಡು ಹೋಗುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು.ನೀರಿರುವ ಸ್ಥಳಗಳಿಗೆ ಹೋಗುವುದಾದರೆ ಪ್ರತ್ಯೇಕವಾಗಿ ಎಚ್ಚರಿಕೆಯಿಂದ ಕರೆದುಕೊಂಡು ಹೋಗಿ ನೀರಿಗೆ ಇಳಿಯದಂತೆ ನೋಡಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top