fbpx
ಆರೋಗ್ಯ

ತುಳಸಿ ಯಾಕೆ ಶ್ರೇಷ್ಠ ಅಂತ ಈ ಔಷಧಿಯ ಗುಣಗಳೇ ಹೇಳುತ್ತವೆ!

ತುಳಸಿ ಗಿಡಕ್ಕೆ ನಮ್ಮ ದೇಶದಲ್ಲಿ ಪವಿತ್ರವಾದ ಸ್ಥಾನವಿದೆ. ಇದು ಪೂಜಿಸಲ್ಪಡುವುದು ಮಾತ್ರವಲ್ಲ, ವೈದ್ಯಶಾಸ್ತ್ರದಲ್ಲೂ ವಿಶೇಷ ಸ್ಥಾನ ಪಡೆದಿದೆ. ಹಾಗಾಗಿ ಬಹುತೇಕ ಹಿಂದೂಗಳ ಮನೆಯ ಮುಂದೆ ಒಂದಾದರೂ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಭಾರತೀಯರ ಪಾಲಿಗೆ ಪವಿತ್ರವಾದ ಗಿಡ ಮಾತ್ರವಲ್ಲ ಔಷಧಿಯ ಗುಣಗಳಿಂದಲೂ ಖ್ಯಾತಿ ಪಡೆದಿದೆ.

 

ತುಳಸಿಯಲ್ಲಿ 2 ವಿಧಗಳಿವೆ, ಹಸಿರು ತುಳಸಿಯನ್ನು ಲಕ್ಷ್ಮಿ ತುಳಸಿ ಎಂದೂ ನೇರಳೆ ಬಣ್ಣದ ತುಳಸಿಯನ್ನು ಕೃಷ್ಣ ತುಳಸಿಯೆಂದೂ ಕರೆಯಲಾಗುತ್ತದೆ.

 

 

ತುಳಸಿ ಗಿಡ ನಮ್ಮನ್ನು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ಸೋಂಕಿನಿಂದ ರಕ್ಷಿಸುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ತುಳಸಿಯ ಒಂದೆರಡು ಎಲೆಗಳನ್ನು ಪ್ರತಿದಿನ ತಿನ್ನುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಂದ ದೂರವಿರಬಹುದು.

 

ತುಳಸಿ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.ತುಳಸಿ ಎಣ್ಣೆಯನ್ನು ಬಹಳಷ್ಟು ಖಾಯಿಲೆಗಳನ್ನು ನಿವಾರಿಸಲು ಬಳಸುತ್ತಾರೆ.

 

ತುಳಸಿಯ ಎಣ್ಣೆಯು ಉಸಿರಾಟದ ವ್ಯವಸ್ಥೆಯಲ್ಲಿ ಮಹತ್ವದ ಪರಿಣಾಮ ಬೀರುತ್ತದೆ.

 

ಇದರಲ್ಲಿರುವ ಆ್ಯಂಟಿ ಒಕ್ಸಿಡೆಂಟ್ ಗಳು (antioxidants) ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಮಧುಮೇಹ, ಅತೀ ರಕ್ತದೊತ್ತಡ ವನ್ನು ಕಡಿಮೆ ಮಾಡುವಲ್ಲಿ ಕೂಡ ಸಹಾಯ ಮಾಡುತ್ತದೆ.

 

ತುಳಸಿ ಲಿನೋಲಿಕ್ ಆ್ಯಸಿಡ್ (linoleic acid) ಹೊಂದಿದ್ದು ಇದು ಚರ್ಮಕ್ಕೆ ಅತ್ಯುತ್ತಮ ಔಷಧಿಯಾಗಿದೆ.ಇದರ ಎಲೆಗಳಿಂದ ಪೇಸ್ಟ್ ಅಥವಾ ಪೌಡರ್ ತಯಾರಿಸಿ ಆಯುರ್ವೇದ ಮತ್ತು ಸೌಂದರ್ಯವರ್ಧಕಗಳಾಗಿ ಬಳಕೆ ಮಾಡುತ್ತಾರೆ. ಇದು ಚರ್ಮವನ್ನು ಶುಧ್ಧೀಕರಿಸಿ, ಕಲ್ಮಶವನ್ನು ಹೊರಹಾಕುವ ಗುಣವನ್ನು ಹೊಂದಿದೆ.ತುಳಸಿಯನ್ನು ಸಾಮಾನ್ಯವಾಗಿ ಕಹಿಬೇವು ಮತ್ತು ಅರಶಿಣದ ಜೊತೆ ಸೇರಿಸಿ ಮೊಡವೆ ಮತ್ತು ಕಪ್ಪುಕಲೆಗಳಿಗಳನ್ನು ಹೋಗಲಾಡಿಸಲು ಬಳಸಬಹುದು.

 

ತುಳಸಿ ಎಲೆಗಳಿಂದ ಬರುವ ಎಣ್ಣೆ ಆವಿಯಾಗುವ ಮತ್ತು ಸ್ಥಿರವಾಗಿರುವ ಎರಡೂ ಗುಣವನ್ನು ಹೊಂದಿದೆ, ಹಾಗಾಗಿ ಇದು ಅಲರ್ಜಿ, ಸೋಂಕು ಮತ್ತು ರೋಗಕಾರಕಗಳ ವಿರುದ್ಧ ಹೋರಾಡುತ್ತದೆ.

 

ಮನೆಮದ್ದಾಗಿ:

 

ತುಳಸಿಯು ಸಾಮಾನ್ಯ ಜ್ವರದಿಂದ ಹಿಡಿದು ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹರಡುವ ಮಾರಣಾಂತಿಕ ಖಾಯಿಲೆಗಳ ವಿರುದ್ಧವೂ ಹೋರಾಡುವ ಗುಣವನ್ನು ಹೊಂದಿದೆ.ಇದು ಒಂದು ಹಂತದವರೆಗೆ ಬಹಳಷ್ಟು ಖಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಾಯಕಾರಿಯಾಗಿದೆ.

 

ತುಳಸಿ ಎಲೆಗಳನ್ನು ನೀರಿನಲ್ಲಿ ಬೇಯಿಸಿ, ಅದಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ಇಮ್ಯುನಿಟಿ ಹೆಚ್ಚಿಸುವುದಲ್ಲದೆ, ಬ್ಯಾಕ್ಟೀರಿಯಾದಿಂದ ಬರುವ ರೋಗಗಳನ್ನು ತಡೆಗಟ್ಟುತ್ತದೆ ಮತ್ತು ಡೆಂಗ್ಯು ನಂತಹ ಮಾರಣಾಂತಿಕ ಕಾಯಿಲೆಯನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ.

 

ತುಳಸಿ ಎಲೆಗಳು, ಶುಂಠಿ ಮತ್ತು ಜಜ್ಜಿದ ಕಾಳುಮೆಣಸನ್ನು ಬಿಸಿ ನೀರಿಗೆ ಸೇರಿಸಿ ಕುಡಿಯುವುದರಿಂದ ದೇಹದ ಬಹಳಷ್ಟು ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸಬಹುದು.

 

 

ತುಳಸಿಯ ಉಪಯೋಗಗಳು ಇಲ್ಲಿವೆ

  • ದೇಹದ ಒಳಗಡೆ ಮತ್ತು ಹೊರಗಡೆ ಶುದ್ಧೀಕರಣ ಮಾಡುವ ಕೆಲಸವನ್ನು ಮಾಡುತ್ತದೆ, ರಕ್ತ ಶುದ್ಧಿ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಷ್ಟೇ ಅಲ್ಲದೇ ಚೆರ್ಮದ ಸಮಸ್ಯೆಗಳನ್ನೂ ನಿವಾರಿಸುತ್ತದೆ.
  • ಕಜ್ಜಿ, ತುರಿಕೆಗಳಿಗೆ, ಹುಳುಕಡ್ಡಿಗಳಿಗೆ ಕೂಡ ಇದು ಅತ್ಯುತ್ತಮ ಔಷಧ.
  • ತುಳಸಿಯನ್ನು ನೇರವಾಗಿ ಹಾಗೇ ತಿನ್ನಬಹುದು, ಪುಡಿ ಮಾಡಿ, ಪೇಸ್ಟ್ ಮಾಡಿ ಅಥವಾ ಔಷಧಿಯ ರೂಪದಲ್ಲಿ ಕೂಡ ಸೇವಿಸಬಹುದು.
  • ಜ್ವರ, ನೆಗಡಿ, ತಲೆನೋವು, ಗಂಟಲು ಕೆರೆತ, ಕೆಮ್ಮು ಗೆ ದಿವ್ಯೌಷಧ.ಅಲ್ಲದೆ, ಎದೆಯಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ.
  • ಇದು ಉಸಿರಾಟದ ಸಮಸ್ಯೆಗಳಿಗೆ, ಅಸ್ತಮಾಕ್ಕೆ ಒಳ್ಳೆಯ ಮದ್ದು.
  • ಒತ್ತಡವನ್ನು ಕಡಿಮೆ ಮಾಡಲು, ಇಮ್ಯನಿಟಿಯನ್ನು ಹೆಚ್ಚಿಸಲು, ಉತ್ತಮವಾದ ಜೀರ್ಣಕ್ರೀಯೆಗೆ ಸಹಾಯ ಮಾಡುತ್ತದೆ.
  • ಔಷಧೀಯ ಗುಣಗಳಿಂದ ಕೂಡಿದ ಎಣ್ಣೆ, ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳಿವೆ.
  • ಇದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.
  • ಯೂರಿಕ್ ಆ್ಯಸಿಡ್ ಅಂಶ ಇದ್ದು, ಇದು ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಗಟ್ಟುತ್ತದೆ.
  • ಇದು ಹಲ್ಲುಗಳಿಗೆ ಮತ್ತು ಒಸಡುಗಳ ಆರೋಗ್ಯಕ್ಕೆ ಉತ್ತಮ ಔಷಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top