fbpx
ಸಿನಿಮಾ

ಮಕ್ಕಳೊಂದಿಗೆ ಮಕ್ಕಳಾಗಿ ಸಿಂಪ್ಲಿಸಿಟಿ ಮೆರೆದ ಸ್ಟಾರ್ ನಿಖಿಲ್ ಗೌಡ

ತಮ್ಮದೇ ಪಕ್ಷದಲ್ಲಿ ಯುವ ನಾಯಕನಾಗಿ ಗುರುತಿಸಿಕೊಂಡಿದ್ದು ಆ ನಂತರ ಸಿನಿಮಾ ರಂಗದ ಮೇಲೆ ಮನಸೋತು ನಾಯಕ ನಟನಾಗಿ ಅಭಿನಯಿಸುತ್ತಿರುವ ನಿಖಿಲ್ ಗೌಡ ತನ್ನ ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಸೂರೆಗೊಂಡಿದ್ದರು ಇದೀಗ ಅವರ ಮುಂದಿನ ಚಿತ್ರ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗಿದ್ದು ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

 

 

ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ಬಹಳ ವೇಗವಾಗಿ ನಡೆಯುತ್ತಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ದೊಡ್ಡ ಪರದೆಯ ಮೇಲೆ ಚಿತ್ರ ಮೂಡಿ ಬರುವುದು ಹೀಗಿರುವಾಗ ಚಿತ್ರೀಕರಣದ ವೇಳೆ ನಿಖಿಲ್ ಗೌಡ ಅವರನ್ನು ಭೇಟಿ ಮಾಡಲು ಅನೇಕ ಪುಟ್ಟ ಮಕ್ಕಳು ಬಂದಿದ್ದರೂ ಅವರನ್ನು ಬಹಳ ಖುಷಿಯಿಂದಲೇ ಮಾತನಾಡಿಸಿದ ನಿಖಿಲ್ ಗೌಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊವನ್ನು ಪೋಸ್ಟ್ ಮಾಡಿ ಮಕ್ಕಳ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

 

 

ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ “ಮಕ್ಕಳು ತಮಗೆ ಅರಿವಿಲ್ಲದೆ ಮಾತನಾಡುವ ಮಾತು,ತುಂಟಾಟಗಳು ಎಲ್ಲರ ಗಮನ ಸೆಳೆಯುತ್ತವೆ.ಮಕ್ಕಳಿಗೆ ಸ್ವಾರ್ಥ,ಜಾತಿ-ಧರ್ಮ ಎಂಬುದು ಗೊತ್ತಿರದೆ ಎಲ್ಲರೊಡನ ಬೆರೆತು ಬೆಳೆಯುವ ಮಕ್ಕಳು ದೇಶದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವ ಮೂಲಕ ಮನುಕುಲಕ್ಕೆ ಉತ್ತಮ ಸಂದೇಶ ಸಾರುತ್ತಾರೆ. ಎಂದು ಬರೆದುಕೊಂಡಿದ್ದಾರೆ.

 

 

ನಿಖಿಲ್ ಗೌಡ ಅವರು ಮಕ್ಕಳೊಂದಿಗೆ ಸ್ನೇಹದೊಂದಿಗೆ ಇರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top