fbpx
ಆರೋಗ್ಯ

ಒತ್ತಡದಿಂದ ಹೊರಗಡೆ ಬರೋಕೆ ಈ 7 ವಿಷಯಗಳು ನೆನಪಲ್ಲಿ ಇಟ್ಕೊಳ್ಳಿ ..

ಒತ್ತಡದಿಂದ ಹೊರಬರಲು ಸುಲಭ ಸಪ್ತ ಸೂತ್ರಗಳು:

 

 

ನಾವು ಎಲ್ಲೇ ಇರಲಿ, ಹೇಗೇ ಇರಲಿ, ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲಿ ನಮ್ಮತನವನ್ನು ನಾವು ಪ್ರತಿಕ್ಷಣ ಸಾಬೀತುಪಡಿಸಬೇಕಾಗುತ್ತದೆ. ಈ ತರಾತುರಿಯಾಲ್ಲಿ ಅನಿವಾರ್ಯವಾಗಿ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಇದರಿಂದ ಹೊರಬರಲು ಇಲ್ಲಿವೆ 7 ಸುಲಭ ಮಾರ್ಗಗಳು:

 

1. ಚಿಕ್ಕ ಮಕ್ಕಳೊಡನೆ, ಸಾಕುಪ್ರಾಣಿಗಳೊಡನೆ ಆಡುವುದು. ಇದರಿಂದ ಒತ್ತಡ ನಿವಾರಣೆಯಾಗುವುದಲ್ಲದೆ ಮನಸು ಉಲ್ಲಾಸಗೊಳ್ಳುವುದು.

 

 

2. ಪ್ರೀತಿಪಾತ್ರರನ್ನು ಅಪ್ಪುವುದು. ಹೌದು ಸುಮಾರು 8 ನಿಮಿಷ ಅಥವಾ ಅದಕ್ಕುಹೆಚ್ಚು ಆತ್ಮೀಯರನ್ನು ಅಪ್ಪಿದಾಗ ಒತ್ತಡದ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಒತ್ತಡದಿಂದ ಹೊರಬರುವುದೇ ಅಲ್ಲದೇ ಹೊಸ ಹುರುಪು ಬರುತ್ತದೆ.

 

 

3. ಸಂಶೋಧನೆಯ ಪ್ರಕಾರ ಆರಾಮ ಕುರ್ಚಿಯಲ್ಲಿ ಕುಳಿತು ವಿಶ್ರಮಿಸುವುದು ಒತ್ತಡದಿಂದ ಹೊರ ಬರಲು ಒಳ್ಳೆಯ ಉಪಾಯ.

 

 

4. ನಿಮಗೆ ಆಶ್ಚರ್ಯವಾಗಬಹುದು, ಒಟ್ಟಿಗೆ ತುಂಬಾ ಕೆಲಸಗಳನ್ನು ಮಾಡುವಾಗ ಚ್ವೀಯಿಂಗ್ ಗಮ್ ತಿನ್ನುವುದರಿಂದ ನಾವು ಒತ್ತಡಕ್ಕೆ ಒಳಗಾಗುವುದಿಲ್ಲ.

 

5. ನೀವು ಕಂಪ್ಯೂಟರ್ ಜೊತೆ ತುಂಬಾ ಕೆಲಸ ಮಾಡುವವರಾದರೆ, ಒಂದು ಗಂಟೆಗೊಂದು ಸಾರಿ ಕಣ್ಣು ಮುಚ್ಚಿ 5 ನಿಮಿಷ ಸುಧಾರಿಸಿಕೊಳ್ಳುವುದರಿಂದ ಒತ್ತಡದಿಂದ ಹೊರಬರಬಹುದು. ಕೆಲಸವೆಲ್ಲಾ ಮುಗಿದ ಮೇಲೆ ರಾತ್ರಿ ಮಲಗುವ ವೇಳೆ ಕಣ್ಣಿಗೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ನಿದ್ದೆಯೂ ಚೆನ್ನಾಗಿ ಬರುತ್ತದೆ.

 

 

6. ಆಫೀಸ್ ನಲ್ಲಿ ತುಂಬಾ ಕೆಲಸದೊತ್ತಡ ಇರುವಾಗ, 10 ನಿಮಿಷಗಳ ಬಿಡುವು ಮಾಡಿಕೊಂಡು ಆಫೀಸ್ ನ ಹೊರಾಂಗಣದಲ್ಲಿ ಸುತ್ತಾಡಿ. ಸಹೋದ್ಯೋಗಿಗಳೊಡನೆ ಅವರು ಬಿಡುವಾಗಿದ್ದಲ್ಲಿ ಚಹಾ ವಿರಾಮ ತೆಗೆದುಕೊಂಡರೆ ಒತ್ತಡ ನಿವಾರಣೆಯಾಗುತ್ತದೆ ಅಲ್ಲದೇ ಕೆಲಸ ಮುಂದುವರಿಸಲು ಹೊಸ ಹುರುಪು ಬರುತ್ತದೆ.

 

 

7. ನಿಯಮಿತವಾಗಿ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮಾಡುವುದು ನಿಜಕ್ಕೂ ಒತ್ತಡ ನಿವಾರಣೆಗೆ ರಾಮಬಾಣ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top