fbpx
ದೇವರು

ಬ್ರಹ್ಮಚಾರಿ ಹನುಮಂತ ದೇವನಿಗೆ ಹೆಂಡತಿ ಇದ್ದಾಳೆ ಗೊತ್ತಾ ? ಆಕೆಗೊಂದು ದೇವಸ್ಥಾನ ಕಟ್ಟಿಸಿ ಪೂಜೆ ಮಾಡ್ತಾರೆ ಎಲ್ಲಿದೆ ಆ ದೇವಸ್ಥಾನ ತಿಳ್ಕೊಳ್ಳಿ

ಹನುಮಂತ ದೇವನ ಪತ್ನಿ ಸುವರ್ಚಲಾ ದೇವಿಯ ದೇವಸ್ಥಾನ ನಮ್ಮ ಭಾರತ ದೇಶದಲ್ಲಿ ಇದೆ ? ಎಲ್ಲಿದೆ ಎಂದು ನಿಮಗೆ ಗೊತ್ತಾ ?

 

 

ಹನುಮಂತ ದೇವರು ಮದುವೆಯಾದರೂ ಸಹ ಹೇಗೆ ಬ್ರಹ್ಮಚಾರಿ ಎಂದು ಕೇಳುತ್ತಾರೆ. ಈ ಕಥೆಯನ್ನು ಕೇಳಿ ಹನುಮಂತ ದೇವರ ಬಗ್ಗೆ ಇನ್ನಷ್ಟು ಗೌರವ ಮತ್ತು  ಭಕ್ತಿ ನಿಮಗೆ ಹೆಚ್ಚಾಗುತ್ತದೆ. ಇದೇನಿದು ವಿಚಿತ್ರ ಅನಿಸುತ್ತಿದೆಯೇ ? ಹೌದು, ಹನುಮಂತ ದೇವರಿಗೆ ಎಲ್ಲಾದರೂ ಮದುವೆ ಆಗಿದ್ದುಂಟೆ, ಅವನು ಆಜನ್ಮ ಬ್ರಹ್ಮಚಾರಿ ಅಲ್ಲವೇ ? ಎಂದು ಎಲ್ಲಾ ಕಡೆ ಹೇಳುವುದನ್ನು ಕೇಳಿದ್ದೇವೆ. ಲಂಕೆಯನ್ನು ಧ್ವಂಸ ಮಾಡಿ, ಲಂಕಾ ಸಾಗರದಲ್ಲಿ ಮಿಂದೆದ್ದ ಹನುಮಂತನ ಬೆವರು ನುಂಗಿ ಮೀನಾಗಿ  ಹುಟ್ಟಿದ ಮಕರ ಧ್ವಜನ ಕಥೆಯನ್ನು  ಆಗಾಗ ಕೇಳುತ್ತಿದ್ದೇವೆ. ಆದರೆ ಹನುಮಂತನಿಗೂ ಸಹ ಒಬ್ಬಳು ಹೆಂಡತಿ ಇದ್ದಳು. ಅವಳಿಗೆ ಒಂದು ದೇವಸ್ಥಾನ ಈಗಲೂ ಇದೆ. ಎಂದು ನಿಮಗೆ ಗೊತ್ತೇ ?ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ.

 

ಪರಾಶರ ಸಂಹಿತೆಯಲ್ಲಿದೆ ಈ ಕಥೆ.

ಹನುಮಂತನ ಹೆಂಡತಿ ಸೂರ್ಯನ ಮಗಳು ಸುವರ್ಚಲಾ ದೇವಿ. ಪರಾಶರ ಸಂಹಿತೆಯಲ್ಲಿ ಪರಾಶರ ಮಹರ್ಷಿಗಳ ಪ್ರಕಾರ ಸೂರ್ಯದೇವ ಹನುಮಂತನ ಗುರು. ಎಲ್ಲಾ ವೇದಾಭ್ಯಾಸಗಳು ಮಾಡಿರುವ ಹನುಮಂತನಿಗೆ, ನವ ವ್ಯಾಕರಣ ಒಂದು ಓದುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಅದನ್ನು ಓದಬೇಕು ಎಂದರೆ ಅವನು ಸಂಸಾರಸ್ಥನಾಗಿರಬೇಕು, ಅಂದರೆ ಮದುವೆಯಾಗಲೇಬೇಕು. ಇನ್ನೂ ಲೋಕದ ಕಲ್ಯಾಣಕ್ಕಾಗಿ ಹನುಮಂತನು ಈ ಗ್ರಂಥವನ್ನು ಹೋದಲೇ  ಬೇಕಿರುತ್ತದೆ. ಹಾಗಾಗಿ ತ್ರಿಮೂರ್ತಿಗಳು ಸೂರ್ಯ ದೇವನ ಬಳಿ ಮೊರೆ ಹೋಗುತ್ತಾರೆ.

 

 

ಆಗ ಸೂರ್ಯ ದೇವನು ಒಂದು ಉಪಾಯವನ್ನು ಮಾಡಿ ಹನುಮಂತನ ಹೆಂಡತಿಯಾಗುವುದಕ್ಕೆ ಒಬ್ಬಳು ಸೌಂದರ್ಯದಿಂದ ಕೂಡಿದ ಸುಂದರವಾದ ಯುವತಿಯನ್ನು ತನ್ನ ರಶ್ಮಿಯಿಂದಲೇ (ಕಿರಣದಿಂದ) ಹುಟ್ಟಿಸುತ್ತಾನೆ. ಅವಳೇ ಸುವರ್ಚಲಾ ದೇವಿ. ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನು ಮದುವೆಯಾಗು ಎಂದು ಹನುಮಂತ ದೇವನನ್ನು ಕೇಳಿಕೊಳ್ಳುತ್ತಾನೆ.

ಆಯೋ ನಿಜೆಯಾಗಿ ಹುಟ್ಟಿದ ಸುವರ್ಚಲಾ ದೇವಿಯ ಮದುವೆ ಅಷ್ಟು ಸುಲಭವಾಗಿ ಆಗಿರಲಿಲ್ಲ ,ಅವಳ ವರ್ಚಸ್ಸು ತಂದೆ ಸೂರ್ಯನಿಂದ ಬಂದಿದ್ದು.ಆ ವರ್ಚಸ್ಸನ್ನು ತಡೆದುಕೊಳ್ಳುವ ಶಕ್ತಿ ಇದ್ದದ್ದು ಜೀವನ ಪರ್ಯಂತ ಬ್ರಹ್ಮಚಾರ್ಯ ಪಾಲಿಸಿ ಬಂದ ಹನುಮಂತನಿಗೆ ಮಾತ್ರ. ಎಲ್ಲರೂ ಹನುಮಂತನನ್ನು ಮದುವೆಗೆ ಒಪ್ಪಿಸುವುದಕ್ಕೆ ಹರ ಸಾಹಸ ಪಡಬೇಕಾಯಿತು.

 

 

ಯಾರು ಎಷ್ಟೇ ಹೇಳಿದರೂ ಹನುಮಂತನು ಒಪ್ಪದೇ ಇದ್ದಾಗ , ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನೇ ಮದುವೆಯಾಗು ಎಂದು ಕೇಳಿಕೊಳ್ಳುತ್ತಾನೆ. ಆಗ ಹನುಮಂತನು ಹಿಂಜರಿಯುತ್ತಾನೆ. ಮದುವೆಯಾದ ಮೇಲೂ ಹನುಮಂತ ಬ್ರಹ್ಮಚಾರಿಯಾಗಿಯೇ ಉಳಿಯುವ ಹಾಗೆ ಸೂರ್ಯದೇವ ವರವನ್ನು ಕೊಡುತ್ತಾನೆ.

ಲೋಕ ಕಲ್ಯಾಣಕ್ಕೋಸ್ಕರ ನಿನ್ನ ಈ ಮದುವೆ ಅಷ್ಟೇ. ಮುಂದೆ ನೀನು ಬ್ರಹ್ಮನಾದಾಗ  ನಿನ್ನ “ವಾಣಿ” ಯಾಗುತ್ತಾಳೆ . ನನ್ನ ಮಗಳು ಅಂತ ಹೇಳುತ್ತಾನೆ. ಸೂರ್ಯದೇವ ಅದಕ್ಕೆ ಹನುಮಂತನು ಒಪ್ಪಿಕೊಳ್ಳುತ್ತಾನೆ. ಮದುವೆಯಾದ ಮರುಕ್ಷಣವೇ ಸುವರ್ಚಲಾ ದೇವಿ ತಪಸ್ಸಿಗೆ ಹೊರಟು ಹೋಗುತ್ತಾಳೆ.

 

 

ಜೇಷ್ಠ ಶುದ್ಧ ದಶಮಿಯ ದಿನ ಸುವರ್ಚಲಾ ದೇವಿ ಮತ್ತು ಹನುಮಂತನ ಮದುವೆ ಆಗುತ್ತದೆ. ಇಂದಿಗೂ ದಕ್ಷಿಣ ಭಾರತದಲ್ಲಿ ಈಕೆಯನ್ನು ಪೂಜೆ ಮಾಡುತ್ತಾರೆ. ತೆಲಂಗಾಣದ ಹೈದರಾಬಾದಿನಲ್ಲಿ ಸುವರ್ಚಲಾ ದೇವಿಯ ದೇವಸ್ಥಾನ ನೆಲೆಸಿದೆ.

ಹೈದರಾಬಾದಿನಿಂದ ಇನ್ನೂರ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸುವರ್ಚಲಾ ದೇವಿಯ ದೇವಸ್ಥಾನವಿದೆ. ಈ ದೇವಿ ಮತ್ತು ಹನುಮಂತನನ್ನು  ಈ ರೂಪದಲ್ಲಿ ಪೂಜೆ ಮಾಡಿದರೆ ಯಾವತ್ತೂ ಗಂಡ ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಬರದೇ ಜೀವನ ಪೂರ್ತಿ ಸಂಸಾರದಲ್ಲಿ ಖುಷಿಯಾಗಿ ಇರುತ್ತಾರಂತೆ. ಹೀಗಿದೆ ಹನುಮಂತನು ಮದುವೆಯಾದ ಸುವರ್ಚಲಾ ದೇವಿಯ ಕಥೆ ಮತ್ತು ಮಹಿಮೆ ಕೇಳಿ. ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ಮತ್ತು ಸುಖವಾದ ಸಂಸಾರ ಜೀವನಕ್ಕೆ ಈ ದೇವಿಯ ದರ್ಶನವನ್ನು ಅವಶ್ಯವಾಗಿ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top