fbpx
ಸಮಾಚಾರ

ಸಾಲದ ಸುಳಿಯಲ್ಲಿದ್ದರೂ ಮೂರನೇ ಮದುವೆಗೆ ಮಲ್ಯ ತಯಾರಿ: ಹುಡುಗಿ ಯಾರು ಗೊತ್ತೇ?  

ವಿವಿಧ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಲಂಡನ್ ನಲ್ಲಿ ಶೀಘ್ರದಲ್ಲಿಯೇ ಮಾಜಿ ಗಗನಸಖಿ, ಗೆಳತಿ ಪಿಂಕಿ ಲಾಲ್ವಾನಿ ಅವರನ್ನು ವಿವಾಹವಾಗಲಿದ್ದಾರೆ ಎಂಬುದಾಗಿ ಹಲವಾರು ಮಾಧ್ಯಮಗಳು ವರದಿ ಮಾಡಿವೆ.

 

 

ವಿಜಯ್ ಮಲ್ಯ ಈಗಾಗಲೇ ಎರಡು ಮದುವೆಯಾಗಿದ್ದಾರೆ. ಸಮೀರಾ ತಯ್ಯಬ್ಜೀ ಹಾಗೂ ರೇಖಾ ಮಲ್ಯರನ್ನು ಮಲ್ಯ ವಿವಾಹವಾಗಿದ್ದು, ಇದೀಗ 3ನೇ ಮದುವೆ ಸಿದ್ಧತೆಯಲ್ಲಿರುವುದಾಗಿ ವರದಿ ತಿಳಿಸಿದೆ.

 

 

1993ರಲ್ಲಿ ರೇಖಾ ಮಲ್ಯ ಅವರನ್ನು ವಿಜಯ್ ಮಲ್ಯ ಕಾನೂನು ಬದ್ಧವಾಗಿಯೇ ವಿವಾಹವಾಗಿದ್ದರು. ಮಲ್ಯಗೆ ಸಿದ್ದಾರ್ಥ್, ಲಿಯೆನ್ನಾ ಹಾಗೂ ತಾನ್ಯಾ ಸೇರಿದಂತೆ ಮೂವರು ಮಕ್ಕಳಿದ್ದಾರೆ.

 

 

ವಿಜಯ್ ಮಲ್ಯ ಈಗಾಗಲೇ ಎರಡು ಮದುವೆಯಾಗಿದ್ದು, ಇದೀಗ ಸಾಲದ ಸುಳಿಯಲ್ಲಿ ಸಿಲುಕಿದ್ದರೂ ಮೂರನೇ ಮದುವೆಗಾಗಿ ತಯಾರಿ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಈ ಮುಂಚೆ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿಂಕಿ ಲಲ್ವಾನಿ ಎಂಬವರನ್ನು ಮಲ್ಯ ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರೂ ಒಟ್ಟಾಗಿಯೇ ಇದ್ದು, ತಾವು ಜೊತೆಯಾಗಿದ್ದುದರ ವಾರ್ಷಿಕೋತ್ವವನ್ನೂ ನಡೆಸಿದ್ದರು. ಮಲ್ಯ ಈ ಮುಂಚೆ ಸಮೀರಾ ತಯ್ಯಬ್ಜೀ ಮತ್ತು ರೇಖಾ ಮಲ್ಯರನ್ನು ಮದುವೆಯಾಗಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top