fbpx
ದೇವರು

ಮಹಾಭಾರತದಲ್ಲಿ ಹೇಳಿರೋ ಪ್ರಕಾರ ಉಗುರು ಮತ್ತು ಕೂದಲನ್ನು ಕತ್ತರಿಸೋಕೇ ಈ ದಿನಗಳು ಮಾತ್ರ ಸೂಕ್ತ ಇಲ್ಲ ಅಂದ್ರೆ ಮನೆಗೆ ದರಿದ್ರವಂತೆ

ಮಹಾಭಾರತದಲ್ಲಿ ಹೇಳಿರುವ ಪ್ರಕಾರ ವಾರದಲ್ಲಿ ಕೇವಲ ಎರಡು ದಿನ ಮಾತ್ರ ಉಗುರು ಮತ್ತು ಕೂದಲನ್ನು ಕತ್ತರಿಸುವುದಕ್ಕೆ ಶುಭ. ಆವು ಯಾವ ದಿನಗಳು ಎಂದು ನಿಮಗೆ ಗೊತ್ತೇ ?

 

 

ಉಗುರನ್ನು ಯಾವಾಗ ಕತ್ತರಿಸಬೇಕು ? ಎಷ್ಟೇ ಕತ್ತರಿಸಿದರೂ ಮತ್ತೆ ಮತ್ತೆ ಹುಟ್ಟಿ ಬರುವಂಥದ್ದು ಉಗುರು ಮತ್ತು ಕೂದಲು. ಆರೋಗ್ಯದ ದೃಷ್ಟಿಯಿಂದ ಇವೆರಡನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅವಶ್ಯಕ. ಹಾಗೆಂದು ನಿಮಗೆ ಅನುಕೂಲವಾದ ದಿನ ಉಗುರು ತೆಗೆಯುವುದು ಕೂದಲಿಗೆ ಕತ್ತರಿ ಹಾಕುವುದು ಒಳ್ಳೆಯದಲ್ಲ. ಮಹಾಭಾರತದಲ್ಲಿ ಉಗುರು ಮತ್ತು ಕೂದಲನ್ನು ಎಂದು ಕತ್ತರಿಸಿದರೆ ಶುಭ ಎಂದು ಉಲ್ಲೇಖಿಸಲಾಗಿದೆ.

ಮಕ್ಕಳಿಗೆ ಶಾಲೆ, ದೊಡ್ಡವರಿಗೆ ಕಚೇರಿ, ಕೆಲಸಕ್ಕೆ ಸ್ವಚ್ಛವಾಗಿ ಹೋಗಬೇಕು ಎನ್ನುವ ಉದ್ದೇಶದಿಂದ, ಅನೇಕ ಜನರು ಸೋಮವಾರ ಬೆಳಗ್ಗೆ ಎದ್ದ ತಕ್ಷಣ ಉಗುರುಗಳನ್ನು ಕತ್ತರಿಸಲು ಮುಂದಾಗುತ್ತಾರೆ. ಆದರೆ ಸೋಮವಾರದ ದಿನ ಈ ಕೆಲಸ ಮಾಡುವುದು ಯೋಗ್ಯವಲ್ಲ.

 

 

ಸೋಮವಾರ ಕ್ಷೌರ ಮಾಡುವುದರಿಂದ ಮಾನಸಿಕ ಸಮಸ್ಯೆಗಳು ಹಾಗೂ ಸಂತಾನ ಸಮಸ್ಯೆ ಎದುರಾಗುತ್ತವೆ ಎಂದು ಪುರಾಣಗಳು ಹೇಳುತ್ತವೆ.

ಮಂಗಳವಾರ ಕೂಡ ಕ್ಷೌರ ಮಾಡಿಸಿಕೊಳ್ಳುವುದಕ್ಕೂ ಶುಭವಲ್ಲ. ಇದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಬುಧವಾರ ಉಗುರು ಕತ್ತರಿಸಲು ಹಾಗೂ ಕ್ಷೌರಕ್ಕೆ ಉತ್ತಮವಾದ ದಿನ. ಈ ದಿನ ಉಗುರು ಹಾಗೂ ಕೂದಲು ತೆಗೆಯುವುದರಿಂದ ಸಂಪತ್ತು ಜಾಸ್ತಿಯಾಗುವುದಲ್ಲದೇ, ಕುಟುಂಬದಲ್ಲಿ ಶಾಂತಿಯ ಕೂಡ ನೆಲೆಸುತ್ತದೆಯಂತೆ.

 

 

ಹಾಗೆ ಗುರುವಾರ ಕೂದಲು ಹಾಗೂ ಉಗುರನ್ನು ಕತ್ತರಿಸಬೇಡಿ ಎನ್ನುತ್ತದೆ ಶಾಸ್ತ್ರ. ಗುರುವಿನ ದಿನವಾಗಿರುವುದರಿಂದ ಗುರುವಾರ ಅಶುಭ ಕೆಲಸಗಳನ್ನು ಮಾಡಿದರೆ ಜ್ಞಾನ ವೃದ್ಧಿಯಾಗುವುದಿಲ್ಲ.ಸಂಪತ್ತು ಹಾಗೂ ಸಂತಾನಕ್ಕೂ ತೊಂದರೆ ಎನ್ನುತ್ತದೆ ಶಾಸ್ತ್ರ.

 

 

ಶುಕ್ರವಾರ ಈ ಕೆಲಸಕ್ಕೆ ಒಳ್ಳೆಯದು, ಶುಕ್ರ ದೇವ ಸೌಂದರ್ಯದ ಪ್ರತೀಕ , ಹಾಗಾಗಿ ಅಂದು ದೈಹಿಕ ಸ್ವಚ್ಛತೆ ಮಾಡಿಕೊಂಡರೆ ಶುಕ್ರ ದೇವ ಪ್ರಸನ್ನನಾಗುತ್ತಾನೆ. ಹಾಗೆ ಮನೆಯಲ್ಲಿ ಲಕ್ಷ್ಮೀ ದೇವಿಯೂ ಕೂಡ ನೆಲೆಸುತ್ತಾಳೆ ಎಂದು ಹೇಳಿದ್ದಾರೆ.

ಶನಿವಾರ ಕ್ಷೌರ ಮಾಡಿಕೊಂಡರೆ ಸಾವನ್ನು ಬಳಿಗೆ ಕರೆದಂತೆ. ಇನ್ನೂ ರಜಾ ದಿನ ಭಾನುವಾರವನ್ನು ಈ ಕೆಲಸಕ್ಕೆಂದೇ ಅನೇಕರು ಮೀಸಲಿಡುತ್ತಾರೆ. ಆದರೆ ಭಾನುವಾರ ಈ ಕೆಲಸ ಮಾಡುವುದು ಶುಭ ಅಲ್ಲ ಎಂದು ಹೇಳುತ್ತದೆ ಶಾಸ್ತ್ರ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top